ಅಮೇಜಾನ್ ನಲ್ಲಿ ಸಿಹಿ ತುಳಸಿ ನೆಪದಲ್ಲಿ ಗಾಂಜಾ ಮಾರಾಟ..!
ಮಧ್ಯಪ್ರದೇಶ : ಪ್ರತಿಷ್ಠಿತ E ಮಾರುಕಟ್ಟೆ ಅಮೇಜಾನ್ ನಲ್ಲಿ ಮಧುಮಹೇಹಿಗಳ ಆರೋಗ್ಯಕ್ಕಾಗಿ ಸಿಹಿ ತುಳಸಿ (ಸ್ವೀವಿಯಾ) ಮಾರಾಟದ ನೆಪದಲ್ಲಿ ಗಾಂಜಾ ಮಾರಾಟ ಮಾಡಲಾಗ್ತಿದ್ದ ಪ್ರಕರಣವು ಬೆಳಕಿಗೆ ಬಂದಿದೆ..
ಈ ಸಂಬಂಧ ಮಧ್ಯಪ್ರದೇಶ ಪೊಲೀಸರು ಅಮೆಜಾನ್ಗೆ ನೋಟಿಸ್ ಜಾರಿ ಮಾಡಿದ್ದಾರೆ.. ಶೀಘ್ರವೇ ಇದರ ವಿಚಾರಣೆ ನಡೆಯಲಿದೆ.. ಈವರೆಗೆ ಕೆಲವು ಪಾರ್ಸಲ್ ಕಂಪನಿಗಳನ್ನು ಬಳಸಿಕೊಂಡು ಡ್ರಗ್ಸ್ ಪೂರೈಸುತ್ತಿದ್ದ ಪ್ರಕರಣಗಳು ವರದಿಯಾಗುತ್ತಿದ್ದವು. ಆದರೆ ಈಗ ಅಮೆಜಾನ್ ನಂತ ಪ್ರತಿಷ್ಠಿತ ಕಂಪನಿ ಮೇಲೆ ಇಂತ ಆರೋಪ ಕೇಳಿಬಂದಿದೆ..
ವಿಶಾಖಪಟ್ಟಣದ ಕಂಪನಿಯೊಂದು ಸಿಹಿ ತುಳಸಿ ಎಲೆಗಳ ಉತ್ಪನ್ನ ಮಾರಾಟ ಕಂಪನಿ ಎಂದು ಹೇಳಿಕೊಂಡು ಅಮೆಜಾನ್ನಲ್ಲಿ ತನ್ನನ್ನು ತಾನೂ ನೋಂದಾಯಿಸಿಕೊಂಡಿತ್ತು. ಆದರೆ ಈ ಸಿಹಿ ತುಳಸಿ ನೆಪದಲ್ಲಿ ಪಾರ್ಸಲ್ ನಲ್ಲಿ ಡ್ರಗ್ಸ್ ಸಾಗಿಸಲಾಗುತ್ತಿತ್ತು ಎಂದು ಹೇಳಲಾಗಿದೆ.
ಈ ವಿಚಾರವಾಗಿ ತನಿಖೆ ನಡೆಸಿದ ಪೊಲೀಸರು ಭಾನುವಾರ 20ಕೆಜಿ ಗಾಂಜಾ ಹೊಂದಿದ್ದ ಇಬ್ಬರನ್ನು ಪೊಲೀಸರು ಪಧ್ಯಪ್ರದೇಶದಲ್ಲಿ ಬಂಧಿಸಿದ್ದರು. ಅವರು ಅಮೆಜಾನ್ ಇಂಡಿಯಾ ವೆಬ್ಸೈಟ್ ಬಳಸಿ ಮಾದಕ ವಸ್ತು ಆರ್ಡರ್ ಮಡುತ್ತಿದ್ದರು ಮತ್ತು ದೇಶದ ವಿವಿಧ ಭಾಗಗಳಿಗೆ ಸರಬರಾಜು ಮಡುತ್ತಿದ್ದರು ಎಂಬುದು ತನಿಖೆಯಲ್ಲಿ ತಿಳಿದು ಬಂದಿದೆ. ಅಮೆಜಾನ್ ಮೂಲಕ 1000ಕೆಜಿ ನಿಷೇಧಿತ ಗಾಂಜಾವನ್ನು 1.10 ಕೋಟಿಗೆ ಮಾರಾಟ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.