ಕಲಬುರಗಿ: ರಾಜ್ಯಾದ್ಯಂತ ಗಾಂಜಾ ವಿರುದ್ಧ ಪೊಲೀಸರು ಸಮರ ಸಾರಿದ್ದು, ಕಲಬುರಗಿಯಲ್ಲಿ ಹೊಲದಲ್ಲಿ ಅಕ್ರಮವಾಗಿ ಬೆಳೆದಿದ್ದ 4 ಕ್ವಿಂಟಾಲ್ ಗಾಂಜಾವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಕಲಬುರ್ಗಿ ಜಿಲ್ಲೆಯ ಚಿತ್ತಾಪೂರ ತಾಲೂಕಿನ ಅಲ್ಲೂರ್ ಗ್ರಾಮದ ಹೊಲದಲ್ಲಿ ಬೆಳೆದಿದ್ದ ಒಟ್ಟು 410 ಕೆಜಿಯ 4 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ ಪಡೆಯಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಭೀಮರಾಯ ಮತ್ತು ಹಣಮಂತ ಕಟ್ಟಿ ಎಂಬ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಕುರಿತು ಚಿತ್ತಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಗದ್ದುಗೆ’ ಯಾರ ಮಡಿಲಿಗೆ ? ‘ಮಹಾ’ದಲ್ಲಿ ಇನ್ಸೈಡ್ ವಾರ್ ಶುರು
ಮಹಾರಾಷ್ಟ್ರದ ರಾಜಕೀಯ ಹೋರಾಟ ತೀವ್ರವಾಗಿದ್ದು, ಫಲಿತಾಂಶದ ನಂತರ ಸಿಎಂ ಹುದ್ದೆ ಯಾರು ಅಲಂಕರಿಸುತ್ತಾರೆ ಎಂಬ ಪ್ರಶ್ನೆ ಹೆಚ್ಚು ಚರ್ಚೆಗೆ ಒಳಪಟ್ಟಿದೆ. ಈ ಬಾರಿ ಶಿವಸೇನೆ (ಶಿಂಧೆ), ಬಿಜೆಪಿ...