ಕೊರೊನಾ ಹಬ್ಬಿಸಿದ್ದಾಯ್ತು…! ಮತ್ತೆ ವಿಶ್ವದ ಪಾಲಿಗೆ ಕಂಟವಾಗುವಂತೆ ಗೋಚರಿಸುತ್ತಿದೆ ಚೀನಾ..?

1 min read
Wuhan

ಕೊರೊನಾ ಹಬ್ಬಿಸಿದ್ದಾಯ್ತು…! ಮತ್ತೆ ವಿಶ್ವದ ಪಾಲಿಗೆ ಕಂಟವಾಗುವಂತೆ ಗೋಚರಿಸುತ್ತಿದೆ ಚೀನಾ..?

ಚೀನಾ : ಇಡೀ ವಿಶ್ವಕ್ಕೆ ಕೊರೊನಾ ಮಾಹಾಮಾರಿ ಹಬ್ಬಿಸಿ ಕೋಟ್ಯಾಂತರ ಜನರ ಬಲಿ ತೆಗೆದುಯಕೊಂಡು , ಅನೇಕರ ಬದುಕು ಮೂರಾಬಟ್ಟೆ ಮಾಡಿ , ಹಲವು ದೇಶಗಳ ಆರ್ಥಿಕ ಪರಿಸ್ಥಿ ನೆಲಕಚ್ಚುವಂತೆ ಮಾಡಿರುವ ಕಪಟಿ ಚೀನಾಗೆ ಇನ್ನೂ ಸಮಾಧಾನ ಆಗಿಲ್ಲ ಅನ್ನುವಂತೆ ಕಾಣ್ತಿದೆ.. ಚೀನಾದ ಲ್ಯಾಬ್ ನಿಂದಲೇ ಶರುವಾದ ಬಯೋಲಾಜಿಕಲ್ ವಾರ್ ಇದು ಅನ್ನೋ ಸತ್ಯವನ್ನ ಅಲ್ಲಿಯ ಜನರೇ  ಇಡೀ ವಿಶ್ವದ ಮುಂದೆ ಬೆತ್ತಲಾಗಿಸಿರೋದು ಕೂಡ ಸುಳ್ಳಲ್ಲ..  ಇನ್ನೇನು ದೇಶಗಳಿಂದ ಇದ್ರಿಂದ ಕೊಂಚ ಚೇತರಿಸಿಕೊಳ್ತಿದ್ದಾರೆ ಎನ್ನೋ ಹೊತ್ತಲ್ಲೇ ಇದೀಗ ಮತ್ತೊಮ್ಮೆ ಚೀನಾದಿಂದ ಜಗತ್ತಿಗೆ ಕಂಟಕ ಎದುರಾಗುವಂತೆ ಕಾಣ್ತಿದೆ..

ಹೌದು ಇದೀಗ ಚೀನೀ ಮಾರುಕಟ್ಟೆಯಲ್ಲಿ ಕನಿಷ್ಠ 18 ಅಪಾಯಕಾರಿ ವೈರಸ್‌ ಗಳಿವೆ. ಇದು ಮತ್ತೊಂದಿಷ್ಟು ರೋಗ ಹರಡುವ ಸಾಧ್ಯತೆಯಿದೆ ಎಂದು ಹೊಸ ಅಧ್ಯಯನ ಹೇಳಿದೆ. ಚೀನಾ ಮಾರುಕಟ್ಟೆಯಲ್ಲಿ ಈ ಅಧ್ಯಯನ ನಡೆದಿದೆ. ಚೀನಾದ ಜನರು ಚಿತ್ರವಿಚಿತ್ರ ಆಹಾರ ಸೇವನೆ ಮಾಡುತ್ತಾರೆ. ಚೀನಾದ ಮಾರುಕಟ್ಟೆಯಲ್ಲಿ ಮಾರಾಟವಾಗುವ ಪ್ರಾಣಿಗಳು ಮತ್ತು ಅವುಗಳ ಮಾಂಸದಲ್ಲಿ ವೈರಸ್ ಕಂಡು ಬಂದಿದೆ. ಮನುಷ್ಯರಿಗೆ ಹಾಗೂ ಪ್ರಾಣಿಗಳಿಗೆ ಅಪಾಯವನ್ನುಂಟು ಮಾಡುವ ಅನೇಕ ವೈರಸ್ ಇದ್ರಲ್ಲಿದೆ ಎಂದು ಅಧ್ಯಯನದಲ್ಲಿ ಹೇಳಲಾಗಿದೆ.

ಕೋವಿಡ್ ಡಬಲ್ ಡೋಸ್ 2 ವರ್ಷ ಅಥವ ಹೆಚ್ಚಿನ ಅವಧಿ ವರೆಗೂ ರಕ್ಷಣೆ ನೀಡಬಹುದು – WHO  

ಮಾರುಕಟ್ಟೆಯಲ್ಲಿ ಮಾರಾಟವಾಗುವ ಸಸ್ತನಿಗಳ ಮಾಂಸದ ಅಧ್ಯಯನ ನಡೆದಿದೆ. ಅವುಗಳಲ್ಲಿ 71 ಬಗೆಯ ವೈರಸ್‌ಗಳು ಇರುವುದು ಕಂಡುಬಂದಿದೆ. ಇವುಗಳಲ್ಲಿ 18 ವೈರಸ್, ಸಾಕುಪ್ರಾಣಿಗಳು ಮತ್ತು ಮನುಷ್ಯರಿಗೆ ಅಪಾಯವನ್ನುಂಟು ಮಾಡುತ್ತವೆ ಎಂಬುದು ಗೊತ್ತಾಗಿದೆ. ಸಿಡ್ನಿ ವಿಶ್ವವಿದ್ಯಾನಿಲಯದ ಲೇಖಕ ಎಡ್ವರ್ಡ್ ಹೋಮ್ಸ್ ದ್ವಿಮುಖ ವೈರಸ್ ಸಂಚಾರವಿದೆ ಎಂದಿದ್ದಾರೆ. ಮನುಷ್ಯನಿಂದ ಪ್ರಾಣಿ ಹಾಗೂ ಪ್ರಾಣಿಯಿಂದ ಮನುಷ್ಯನಿಗೆ ವೈರಸ್ ಸಂಚಾರವಾಗಿದೆ ಎಂದಿದ್ದಾರೆ. ಬೆಕ್ಕುಗಳಂತಹ ಮಾಂಸಾಹಾರಿ ಪ್ರಾಣಿಗಳಿಂದ ಹೆಚ್ಚು ವೈರಸ್ ಹರಡುತ್ತದೆ ಎಂದಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd