ಉತ್ತರಪ್ರದೇಶ : ಚಲಿಸುವ ಬಸ್ ನಲ್ಲಿ ಮಹಿಳೆ ಮೇಲೆ ಅತ್ಯಾಚಾರ ನಡೆದಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಪ್ರತಾಪ್ ಗಢದಿಂದ ನೋಯ್ಡಾಕ್ಕೆ ಬಸ್ ಸಂಚಾರ ಮಾಡುತ್ತಿತ್ತು, ಇದೆ ಬಸ್ ನಲ್ಲಿ 25 ವರ್ಷದ ಮಹಿಳೆ ತನ್ನ ಇಬ್ಬರು ಮಕ್ಕಳೊಂದಿಗೆ ಪ್ರಯಾಣ ಮಾಡುತ್ತಿದ್ದಳು. ಲಕ್ಕೋ – ಮುಧುರಾ ಮಾರ್ಗದ ಮದ್ಯೆ ಬಸ್ ಹಿಂಬದಿ ಸೀಟಿನಲ್ಲಿ ನಲ್ಲಿ ಮಹಿಳೆ ಮೇಲೆ ಅತ್ಯಾಚಾರ ವೆಸಗಿದ್ದಾರೆ. ಮದ್ಯರಾತ್ರಿ ಎರಡು ಗಂಟೆಗೆ ಬಸ್ ಚಾಲಕರಲ್ಲಿ ಒಬ್ಬ ಮಲಗಿದ್ದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದಾನೆ. ಈ ವೇಳೆ ಬಸ್ ನಲ್ಲಿ ಇದ್ದ 12 ಜನ ಪ್ರಯಾಣಿಕರು ಗಾಡ ನಿದ್ರೆಗೆ ಜಾರಿದ್ದರು ಎಂದು ಹೇಳಾಗುತ್ತಿದೆ.
ಕಾಮುಕ ಚಾಲಕ ಅತ್ಯಾಚಾರದ ವೇಳೆ ಬಾಯಿ ಮಾಡಿದರೆ ಕೊಲೆ ಮಾಡುವದಾಗಿ ಬೆದರಿಕೆ ಹಾಕಿದ್ದಾನೆ. ಇವನಾದ ಮೇಲೆ ಮತ್ತೊಬ್ಬ ಚಾಲಕ ಅತ್ಯಾಚಾರ ವೆಸಗಿದ್ದಾನೆ. ಘಟನೆ ಸಂಬಂಧಿಸಿದಂತೆ ಬಿಜ್ನೋರ್ ಜಿಲ್ಲೆಯ ಅಮಿತ್ ಅಲಿಯಾಸ್ ಮಯೂರಿ ಎಂಬ ಕಾಮಕನನ್ನು ಬಂಧಿಸಲಾಗಿದೆ. ಇನ್ನೊಳಿದ ಆರೋಪಿಯನ್ನು ನೋಯ್ಡಾ ಸೆಕ್ಟರ್ 20 ಜನರ ಪೊಲೀಸ್ ತಂಡ ಶೋಧನೆ ನಡೆಸಿದ್ದಾರೆ.