ಮದುವೆಗೆ ನಿರಾಕಾರಿಸಿದಕ್ಕೆ ಯುವತಿಗೆ ಬೆಂಕಿ ಹಚ್ಚಿ , ತಾನೂ ಆತ್ಮಹತ್ಯಗೆ ಯತ್ನಿಸಿದ ಪಾಗಲ್ ಪ್ರೇಮಿ..!

1 min read

ಮದುವೆಗೆ ನಿರಾಕಾರಿಸಿದಕ್ಕೆ ಯುವತಿಗೆ ಬೆಂಕಿ ಹಚ್ಚಿ , ತಾನೂ ಆತ್ಮಹತ್ಯಗೆ ಯತ್ನಿಸಿದ ಪಾಗಲ್ ಪ್ರೇಮಿ..!

ಆಂಧ್ರಪ್ರದೇಶ : ಪಾಗಲ್ ಪ್ರೇಮಿಯೊಬ್ಬ ತಾನು ಪ್ರೀತಿಸಿದ ಹುಡುಗಿ ಮದುವೆಗೆ ಒಪ್ಪಲಿಲ್ಲ ಎಂಬ ಕಾರಣಕ್ಕೆ ಆಕೆಗೆ ಬೆಂಕಿ ಹಚ್ಚಿ ತಾನೂ ಕೂಡ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.. ಭೂಪಾಲಪಲ್ಲೆ ಮೂಲದ ಪಿ. ಹರ್ಷವರ್ಧನ್ ಹಾಗೂ ವಿಶಾಖಪಟ್ಟಣಂ ಮೂಲದ ಯುವತಿ ಇಬ್ಬರೂ ಖಾಸಗಿ ವಿಶ್ವವಿದ್ಯಾಲಯದಲ್ಲಿ ಒಟ್ಟಿಗೆ ಓದುತ್ತಿದ್ದರು. ಕೊರೊನಾ ಸಾಂಕ್ರಾಮಿಕ ರೋಗ ಹೆಚ್ಚಾಗಿದ್ದರಿಂದ ಅವರು ತಮ್ಮ ತಮ್ಮ ಮನೆಗಳಲ್ಲಿಯೇ ವಾಸವಾಗಿದ್ದರು. ಹರ್ಷವರ್ಧನ್ ಆ ಯುವತಿಯ ಬಳಿ ಮದುವೆ ಆಗುವಂತೆ ಕೇಳಿದ್ದಾನೆ..

ಆದ್ರೆ ಆಕೆ ಆತನ ಪ್ರಪೋಸಲ್ ತಿರಸ್ಕಾರಿದ್ದಾಳೆ..  ಹೀಗಾಗಿ ಕೋಪಗೊಂಡಿದ್ದ ಯುವಕ ಆಕೆಯನ್ನು ವೈಜಾಗ್‍ನ ಲಾಡ್ಜ್‌ಗೆ ಕರೆದುಕೊಂಡು ಹೋಗಿದ್ದಾನೆ.. ಅಲ್ಲಿ ಆಕೆಯ ಮೇಲೆ ಪೆಟ್ರೋಲ್ ಸುರಿದು, ತಾನೂ ಬೆಂಕಿ ಹಚ್ಚಿಕೊಂಡಿದ್ದಾನೆ. ಬೆಂಕಿ ಜೋರಾಗಿ ಹೊತ್ತಿಕೊಂಡ ನಂತರ ಅವರಿಬ್ಬರೂ ಸಹಾಯಕ್ಕಾಗಿ ಹೊರಗೆ ಓಡಿಬಂದಿದ್ದಾರೆ. ಆಗ ಸಿಬ್ಬಂದಿ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ಧಾರೆ. ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಾನು ಮದುವೆಯಾಗಲು ಒಪ್ಪದ ಕಾರಣದಿಂದ ನನ್ನನ್ನು ಕೊಲೆ ಮಾಡಲು ಮುಂದಾಗಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ. ಆದರೆ ಆತ ನಾವಿಬ್ಬರು ಪ್ರೀತಿಸುತ್ತದ್ದೆವೆ, ಹೀಗಾಗಿ ಒಟ್ಟಿಗೆ ಸಾಯಲು ನಿರ್ಧಾರ ಮಾಡಿದ್ದೆವು ಎಂದು ಹೇಳಿದ್ದಾನೆ. ಇಬ್ಬರು ಬೇರೆ ಬೇರೆ ಹೇಳಿಕೆ ನೀಡಿರೋದು ಅನುಮಾನಕ್ಕೆ ಕಾರಣವಾಗಿದೆ..  ಈ ಕುರಿತಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇನ್ಮುಂದೆ ದೇಶದಲ್ಲಿ ಸೂರ್ಯಾಸ್ತದ ನಂತರವೂ ಪೋಸ್ಟ್ ಮಾರ್ಟಮ್ ನಡೆಸಲು ಅನುಮತಿ..!

ಆತ್ಮಹತ್ಯೆಗೆ ಶರಣಾಗುತ್ತಿರುವವರಲ್ಲಿ  ಇವರೇ ಹೆಚ್ಚು.. ಇದೇ ಸಾಮಾನ್ಯ ಕಾರಣವಾಗಿದೆ..! NCRB ವರದಿಯಲ್ಲೇನಿದೆ..?

ಕೊರೊನಾ ಹಬ್ಬಿಸಿದ್ದಾಯ್ತು…! ಮತ್ತೆ ವಿಶ್ವದ ಪಾಲಿಗೆ ಕಂಟವಾಗುವಂತೆ ಗೋಚರಿಸುತ್ತಿದೆ ಚೀನಾ..?

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd