ಭಾರವಾಗಲಿದೆ ಸಿಲಿಂಡರ್ : ಮತ್ತೆ ಅನಿಲ ದರ ಹೆಚ್ಚಳ Gas-cylinder saaksha tv
ನವದೆಹಲಿ : ದೇಶದಲ್ಲಿ ಮತ್ತೆ ಅನಿಲ ದರ ಹೆಚ್ಚಳವಾಗಿದೆ. ತಿಂಗಳ ಆರಂಭದಲ್ಲಿ ಅನಿಲ ದರ ಏರಿಸಿ ಗ್ರಾಹಕರಿಗೆ ಶಾಕ್ ನೀಡಿದ್ದ ತೈಲ ಕಂಪನಿಗಳು, ಇದೀಗ ಎಲ್ ಪಿಜಿ ಸಿಲಿಂಡರ್ ದರ 15 ರೂಪಾಯಿ ಏರಿಕೆ ಮಾಡಿವೆ.
ಈ ಪರಿಷ್ಕೃತ ದರ ಇಂದಿನಿAದಲೇ ಜಾರಿಯಾಗಲಿದ್ದು, ಗೃಹಬಳಕೆ ಸಿಲಿಂಡರ್ ದರ 900ರ ಸಮೀಪಕ್ಕೆ ಬಂದಿದೆ.
ಇವತ್ತಿನ 15 ರೂಪಾಯಿ ಬೆಲೆ ಏರಿಕೆಯೊಂದಿಗೆ ಕರ್ನಾಟಕದಲ್ಲಿ ಸಿಲಿಂಡರ್ ದರ 902.2ರೂ ಆಗಲಿದೆ. ದೆಹಲಿಯಲ್ಲಿ 14.2 ಕೆಜಿ ಸಿಲಿಂಡರ್ ದರ 899.50 ರೂ ಆಗಿದೆ. 5 ಕೆಜಿ ಸಿಲಿಂಡರ್ ದರ 502ಕ್ಕೆ ಏರಿಕೆ ಕಂಡಿದೆ.
ಇದಲ್ಲದೇ ಪೆಟ್ರೋಲ್, ಡಿಸೇಲ್ ಬೆಲೆ ಕೂಡ ಪದೇ ಪದೇ ಏರಿಕೆಯಾಗುತ್ತಿದ್ದು, ಜನರು ಕಂಗಾಲಾಗಿದ್ದಾರೆ.







