ಲಕ್ನೋ ತಂಡಕ್ಕೆ ಗೌತಮ್ ಗಂಭೀರ್ ಬಲ.. Gautam Gambhir saaksha tv
ಭಾರಿ ಜೋಶ್ ನೊಂದಿಗೆ ಐಪಿಎಲ್ ಸಂಗ್ರಾಮಕ್ಕೆ ಧುಮುಕಲು ಸಿದ್ದರಾಗಿರುವ ಲಕ್ನೋ ತಂಡ ಬಲಿಷ್ಠ ತಂಡ ಕಟ್ಟಲು ಪ್ಲಾನ್ ಮಾಡಿಕೊಂಡಿದೆ.
ಮೆಗಾ ಹಜಾರಿನಲ್ಲಿ ಆಟಗಾರರ ಖರೀದಿ ಬಗ್ಗೆ ತಯಾರಿ ನಡೆಸುತ್ತಿರುವ ಲಕ್ನೋ, ಇದೀಗ ಕೋಚ್, ಮೆಂಟರ್ ನೇಮಕ ಮಾಡುವ ಕೆಲಸದಲ್ಲಿ ತೊಡಗಿದೆ.
ಲಕ್ನೋ ಫ್ರಾಂಚೈಸಿ, ಜಿಂಬಾಬೆ ಮಾಜಿ ನಾಯಕ ಆಂಡಿ ಫ್ಲವರ್ ಅನ್ನು ತಂಡದ ಕೋಚ್ ಆಗಿ ನೇಮಕ ಮಾಡಿದ್ದು, ಗೌತಮ್ ಗಂಭೀರ್ ಅವರನ್ನು ತಂಡದ ಮೆಂಟರ್ ಆಗಿ ನೇಮಕ ಮಾಡಿಕೊಂಡಿದೆ.
ಈ ಬಗ್ಗೆ ಸಂಜೀವ್ ಗೊಯಂಕಾ ಕ್ರಿಕ್ ಬಜ್ ಜೊತೆ ಮಾತನಾಡುತ್ತಾ, ಹೌದು..! ನಾವು ಗಂಭೀರ್ ಅವರನ್ನ ಮೆಂಟರ್ ಆಗಿ ನೇಮಕ ಮಾಡಿಕೊಂಡಿದ್ದೇವೆ.
ಕ್ರಿಕೆಟರ್ ಆಗಿ ಅವರು ಎಷ್ಟೋ ದಾಖಲೆಗಳನ್ನು ಬರೆದಿದ್ದಾರೆ. ಅವರ ಬಗ್ಗೆ ನನಗೆ ತುಂಬಾ ಗೌರವವಿದೆ. ಅವರ ಜೊತೆ ಕೆಲಸ ಮಾಡಲು ನಾನು ತುಂಬಾ ಆಸಕ್ತಿಯಿಂದ ಇದ್ದೇನೆ ಎಂದಿದ್ದಾರೆ.
ಇನ್ನು ಲಕ್ನೋ ಫ್ರಾಂಚೈಸಿ ಸದ್ಯ ಟೀಂ ಇಂಡಿಯಾದಲ್ಲಿ ಮಿಂಚು ಹರಿಸುತ್ತಿರುವ ಕನ್ನಡಿಗ ಕೆ.ಎಲ್. ರಾಹುಲ್ ಅವರನ್ನು ಬುಟ್ಟಿಗೆ ಹಾಕಿಕೊಂಡಿದೆ.
ಅಲ್ಲದೇ ರಾಹುಲ್ ಅವರಿಗೆ ತಂಡದ ನಾಯಕತ್ವ ವಹಿಸಿ ಬ್ರ್ಯಾಂಡ್ ಹೆಚ್ಚಿಸಿಕೊಳ್ಳಲು ಪ್ಲಾನ್ ಮಾಡುತ್ತಿದೆ.
ಇತ್ತ ಗೌತಮ್ ಗಂಭೀರ್ ಐಪಿಎಲ್ ನಲ್ಲಿ ಸಾಕಷ್ಟು ಮ್ಯಾಚ್ ಗಳನ್ನ ಆಡಿರುವ ಅನುಭವ ಹೊಂದಿದ್ದಾರೆ.
ಜೊತೆಗೆ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕರಾಗಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದಾರೆ.