‘ಗರುಡ ಗಮನ ವೃಷಭ ವಾಹನ’ಕ್ಕೆ ‘ಬಲ್ಲಾಳ ದೇವ’ನ ‘ಹೃದಯ’ದ ಮೆಚ್ಚುಗೆ

1 min read

‘ಗರುಡ ಗಮನ ವೃಷಭ ವಾಹನ’ಕ್ಕೆ ‘ಬಲ್ಲಾಳ ದೇವ’ನ ‘ಹೃದಯ’ದ ಮೆಚ್ಚುಗೆ

ಕಂಟೆಂಟ್ ಸಿನಿಮಾಗಳಿಗೆ ಜನ ಹೆಚ್ಚು ಕನೆಕ್ಟ್ ಆಗ್ತಾರೆ.. ಅಂತಹ ಒನ್ ಆಫ್ ದ ಬೆಸ್ಟ್ ಕಂಟೆಂಟ್ ಬೇಸಡ್ ಸಿನಿಮಾ 2021 ರಲ್ಲಿ ರಿಲೀಸ್ ಆಗಿ ಜನಮನ್ನಣೆ ಪಡೆದು ಥಿಯೇಟರ್ ಗಳಲ್ಲಿ ಸಕ್ಸಸ್ ಫುಲ್ ಆಗಿ ಪ್ರದರ್ಶನ ಕಂಡು ಪರ ಭಾಷಾ ನಟ, ನಿರ್ದೇಶಕರು , ನಿರ್ಮಾಪರಿಂದ ಭಾರೀ ಮೆಚ್ಚುಗೆ ಗಳಿಸಿರುವ ಕನ್ನಡದ ಸಿನಿಮಾ ಅಂದ್ರೆ ಗರುಡಗಮನ ವೃಷಭ ವಾಹನ..

ಕಳೆದ ನವೆಂಬರ್‌ನಲ್ಲಿ ಚಿತ್ರಮಂದಿರದಲ್ಲಿ ಬಿಡುಗಡೆ ಆಗಿದ್ದ ರಾಜ್ ಬಿ ಶೆಟ್ಟಿ ನಿರ್ದೇಶಿಸಿರುವ ಗರುಡ ಗಮನ ವೃಷಭ ವಾಹನ ಸಿನಿಮಾವನ್ನ ಇತ್ತೀಚೆಗೆ ತೆಲುಗಿನ ಸ್ಟಾರ್ ನಿರ್ದೇಶಕರಾದ ದೇವ ಕಟ್ಟ , ರಾಮ ಗೋಪಾಲ್ ವರ್ಮಾ , ಸ್ಯಾಂಡ್ ವುಡ್ ನ ಸೆಂಚ್ಯುರಿ ಸ್ಟಾರ್ ಶಿವಣ್ಣ ಸೇರಿದಂತೆ ಸಾಕಷ್ಟು ಮಂದಿ ಕೊಂಡಾಡಿದ್ದರು.. ಇದೀಗ ‘ಬಾಹುಬಲಿಯ ‘ಬಲ್ಲಾಳದೇವ’ ರಾಣಾ ದಗ್ಗುಬಾಟಿ ಅವರು ಸಿನಿಮಾವನ್ನ ಮೆಚ್ಚಿಕೊಂಡಿದ್ದಾರೆ..garudagamana vrushabha vahana - rana - saakshatv

ಜೀ 5 ಒಟಿಟಿ ವೇದಿಕೆಯಲ್ಲಿ ಸಿನಿಮಾವನ್ನು ನೋಡಿದ ನಟ ರಾಣಾ ದಗ್ಗುಬಾಟಿ ‘ಗರುಡ ಗಮನ ವೃಷಭ ವಾಹನ’ ಸಿನಿಮಾವನ್ನು ಬಹುವಾಗಿ ಮೆಚ್ಚಿಕೊಂಡಿದ್ದಾರೆ. ಸಿನಿಮಾ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಟ್ವಿಟ್ಟರ್ ಬಳಕೆದಾರನೊಬ್ಬ ರಾಣಾ ದಗ್ಗುಬಾಟಿಗೆ ಟ್ವೀಟ್ ಮಾಡಿ,  ಸರ್ ಸ್ವಲ್ಪ ಸಮಯ ಬಿಡುವು ಮಾಡಿಕೊಂಡು ‘ಗರುಡ ಗಮನ ವೃಷಭ ವಾಹನ’ ಸಿನಿಮಾ ನೋಡಿ. ನಿಮ್ಮ ಅಭಿಪ್ರಾಯವನ್ನು ನಮ್ಮೊಂದಿಗೆ ಹಂಚಿಕೊಳ್ಳಿ ಎಂದಿದ್ದ. ಅಭಿಮಾನಿಯ ಆಸೆಯಂತೆ ಸಿನಿಮಾ ವೀಕ್ಷಿಸಿದ ರಾಣಾ ದಗ್ಗುಬಾಟಿ, ಅಭಿಮಾನಿಯ ಟ್ವೀಟ್‌ ಗೆ ಪ್ರತಿಕ್ರಿಯೆ ನೀಡಿ, ಸಿನಿಮಾ ಅದ್ಭುತವಾಗಿದೆ, ನನಗೆ ಬಹಳ ಇಷ್ಟವಾಯಿತು  ಎಂದು ಹಾರ್ಟ್ ಇಮೋಜಿ ನೀಡಿದ್ದಾರೆ.

ಕನ್ನಡ ಸಿನಿಮಾಗಳ ಮಟ್ಟಿಗೆ ದಾಖಲೆಯನ್ನು ಬರೆದಿದೆ. ಜನವರಿ 13 ರಂದು ಈ ಸಿನಿಮಾ ಬಿಡುಗಡೆ ಆಗಿತ್ತು. ಬಿಡುಗಡೆ ಆಗಿ ಮೂರು ದಿನ ಪೂರ್ಣ ಕಳೆಯುವ ಮುನ್ನವೇ 8 ಕೋಟಿಗೂ ಹೆಚ್ಚು ನಿಮಿಷಗಳಷ್ಟು ಸಿನಿಮಾ ಸ್ಟ್ರೀಮಿಂಗ್ ಆಗಿತ್ತು. 8 ಕೋಟಿ ನಿಮಿಷ ( 13.33 ಲಕ್ಷ )  ಗಂಟೆಗೂ ಹೆಚ್ಚು ಕಾಲ ಕೇವಲ ಮೂರೇ ದಿನದಲ್ಲಿ ಸ್ಟ್ರೀಮ್ ಆಗಿತ್ತು. ದೇಶ ಮಾತ್ರವೇ ಅಲ್ಲದೆ ವಿದೇಶಗಳಲ್ಲಿಯೂ ಸಿನಿಮಾವನ್ನು ಜನ  ನೋಡಿದ್ದಾರೆ. ಇನ್ನೂ ಕೂಡ ನೋಡ್ತಿದ್ದಾರೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd