ವೆಂಕಟೇಶ್ ಅಯ್ಯರ್ ಅಷ್ಟು ಸೀನ್ ಇಲ್ಲ… ಗೌತಮ್ ಗಂಭೀರ್
ಯುವ ಆಲ್ ರೌಂಡರ್ ವೆಂಕಟೇಶ್ ಅಯ್ಯರ್ ಕಳೆದ ಐಪಿಎಲ್ ನಲ್ಲಿ ಸದ್ದು ಮಾಡಿದ ಪ್ರತಿಭೆ. ಪಾತಾಳದಲ್ಲಿದ್ದ ಕೆಕೆಆರ್ ತಂಡ ಫೈನಲ್ ತಲುಪುವಲ್ಲಿ ವೆಂಕಟೇಶ್ ಅಯ್ಯರ್ ಆಲ್ ರೌಂಡರ್ ಪ್ರದರ್ಶನ ಪ್ರಮುಖ ಪಾತ್ರವಹಿಸಿತ್ತು.
ಕೆಕೆಆರ್ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ವೆಂಕಟೇಶ್ ಅಯ್ಯರ್, 10 ಪಂದ್ಯಗಳಲ್ಲಿ 370 ರನ್ ಗಳೊಂದಿಗೆ ಮೂರು ವಿಕೆಟ್ ಪಡೆದರು. ಇದಾದ ಬಳಿಕ ದೇಶಿ ಟೂರ್ನಿಗಳಲ್ಲಿ ಮಿಂಚಿದ ವೆಂಕಟೇಶ್ ಅಯ್ಯರ್ ಗೆ ಟೀಂ ಇಂಡಿಯಾದಿಂದ ಬುಲಾವ್ ಬಂತು.
ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಏಕದಿನ ಸರಣಿಗೆ ವೆಂಕಟೇಶ್ ಅಯ್ಯರ್ ಆಯ್ಕೆ ಆಗಿ ಎರಡು ಪಂದ್ಯಗಳಲ್ಲಿ ಕಣಕ್ಕಿಳಿಸಿದ್ದರು. ಆದ್ರೆ ಎಲ್ಲರ ಗಮನ ಸೆಳೆಯುವಲ್ಲಿ ವಿಫಲರಾದರು.
ಈ ವಿಚಾರವಾಗಿ ಟೀಂ ಇಂಡಿಯಾದ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ಮಾತನಾಡಿದ್ದು, ವೆಂಕಟೇಶ್ ಅಯ್ಯರ್ ಅವರಿಗೆ ಏಕದಿನ ಕ್ರಿಕೆಟ್ ಆಡುವ ಪ್ರಬುದ್ಧತೆ ಇಲ್ಲ ಎಂದು ಟೀಕೆ ಮಾಡಿದ್ದಾರೆ.
ವೆಂಕಟೇಶ್ ಅಯ್ಯರ್ ಏಕದಿನ ಕ್ರಿಕೆಟಿಗ ಅಲ್ಲ. ಕೇವಲ ಮೂರು ನಾಲ್ಕು ಐಪಿಎಲ್ ಪಂದ್ಯಗಳಲ್ಲಿ ಮಿಂಚಿದ ಮಾತ್ರಕ್ಕೆ ಟೀಂ ಇಂಡಿಯಾಗೆ ಸೆಲೆಕ್ಟ್ ಮಾಡಿದ್ರೆ ಹೀಗೆ ಇರುತ್ತದೆ.
ವೆಂಕಟೇಶ್ ಅಯ್ಯರ್ ಅವರ ಪ್ರದರ್ಶನವನ್ನು ನೋಡಿದ್ರೆ ಅವರಿಗೆ ಏಕದಿನ ಕ್ರಿಕೆಟ್ ಆಡುವಂತ ಸೀನ್ ಇಲ್ಲ ಎಂದು ಸ್ಪಷ್ಟವಾಗಿ ಗೊತ್ತಾಗುತ್ತದೆ.
ಆತನಿಗೆ ಏಕದಿನ ಕ್ರಿಕೆಟ್ ಅಲ್ಲದೇ ಟಿ 20 ಕ್ರಿಕೆಟ್ ನಲ್ಲಿ ಚಾನ್ಸ್ ಕೊಟ್ಟು ನೋಡಬೇಕು ಎಂದು ಆಯ್ಕೆ ಸಮಿತಿಗೆ ಗಂಭೀರ್ ಸೂಚಿಸಿದ್ದಾರೆ.
ಇದೇ ವೇಳೆ ಕೆ.ಎಲ್.ರಾಹುಲ್ ವಿರುದ್ಧ ಕಿಡಿಕಾರಿದ ಗಂಭೀರ್, ಆರಂಭಿಕರಾಗಿ, ಆಲ್ ರೌಂಡರ್ ಆಗಿ ಮಿಂಚಿದ ಆಟಗಾರನನ್ನು ಮಿಡಲ್ ಆರ್ಡರ್ ಬ್ಯಾಟರ್ ಆಗಿ ಹೇಗೆ ಆಡಿಸೋಕೆ ಆಗುತ್ತೆ.. ಈ ಬಗ್ಗೆ ನಾಯಕ ಸ್ಥಾನದಲ್ಲಿದ್ದವರು ಚಿಂತಿಸಬೇಕಿತ್ತು ಎಂದಿದ್ದಾರೆ.
ಇನ್ನು ಐಪಿಎಲ್ ಅನ್ನೋದು ಟೀಂ ಇಂಡಿಯಾಗೆ ಪ್ರವೇಶ ವೇದಿಕೆಯಲ್ಲ , ಹಣ ತೆಗೆದುಕೊಂಡ ಮೇಲೆ ಪ್ರತಿ ಆಟಗಾರ ತಂಡಕ್ಕಾಗಿ ಆಡಬೇಕು ಎಂದಿದ್ದಾರೆ.
ಇತ್ತ ವೆಂಕಟೇಶ್ ಅಯ್ಯರ್ ದಕ್ಷಿಣ ಆಫ್ರಿಕಾ ವಿರುದ್ಧದ ಎರಡು ಏಕದಿನ ಪಂದ್ಯಗಳಲ್ಲಿ ಕೇವಲ 24 ರನ್ ಗಳಿಸಿ ನಿರಾಸೆ ಮೂಡಿಸಿದ್ದರು.