GATE 2023 result : ಕೇವಲ 18% ಅಭ್ಯರ್ಥಿಗಳು ಮಾತ್ರ ಪರೀಕ್ಷೆಯಲ್ಲಿ ತೇರ್ಗಡೆ….
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT) ಕಾನ್ಪುರ್ ನಿನ್ನೆ ಮಾರ್ಚ್ 17 ರಂದು ಗ್ರಾಜುಯೇಟ್ ಆಪ್ಟಿಟ್ಯೂಡ್ ಟೆಸ್ಟ್ ಇನ್ ಇಂಜಿನಿಯರಿಂಗ್ (GATE) 2023 ಫಲಿತಾಂಶಗಳನ್ನ ಪ್ರಕಟಿಸಿದೆ. ಫಲಿತಾಂಶಗಳು ಅಧಿಕೃತ ವೆಬ್‌ಸೈಟ್ — gate.iitk.ac.in ನಲ್ಲಿ ಲಭ್ಯವಿದೆ.
ಫೆಬ್ರವರಿ 4, 5, 11 ಮತ್ತು 12 ರಂದು ಎಂಟು ಅವಧಿಗಳಲ್ಲಿ ಪರೀಕ್ಷೆಯನ್ನ ನಡೆಸಲಾಯಿತು. ಸುಮಾರು 6.70 ಲಕ್ಷ ವಿದ್ಯಾರ್ಥಿಗಳು GATE 2023 ಗೆ ನೋಂದಾಯಿಸಿಕೊಂಡಿದ್ದರು ಅದರಲ್ಲಿ ಸುಮಾರು 5.17 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಅವರಲ್ಲಿ, ಸುಮಾರು ಒಂದು ಲಕ್ಷ ಅಭ್ಯರ್ಥಿಗಳು ಗೇಟ್ 2023 ಗೆ ಅರ್ಹತೆ ಪಡೆದಿದ್ದಾರೆ. ಹಾಜರಾದವರಲ್ಲಿ ಶೇಕಡಾ 18 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ದೇಶದಾದ್ಯಂತ 500 ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಸಲಾಗಿತ್ತು. ಮತ್ತು ಒಟ್ಟಾರೆ ಹಾಜರಾತಿ ಶೇಕಡಾ 77 ರಷ್ಟು. GATE 2023 ಅನ್ನು 29 ವಿಷಯಗಳ ಮೇಲೆ ನಡೆಸಲಾಗಿತ್ತು. ಮೆಟಲರ್ಜಿಕಲ್ ಎಂಜಿನಿಯರಿಂಗ್ ಈ ವರ್ಷದ ಅತ್ಯಧಿಕ ಅರ್ಹತೆ ಪಡೆದ ಅಂದರೆ, ಶೇಕಡಾ 25 % ದಾಖಲಿಸಿದ ಪತ್ರಿಕೆಯಾಗಿದೆ.
ಸ್ಕೋರ್ ಕಾರ್ಡ್‌ಗಳು ಮಾರ್ಚ್ 21 ರ ಬದಲಿಗೆ ಮಾರ್ಚ್ 22 ರೊಳಗೆ ಲಭ್ಯವಿರುತ್ತವೆ. ಅಭ್ಯರ್ಥಿಗಳು ಯಾವುದೇ ಶುಲ್ಕವಿಲ್ಲದೆ ಮೇ 31 ರವರೆಗೆ ಪೋರ್ಟಲ್‌ನಿಂದ ತಮ್ಮ ಸ್ಕೋರ್‌ಕಾರ್ಡ್ ಅನ್ನು ಡೌನ್‌ಲೋಡ್ ಮಾಡಲು ಸಾಧ್ಯವಾಗುತ್ತದೆ.
GATE 2023 result : Only 18% candidates cleared the exam….