ಬೈದು ಬುದ್ದಿವಾದ ಹೇಳಿದ ಶಿಕ್ಷಕನಿಗೆ ಗುಂಡಿಟ್ಟು ಕೊಂದ ಪಿಯುಸಿ ವಿದ್ಯಾರ್ಥಿ..!

1 min read

ಬೈದು ಬುದ್ದಿವಾದ ಹೇಳಿದ ಶಿಕ್ಷಕನಿಗೆ ಗುಂಡಿಟ್ಟು ಕೊಂದ ಪಿಯುಸಿ ವಿದ್ಯಾರ್ಥಿ..!

ಉತ್ತರ ಪ್ರದೇಶ : ದ್ವಿತೀಯ ಪಿಯುಸಿ ವಿದ್ಯಾರ್ಥಿಯೊಬ್ಬ ತನಗೆ ಬೈದು ಬುದ್ದಿವಾದ ಹೇಳಿದಕ್ಕೆ ಶಿಕ್ಷಕನನ್ನೇ ಗುಂಡಿಟ್ಟು ಕೊಲೆ ಮಾಡಿರುವ ಘಟನೆ ಉತ್ತರಪ್ರದೇಶದ ಗಾಝಿಯಾಬಾದ್ ನಲ್ಲಿ ನಡೆದಿದೆ. ದುರ್ನಡತೆಯ ಕಾರಣಕ್ಕಾಗಿ ತನ್ನನ್ನು ಶಿಕ್ಷಕರು ಬೈದಿದ್ದಾರೆ ಎಂಬ ಕಾರಣಕ್ಕೆ ಈ ವಿದ್ಯಾರ್ಥಿ ಇಂತಹ ಕೃತ್ಯವೆಸಗಿದ್ದಾನೆ. ಸರಸ್ವತಿ ವಿಹಾರ ಕಾಲನಿಯಲ್ಲಿರುವ ಖಾಸಗಿ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ತರಗತಿ ಮುಗಿಸಿ ಮೋಟರ್‌ಸೈಕಲ್‌ನಲ್ಲಿ ತೆರಳುತ್ತಿದ್ದ ಸಚಿನ್ ತ್ಯಾಗಿಯತ್ತ ವಿದ್ಯಾರ್ಥಿ ಗುಂಡು ಹಾರಿಸಿದ್ದಾನೆ ಎನ್ನಲಗಿದೆ.

ಮಿಲಿಟರಿ ಕ್ಯಾಂಪ್ ನಲ್ಲಿ ಸ್ಫೋಟ : 20 ಮಂದಿ ಮೃತ

ಇತರ ವಿದ್ಯಾರ್ಥಿಗಳ ಜತೆ ಅನುಚಿತವಾಗಿ ವರ್ತಿಸದಂತೆ ಶಿಕ್ಷಕ ಈ ವಿದ್ಯಾರ್ಥಿಗೆ ಬುದ್ಧಿ ಹೇಳಿದ್ದರು. ಇದರಿಂದ ಸಿಟ್ಟಿಗೆದ್ದ ವಿದ್ಯಾರ್ಥಿಯು ದ್ವೇಷ ಸಾಧಿಸಿ ಗುಂಡು ಹಾರಿಸಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಇರಾಜ್ ರಾಜಾ ಹೇಳಿದ್ದಾರೆ. ಇನ್ನೂ ಈತನ ಕೃತ್ಯಕ್ಕೆ ಇತರೇ ನಾಲ್ವರು ವಿದ್ಯಾರ್ಥಿಗಳು ಸಾಥ್ ನೀಡಿದ್ದ ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇನ್ನೂ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರನ್ನ ವಧಕ್ಕೆ ಪಡೆದು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ ಎನ್ನಲಾಗಿದೆ.

ಮಹಿಳಾ ದಿನಾಚರಣೆಯಂತೆ ‘ ವಿಶ್ವ ಪುರುಷರ ದಿನಾಚರಣೆ’ಗೆ ಬೇಡಿಕೆಯಿಟ್ಟ ಬಿಜೆಪಿ ನಾಯಕಿ..!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd