Bengaluru : ಪ್ರತಿಷ್ಟಿತ ಖಾಸಗಿ ಕಾಲೇಜು ವಿದ್ಯಾರ್ಥಿಗಳ ಬಳಿ 1 ಕೆ.ಜಿ ಗೂ ಹೆಚ್ಚು ಗಾಂಜಾ ಪತ್ತೆ
ಬೆಂಗಳೂರು : ಪ್ರತಿಷ್ಟಿತ ಖಾಸಗಿ ಕಾಲೇಜು ವಿದ್ಯಾರ್ಥಿಗಳ ಬಳಿ 1 ಕೆ.ಜಿ ಗೂ ಹೆಚ್ಚು ಗಾಂಜಾ ಪತ್ತೆಯಾಗಿದೆ.. ಗಾಂಜಾ ಪತ್ತೆಯಾಕ್ತಿದ್ದಂತೆ ಹುಡುಗರನ್ನ ಲಾಕ್ ಮಾಡಿ ಸ್ಥಳೀಯರು ವಿಡಿಯೋ ಚಿತ್ರೀಕರಿಸಿಕೊಂಡಿದ್ದಾರೆ…
ಬೆಂಗಳೂರಿನ ಬ್ಯಾಡರಹಳ್ಳಿಯ ಇನ್ ಕಂಟ್ಯಾಕ್ಸ್ ಲೇಔಟ್ ಬಳಿ ಈ ಘಟನೆ ನಡೆದಿದೆ.. ಮಾದಕ ವಸ್ತು ಸೇವಿಸಿ ಅಡ್ಡಾದಿಡ್ಡಿ ಬೈಕ್ ಚಾಲನೆ ಮಾಡ್ತಿದ್ದಾಗಿ ಸ್ಥಳೀಯರು ಆರೋಪಿಸಿದ್ದಾರೆ..
ಬೈಕ್ ನಲ್ಲಿ ಕಾಲೇಜು ಬ್ಯಾಗ್ ಒಳಗೆ ಗಾಂಜಾ ಸಾಗಿಸ್ತಿದ್ದ ವಿದ್ಯಾರ್ಥಿಗಳು ಇದೀಗ ಸಿಕ್ಕಿಬಿದ್ದಿದ್ದಾರೆ… ಫೆಬ್ರವರಿ 11 ರ ರಾತ್ರಿ ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ..
ಅನುಮಾನಗೊಂಡ ಸ್ಥಳೀಯರು ಬೈಕ್ ಸವಾರರ ತಡೆದು ಬ್ಯಾಗ್ ಪರಿಶೀಲನೆ ನಡೆಸಿದಾಗ ಗಾಂಜಾ ಸಿಕ್ಕಿದೆ..
ಬ್ಯಾಗ್ ಪರಿಶೀಲನೆ ವೇಳೆ 1 ಕೆ.ಜಿ.ಗೂ ಹೆಚ್ಚಿನ ಗಾಂಜಾ ಕಾಲೇಜ್ ಬ್ಯಾಗ್ ನಲ್ಲಿ ಪತ್ತೆಯಾಗುತ್ತಿದ್ದಂತೆ ,, ಇಬ್ಬರನ್ನೂ ಹಿಡಿದು ವಾಸವಾಗಿದ್ದ ಬಾಡಿಗೆ ಮನೆಗೆ ಸ್ಥಳೀಯರು ಕರೆತಂದಾಗ ವಿದ್ಯಾರ್ಥಿಗಳು ವಾಸವಿದ್ದ ಬಾಡಿಗೆ ಮನೆಯಲ್ಲಿ ಪೌಡರ್ ರೂಪದ ಮಾದಕ ವಸ್ತು ಕೂಡ ಪತ್ತೆಯಾಗಿದೆ …
ಕೂಡಲೇ ಬ್ಯಾಡರಹಳ್ಳಿ ಹೊಯ್ಸಳ ಪೋಲಿಸರಿಗೆ ಕರೆ ಮಾಡಿ ಮಾದಕ ವಸ್ತು ಸಾಗಿಸ್ತಿದ್ದ ಇಬ್ಬರು ವಿದ್ಯಾರ್ಥಿಗಳನ್ನ ಪೊಲೀಸರಿಗೆ ಸ್ಥಳೀಯರು ಒಪ್ಪಿಸಿದ್ದಾರೆ… ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ..