ನಾಡಪ್ರಭು ಕೆಂಪೇಗೌಡ ಪ್ರತಿಮೆ ಅನಾವರಣದ ಅಂಗವಾಗಿ, ಸಕಲೇಶಪುರ ಇತಿಹಾಸದಲ್ಲಿ ಮೊದಲ ಬಾರಿಗೆ ಹೇಮಾವತಿ ನದಿಯಲ್ಲಿ ಗಂಗಾ ಆರತಿ ಕಾರ್ಯಕ್ರಮ ಆಯೋಜಿಸಲಾಯಿತು. ಈ ಐತಿಹಾಸಿಕ ಪೂಜಾ ಕಾರ್ಯಕ್ರಮದಲ್ಲಿ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರು ಭಾಗವಹಿಸಿದರು.
ಆದಿಚುಂಚನಗಿರಿ ಮಹಾ ಸಂಸ್ಥಾನದ ಪೀಠಾಧಿಪತಿ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ಸಕಲೇಶಪುರ ಆಲೂರು ಕಟ್ಟಾಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಮಂಜುನಾಥ್ ರವರು ಭಕ್ತಿಪೂರ್ವಕವಾಗಿ ಸ್ವಾಗತಿಸಿದರು. ಸ್ವಾಮೀಜಿಗಳು ಹೇಮಾವತಿ ನದಿಯ ಮಧ್ಯದಲ್ಲಿ ತಯಾರಿಸಿದ ಸುಂದರವಾದ ಸಭಾಂಗಣದಲ್ಲಿ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಬ್ರಹ್ಮ ರಥೋತ್ಸವ, ಸಕಲೇಶ್ವರ ದೇವಸ್ಥಾನ ಹಾಗೂ ಹೊಳೆಮಲ್ಲೇಶ್ವರ ಸ್ವಾಮಿ ದೇವಸ್ಥಾನಗಳಲ್ಲಿ ಪೂಜೆಗಳು ನಡೆಯಿತು. ನಂತರ ಹೋಮ ಪೂಜೆ ಮತ್ತು ಗಂಗಾ ಆರತಿ ಕಾರ್ಯಕ್ರಮವು ನದಿಯ ತಟದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಶಾಸಕರಾದ ಮಂಜುನಾಥ್, ಮುರಳಿ ಮೋಹನ್, ಜೈ ಮಾರುತಿ, ಹೆಚ್ ಕೆ ಕುಮಾರಸ್ವಾಮಿ, ಚಂಚಲ ಕುಮಾರಸ್ವಾಮಿ, ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್, ನಾಗೇಶ್, ಸೋಮೇಶ್ವರ ಸ್ವಾಮೀಜಿ, ಕೈಲಾಸನಾಥ ಸ್ವಾಮೀಜಿ ಮತ್ತು ಇತರ ಪ್ರಮುಖ ವ್ಯಕ್ತಿಗಳು ಭಾಗವಹಿಸಿದ್ದರು.
ಈ ಕಾರ್ಯಕ್ರಮವು ಸಕಲೇಶಪುರದ ಇತಿಹಾಸದಲ್ಲಿ ಮಹತ್ವಪೂರ್ಣ ಘಟನೆಗೆ ಸಾಕ್ಷಿಯಾಯಿತು ಮತ್ತು ಸ್ಥಳೀಯ ಜನರು ಇದನ್ನು ಕಣ್ಮನ ತುಂಬಿಕೊಂಡರು.