6 ವರ್ಷದ ಬಾಲಕಿಯ ಮೃತದೇಹ ಅರೆನಗ್ನಾ ಸ್ಥಿತಿಯಲ್ಲಿ ಪತ್ತೆ : ಅತ್ಯಾಚಾರದ ಶಂಕೆ
ಹರಿಯಾಣ: ನಾಪತ್ತೆಯಾಗಿದ್ದ 6 ವರ್ಷದ ಬಾಲಕಿಯ ಮೃತದೇಹವು ಅರೆನಗ್ನಾ ಸ್ಥಿತಿಯಲ್ಲಿ ಪತ್ತೆಯಾಗಿದೆ. ಚಂಡೀಗಢದ ಹಾಲೋ ಮಾಜ್ರಾದಲ್ಲಿ ಬಾಲಕಿಯ ಶವಪತ್ತೆಯಾಗಿದೆ. ಶುಕ್ರವಾರ ಆಟವಾಡಲು ಮನೆಯಿಂದ ಹೊರಗಡೆ ತೆರಳಿದ್ದ ಬಾಲಕಿಯು ನಾಪತ್ತೆಯಾಗಿದ್ದಳು. ಕುಟುಂಬಸ್ಥರು ಎಷ್ಟೇ ಹುಡುಕಾಟ ನಡೆಸಿದ್ರೂ ಬಾಲಕಿ ಪತ್ತೆಯಾಗಿರಲಿಲ್ಲ. ಹೀಗಾಗಿ ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಬಳಿಕ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು ಬಾಲಕಿಯ ಶವ ಪತ್ತೆ ಹೆಚ್ಚಿದ್ದಾರೆ.
ತಮಿಳುನಾಡು ವಿಧಾನಸಭಾ ಚುನಾವಣೆ : ಟಿಕೆಟ್ ಗಾಗಿ ಸಂದರ್ಶನ ಎದುರಿಸಿದ ಸ್ಟಾಲಿನ್ ಪುತ್ರ..!
ಇನ್ನೂ ಮೃತದೇಹದ ಸ್ಥಿತಿ ಗಮನಸಿರುವ ಪೊಲೀಸರು ಲೈಂಗಿಕ ದೌರ್ಜನ್ಯ ನಡೆದಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವೈದ್ಯಕೀಯ ಪರೀಕ್ಷೆಯ ನಂತರವೇ ನಿಖರ ಕಾರಣ ತಿಳಿದುಬರಲಿದೆ. ಆದ್ರೆ ಮೇಲ್ನೋಟಕ್ಕೆ ಮಗುವಿನ ಮೇಲೆ ಅತ್ಯಾಚಾರವೆಸಗಿ ಬಳಿಕ ದೇಹವನ್ನ ಬಿಸಾಡಿ ಹೋಗಿರುವಂತೆ ತಿಳಿದುಬಂದಿದೆ. ಇನ್ನೂ ಸಂತ್ರಸ್ತ ಬಾಲಕಿ ಸರ್ಕಾರಿ ಅಂಗನವಾಡಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು ಎನ್ನಲಾಗಿದೆ.
Karnataka Budget 2021 Live : ಇಲಾಖೆವಾರು ಅನುದಾನ ಹಂಚಿಕೆ ವಿವರ
ಶುಕ್ರವಾರ ನಾಪತ್ತೆಯಾಗಿದ್ದ ಬಾಲಕಿಯ ಮೃತದೇಹವು ಶನಿವಾರ ಕಾಡಿನಲ್ಲಿ ಪತ್ತೆಯಾಗಿತ್ತು. ಈ ಸಂಬಂಧ ಪೊಲೀಸರು ಅಪರಿಚಿತರ ವಿರುದ್ಧ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ಧಾರೆ. ಇತ್ತ ಮಗಳ ಸಾವಿನಿಂದ ಆಗಾತಕ್ಕೆ ಒಳಗಾಗಿದ್ದ ಕುಟುಂಬಸ್ಥರು ರಸ್ತೆ ತಡೆಹಿಡಿದು ಆರೋಪಿಗಳನ್ನ ಬಂಧಿಸಿ ನ್ಯಾ ಒದಗಿಸುವಂತೆ ಪ್ರತಿಭಟನೆ ನಡೆಸಿ ಆಕ್ರೋಶವನ್ನೂ ಹೊರಹಾಕಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನಾಯಕನ ಮೇಲೆ ಗುಂಡಿನ ದಾಳಿ : TMC ಕೈವಾಡವಿದ್ಯಾ..?
ಬೈದು ಬುದ್ದಿವಾದ ಹೇಳಿದ ಶಿಕ್ಷಕನಿಗೆ ಗುಂಡಿಟ್ಟು ಕೊಂದ ಪಿಯುಸಿ ವಿದ್ಯಾರ್ಥಿ..!
Karnataka Budget 2021 Live : ಮಹಿಳೆಯರಿಗೆ ವಿಶೇಷ ಯೋಜನೆಗಳು
Karnataka Budget Live 2021: ಪೆಟ್ರೋಲ್, ಡೀಸೆಲ್ ಮೇಲೆ ತೆರಿಗೆ ಹೆಚ್ಚಳ ಇಲ್ಲ
Karnataka Budget Live : ಕೃಷಿಗೆ 31,028 ಕೋಟಿ, ಬಿಎಸ್ ವೈ `ಮಠ ಮಂತ್ರ’