Gas Cylinder Rate Reduce-ಕನ್ನಡ ರಾಜ್ಯೋತ್ಸವದ ಅಂಗವಾಗಿ ರಾಜ್ಯದ ಜನರಿಗೆ ತೈಲ ಕಂಪನಿಗಳು ಮತ್ತು ವಾಣಿಜ್ಯ ಕಂಪನಿಗಳು ಸಿಹಿ ಸುದ್ದಿ ನೀಡಿದೆ.
ನವೆಂಬರ್ ತಿಂಗಳ ಮೊದಲ ದಿನದಂದು ಜನಸಾಮಾನ್ಯರಿಗೆ ಗ್ಯಾಸ್ ಸಿಲಿಂಡರ್ ದರವನ್ನು ಇಳಿಕೆ ಮಾಡಿವೆ. ಇಂದಿನಿಂದ ಸಿಲಿಂಡರ್ ಹೊಸ ದರಗಳು ಜಾರಿಗೆ ಬರಲಿವೆ.
ಸಾಮಾನ್ಯವಾಗಿ ಗ್ಯಾಸ್ ಸಿಲಿಂಡರ್ ಬೆಲೆಗಳು ಪ್ರತಿ ತಿಂಗಳ ಮೊದಲ ದಿನದಂದು ಅಪ್ಡೇಟ್ ಆಗುತ್ತವೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಅನಿಲ ದರಗಳು ಮತ್ತು ರೂಪಾಯಿ ವಿನಿಮಯ ದರದಂತಹ ವಿವಿಧ ಅಂಶಗಳು ಗ್ಯಾಸ್ ಸಿಲಿಂಡರ್ ಮೇಲೆ ಪರಿಣಾಮ ಬೀರುತ್ತವೆ ಈ ಕಾರಣದಿಂದ ಹೊಸ ದರಗಳು ಜಾರಿಗೆ ಬರಲಿವೆ
ಇಂದು ಎಲ್‌ಪಿಜಿ ಸಿಲಿಂಡರ್ ಬೆಲೆ 115 ರೂಪಾಯಿ ಇಳಿಕೆಯಾಗಿದೆ. ಈ ರಿಯಾಯಿತಿ ಕೇವಲ ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳಿಗೆ ಮಾತ್ರ ಅನ್ವಯವಾಗಲಿದೆ.
ಗೃಹ ಬಳಕೆ ಸಿಲಿಂಡರ್ ಬೆಲೆ ಸ್ಥಿರವಾಗಿದೆ. ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ ಪ್ರತಿ ತಿಂಗಳು ಇಳಿಕೆಯಾಗುತ್ತಿದೆ. ಈ ಹಿಂನ ಅಂದರೆ ಜುಲೈ 6 ರಲ್ಲಿ ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ (14.2 ಕೆಜಿ) ಬೆಲೆ ಸ್ಥಿರವಾಗಿವೆ.
ನವೆಂಬರ್ 1 ರಿಂದ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ದರ 115 ರೂಪಾಯಿಗಳಷ್ಟು ಇಳಿಕೆಯಾಗಿದೆ. ಕೋಲ್ಕತ್ತಾದಲ್ಲಿ 113 ರೂಪಾಯಿ,
ಮುಂಬೈನಲ್ಲಿ 115.5,
ಚೆನ್ನೈನಲ್ಲಿ 116.5 ರೂ IOCL ಪ್ರಕಾರ ಇಳಿಕೆಯಾಗಿದೆ .
ಈ ಹಿಂದೆ ಅಕ್ಟೋಬರ್ 1 ರಂದು ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆ 25 ರೂಪಾಯಿ ಇಳಿಕೆಯಾಗಿತ್ತು. ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ನ ಬೆಲೆ 1846 ರೂಪಾಯಿ ಇತ್ತು. ಇಂದಿನಿಂದ 1744 ರೂಪಾಯಿಯಾಗಿದೆ.
ವಾಣಿಜ್ಯ ಗ್ಯಾಸ್ ಸಿಲಿಂಡರ್ ದರ1846 ರೂ ಕೋಲ್ಕತ್ತಾದಲ್ಲಿಸಿಗಲಿದೆ.
ಮುಂಬೈನಲ್ಲಿ ವಾಣಿಜ್ಯ ಸಿಲಿಂಡರ್ ದರ 1,696 ರೂ.ಗೆ ಸಿಗಲಿದೆ. ಅಕ್ಟೋಬರ್ನಲ್ಲಿ 1,844 ರೂ ಗೆ ದೊರೆಯುತ್ತಿತ್ತು
ಚೆನ್ನೈನಲ್ಲಿ ಹೊಸ ದರ 1,844 ರೂಪಾಯಿ ಆಗಿದೆ.
ಗೃಹ ಬಳಕೆಯ 14.2 ಕೆಜಿ ಸಿಲಿಂಡರ್ ಬೆಲೆ ಕೋಲ್ಕತ್ತಾದಲ್ಲಿ 1,079 ರೂ,
ದೆಹಲಿಯಲ್ಲಿ 1,053,
ಚೆನ್ನೈನಲ್ಲಿ 1068
ಬೆಂಗಳೂರಿನಲ್ಲಿ 1,055 ರೂ.ಗೆ ಲಭ್ಯವಿದೆ