ಆತ್ಮಹತ್ಯೆಗೆ ಶರಣಾಗುತ್ತಿರುವವರಲ್ಲಿ  ಇವರೇ ಹೆಚ್ಚು.. ಇದೇ ಸಾಮಾನ್ಯ ಕಾರಣವಾಗಿದೆ..! NCRB ವರದಿಯಲ್ಲೇನಿದೆ..?

1 min read
Suicide

ಆತ್ಮಹತ್ಯೆಗೆ ಶರಣಾಗುತ್ತಿರುವವರಲ್ಲಿ  ಇವರೇ ಹೆಚ್ಚು.. ಇದೇ ಸಾಮಾನ್ಯ ಕಾರಣವಾಗಿದೆ..! NCRB ವರದಿಯಲ್ಲೇನಿದೆ..?

 ನವದೆಹಲಿ: ಇತ್ತೀಚೆಗೆ ಅಪ್ರಾಪ್ತರಿಂದ ಹಿಡಿದು ಯುವಕರು , ಹಿರಿಯರು , ಮಧ್ಯ ವಯಸ್ಕರು ಯಾವುದೇ ಒಂದು ಚಿಕ್ಕ ಪುಟ್ಟ ಕಾರಣಗಳು , ಮಾನಸಿಕ ಒತ್ತಡ , ಹಿಂಸೆ, ಇನ್ನೂ ಹಲವಾರು ಕಾರಣಗಳಿಂದ ಆತ್ಮಹತ್ಯೆಗೆ ಶರಣಾಗುತ್ತಿರುವಂತಹ ಪ್ರಕರಣಗಳು ಸಾಮಾನ್ಯವಾಗಿಬಿಟ್ಟಿದೆ..

ಇನ್ನೂ ಇತ್ತೀಚೆಗೆ ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ (NCRB) ಅಧ್ಯಯನ ನಡೆಸಿ ಬಿಡುಗಡೆ ಮಾಡಿರುವ ದತ್ತಾಂಶದ ಪ್ರಕಾರ, ಅತೃಪ್ತ ವಿವಾಹವಾದ ಹೆಚ್ಚಿನ ಜನರೇ ವಿಚ್ಛೇದನದ ನಂತರ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಆಘಾತಕಾರಿ ಸಂಗತಿ ಬಹಿರಂಗವಾಗಿದೆ..

ಕಳೆದ ತಿಂಗಳು ಬಿಡುಗಡೆಯಾದ NCRB ವರದಿಯ ಪ್ರಕಾರ, ಭಾರತದಲ್ಲಿ ಅಪಘಾತದ ಸಾವುಗಳು ಮತ್ತು ಆತ್ಮಹತ್ಯೆಗಳು, ವೈವಾಹಿಕ ಸಮಸ್ಯೆಗಳು 2016 ಮತ್ತು 2020 ರ ನಡುವೆ ಸುಮಾರು 37,591 ಜನರನ್ನು ಆತ್ಮಹತ್ಯೆಗೆ ಪ್ರೇರೇಪಿಸಿದೆ ಎಂದು ತಿಳಿದುಬಂದಿದೆ..

ಇನ್ನೂ ವಿಚ್ಛೇದನವು 2,688 ಜನರನ್ನು ತಮ್ಮ  ತಮ್ಮ ಜೀವನವನ್ನು ಕೊನೆಗೊಳಿಸಲು ಪ್ರೇರೇಪಿಸಿದೆ ಎಂದು ಬಹಿರಂಗಪಡಿಸಿದೆ. ಅಂದರೆ 13 ಪಟ್ಟು ಹೆಚ್ಚು ಜನರು ವಿಚ್ಛೇದನ-ಸಂಬಂಧಿತ ಸಮಸ್ಯೆಗಳಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಗೊತ್ತಾಗಿದೆ.. ಮದುವೆ ಸಂಬಂಧಿ ಸಮಸ್ಯೆಗಳಿಂದ ಆತ್ಮಹತ್ಯೆ ಮಾಡಿಕೊಂಡ ಮಹಿಳೆಯರ ಸಂಖ್ಯೆ ಪುರುಷರಿಗಿಂತ ಹೆಚ್ಚು ಎಂದು ವರದಿಯಿಂದ ತಿಳಿದುಬಂದಿದೆ..

ಕೊರೊನಾ ಹಬ್ಬಿಸಿದ್ದಾಯ್ತು…! ಮತ್ತೆ ವಿಶ್ವದ ಪಾಲಿಗೆ ಕಂಟವಾಗುವಂತೆ ಗೋಚರಿಸುತ್ತಿದೆ ಚೀನಾ..?

ಇನ್ನು ಮದುವೆ-ಸಂಬಂಧಿತ ಆತ್ಮಹತ್ಯೆಗಳ ಅಡಿಯಲ್ಲಿ ಉಲ್ಲೇಖಿಸಲಾದ ಕಾರಣಗಳ ವಿವರವಾದ ವಿಶ್ಲೇಷಣೆಯು ವರದಕ್ಷಿಣೆಯ ಬಗ್ಗೆ ತಿಳಿಸಿದೆ. ವರದಕ್ಷಿಣೆಯಿಂದಾಗಿ ಪ್ರತಿ ವರ್ಷ ಸರಾಸರಿ 2,056 ಆತ್ಮಹತ್ಯೆಗಳು ನಡೆದಿವೆಯಂಥೆ. 2,600 ಆತ್ಮಹತ್ಯೆ ಸಾವುಗಳಿಗೆ ವಿಚ್ಛೇದನ ಕಾರಣವಾಗಿದೆ.

ಕೋವಿಡ್ ಡಬಲ್ ಡೋಸ್ 2 ವರ್ಷ ಅಥವ ಹೆಚ್ಚಿನ ಅವಧಿ ವರೆಗೂ ರಕ್ಷಣೆ ನೀಡಬಹುದು – WHO  

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd