ADVERTISEMENT
Thursday, June 4, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ಬೆಂಗಳೂರು

ಮೊದಲು ನಡೆಯಲು ಯೋಗ್ಯವಾದ ಫುಟ್ ಪಾತ್ ಕೊಡಿ ಆಮೇಲೆ ಪರಿಸರ ಪಾಠ ಮಾಡಿ ಜಿಬಿಎ ನಡಿಗೆ ಚಾಲೆಂಜ್ ಗೆ ಬೆಂಗ್ಳೂರಿಗರ ಮಂಗಳಾರತಿ

Shwetha by Shwetha
June 4, 2026
in ಬೆಂಗಳೂರು, Newsbeat, State, ರಾಜ್ಯ
Share on FacebookShare on TwitterShare on WhatsappShare on Telegram

ಬಾಯಲ್ಲಿ ಪರಿಸರ ಕಾಳಜಿಯ ಪಾಠ, ವಾಸ್ತವದಲ್ಲಿ ಹದಗೆಟ್ಟ ಮೂಲಸೌಕರ್ಯ. ಇದು ನಮ್ಮ ಆಡಳಿತ ವ್ಯವಸ್ಥೆಯ ಕಾರ್ಯವೈಖರಿಗೆ ಹಿಡಿದ ಕನ್ನಡಿ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ಇದೀಗ ಇಂಥದ್ದೇ ಒಂದು ಎಡವಟ್ಟು ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರಿಂದ ಹಿಗ್ಗಾಮುಗ್ಗಾ ಟ್ರೋಲ್ ಆಗುತ್ತಿದೆ.

ಪರಿಸರ ಉಳಿಸುವ ಹಾಗೂ ಸಂಚಾರ ದಟ್ಟಣೆ ಕಡಿಮೆ ಮಾಡುವ ಮಹತ್ವಾಕಾಂಕ್ಷೆಯೊಂದಿಗೆ ಜಿಬಿಎ ತನ್ನ ಅಧಿಕೃತ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಒಂದು ಕಿಲೋಮೀಟರ್ ಚಾಲೆಂಜ್ ಎಂಬ ಅಭಿಯಾನವನ್ನು ಶುರು ಮಾಡಿತ್ತು. ಕನಿಷ್ಠ ಒಂದು ಕಿಲೋಮೀಟರ್ ವರೆಗಿನ ಅಂತರಕ್ಕೆ ದ್ವಿಚಕ್ರ ಅಥವಾ ನಾಲ್ಕು ಚಕ್ರದ ವಾಹನಗಳನ್ನು ಬಳಸುವ ಬದಲು ಪಾದಚಾರಿ ಮಾರ್ಗಗಳ ಮೂಲಕ ಕಾಲ್ನಡಿಗೆಯಲ್ಲೇ ಸಾಗಿ, ಪರಿಸರ ಸ್ನೇಹಿಯಾಗಿ ಎಂಬುದು ಈ ಪೋಸ್ಟ್ ನ ಸಾರಾಂಶವಾಗಿತ್ತು. ಆದರೆ ಪರಿಸರ ಜಾಗೃತಿಯ ಈ ಸಂದೇಶ ಅಧಿಕಾರಿಗಳಿಗೆ ತೀವ್ರ ಮುಜುಗರ ತಂದೊಡ್ಡಿದೆ.

Related posts

ಕರ್ನಾಟಕದ 25ನೇ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಪ್ರಮಾಣ ವಚನ

ಕರ್ನಾಟಕದ 25ನೇ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಪ್ರಮಾಣ ವಚನ

June 4, 2026
ಅಮೆರಿಕದ ಹೊಸ ಸುಂಕದ ಶಾಕ್ – ಮಣಿಯದ ಭಾರತ: ಅಂತಿಮ ಹಂತದಲ್ಲಿ ವಾಣಿಜ್ಯ ಒಪ್ಪಂದದ ಮಾತುಕತೆ

ಅಮೆರಿಕದ ಹೊಸ ಸುಂಕದ ಶಾಕ್ – ಮಣಿಯದ ಭಾರತ: ಅಂತಿಮ ಹಂತದಲ್ಲಿ ವಾಣಿಜ್ಯ ಒಪ್ಪಂದದ ಮಾತುಕತೆ

June 4, 2026

ಈ ಪೋಸ್ಟ್ ನೋಡಿದ್ದೇ ತಡ, ದಿನನಿತ್ಯ ಹದಗೆಟ್ಟ ರಸ್ತೆಗಳು ಹಾಗೂ ಮೂಲಸೌಕರ್ಯಗಳ ಕೊರತೆಯಿಂದ ಹೈರಾಣಾಗಿರುವ ಬೆಂಗಳೂರಿನ ಜನತೆ ಅಧಿಕಾರಿಗಳ ವಿರುದ್ಧ ಮುಗಿಬಿದ್ದಿದ್ದಾರೆ. ಸ್ವಾಮಿ, ನೀವು ಹೇಳುವ ಹಾಗೆ ನಡೆಯಲು ಮೊದಲು ನಗರದಲ್ಲಿ ಫುಟ್ ಪಾತ್ ಎಲ್ಲಿದೆ ತೋರಿಸಿ ಎಂದು ಕಟುವಾಗಿ ಪ್ರಶ್ನಿಸಿದ್ದಾರೆ. ಮೊದಲು ಜನರಿಗೆ ನಡೆಯಲು ಯೋಗ್ಯವಾದ, ಅಡೆತಡೆ ಇಲ್ಲದ ಪಾದಚಾರಿ ಮಾರ್ಗಗಳನ್ನು ನಿರ್ಮಿಸಿ ಕೊಡಿ. ಆನಂತರ ಇಂಥಹ ಚಾಲೆಂಜ್ ಗಳನ್ನು ನೀಡಿ ಎಂದು ಆಕ್ರೋಶ ಹೊರಹಾಕಿದ್ದಾರೆ.

ಸಿಲಿಕಾನ್ ಸಿಟಿ ಬೆಂಗಳೂರಿನ ಬಹುತೇಕ ಬಡಾವಣೆಗಳಲ್ಲಿ ಪಾದಚಾರಿ ಮಾರ್ಗಗಳ ಸ್ಥಿತಿ ಶೋಚನೀಯವಾಗಿದೆ. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿದ ಫುಟ್ ಪಾತ್ ಗಳು ಕೆಲವೇ ದಿನಗಳಲ್ಲಿ ಕಿತ್ತು ಬರುತ್ತವೆ. ಇನ್ನು ವಾಹನ ಸವಾರರು ಟ್ರಾಫಿಕ್ ತಪ್ಪಿಸಿಕೊಳ್ಳಲು ಫುಟ್ ಪಾತ್ ಮೇಲೆಯೇ ಬೈಕ್ ನುಗ್ಗಿಸುತ್ತಾರೆ. ಉಳಿದ ಜಾಗವನ್ನು ಬೀದಿಬದಿ ವ್ಯಾಪಾರಿಗಳು ಹಾಗೂ ಕಟ್ಟಡ ನಿರ್ಮಾಣದ ವಸ್ತುಗಳು ಆಕ್ರಮಿಸಿಕೊಂಡಿವೆ.

ಮರಗಳ ಬೇರುಗಳು, ರಸ್ತೆಯ ಮಧ್ಯೆ ಎಲ್ಲೆಂದರಲ್ಲಿ ನಿಲ್ಲಿಸಿರುವ ವಿದ್ಯುತ್ ಕಂಬಗಳು, ಮುಚ್ಚಳವೇ ಇಲ್ಲದೆ ಬಾಯಿ ತೆರೆದುಕೊಂಡಿರುವ ಚರಂಡಿಗಳು ಜನರನ್ನು ಸಾವಿನ ಕೂಪದಂತೆ ಕಾಡುತ್ತಿವೆ. ಇಂಥಹ ಅಪಾಯಕಾರಿ ಪರಿಸ್ಥಿತಿಯಲ್ಲಿ ಮಕ್ಕಳು ಹಾಗೂ ವಯಸ್ಸಾದವರು ಫುಟ್ ಪಾತ್ ಮೇಲೆ ಹೆಜ್ಜೆ ಇಡುವುದೇ ಒಂದು ಸಾಹಸವಾಗಿದೆ. ಅನೇಕ ಕಡೆ ಫುಟ್ ಪಾತ್ ಇಲ್ಲದ ಕಾರಣ ಪಾದಚಾರಿಗಳು ವಾಹನಗಳು ಓಡಾಡುವ ರಸ್ತೆಯಲ್ಲೇ ಜೀವ ಕೈಯಲ್ಲಿಡಿದು ನಡೆಯುವ ಅನಿವಾರ್ಯತೆ ಇದೆ.

ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್ ಮಾಡಿರುವ ಅನೇಕರು, ಬೆಂಗಳೂರಿನ ಯಾವುದೇ ಮೂಲೆಯಲ್ಲಾದರೂ ಸರಿ, ನೆಟ್ಟಗೆ ನೂರು ಮೀಟರ್ ಅಡೆತಡೆ ಇಲ್ಲದೆ ನಡೆಯುವಂತಹ ಒಂದು ಫುಟ್ ಪಾತ್ ತೋರಿಸಿ ಎಂದು ಅಧಿಕಾರಿಗಳಿಗೆ ಸವಾಲು ಹಾಕಿದ್ದಾರೆ. ಫುಟ್ ಪಾತ್ ಮೇಲೆ ಕಾಲಿಟ್ಟರೆ ಜೀವಕ್ಕೆ ಗ್ಯಾರಂಟಿ ಇಲ್ಲ, ಹೀಗಿರುವಾಗ ನೀವು ಹೇಳುವ ಒಂದು ಕಿಲೋಮೀಟರ್ ನಡೆಯುವುದು ವಾಸ್ತವಕ್ಕೆ ತೀರ ದೂರವಾದ ಮಾತು ಎಂದು ಅಧಿಕಾರಿಗಳ ಕಣ್ಣು ತೆರೆಸುವ ಪ್ರಯತ್ನ ಮಾಡಿದ್ದಾರೆ.

ನಗರದ ಮೂಲಸೌಕರ್ಯಗಳ ನೈಜ ಸ್ಥಿತಿಯನ್ನು ಅರಿಯದೆ, ಕೇವಲ ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು ಸಾಮಾಜಿಕ ಜಾಲತಾಣಗಳಲ್ಲಿ ಜಾಗೃತಿ ಪೋಸ್ಟ್ ಹಾಕಿದರೆ ಜನರಿಂದ ಛೀಮಾರಿ ಬೀಳುತ್ತದೆ ಎಂಬುದಕ್ಕೆ ಈ ಘಟನೆ ತಾಜಾ ಉದಾಹರಣೆ. ಪಾದಚಾರಿ ಸ್ನೇಹಿ ನಗರ ನಿರ್ಮಾಣ ಮಾಡುವುದು ಕೇವಲ ಭಾಷಣ ಅಥವಾ ಪೋಸ್ಟ್ ಗಳಿಗೆ ಸೀಮಿತವಾಗದೆ, ಮೊದಲು ಸುರಕ್ಷಿತ, ನಿರಂತರ ಮತ್ತು ಗುಣಮಟ್ಟದ ಫುಟ್ ಪಾತ್ ಗಳನ್ನು ಒದಗಿಸುವ ಮೂಲಕ ಕಾರ್ಯರೂಪಕ್ಕೆ ಬರಬೇಕಿದೆ. ಇಲ್ಲದಿದ್ದರೆ ಇಂತಹ ಅಭಿಯಾನಗಳು ಟ್ರೋಲ್ ಗಳಿಗೆ ಮಾತ್ರ ಸೀಮಿತವಾಗುತ್ತವೆ ಎಂಬುದು ಪ್ರಜ್ಞಾವಂತ ನಾಗರಿಕರ ಒಕ್ಕೊರಲಿನ ಆಗ್ರಹವಾಗಿದೆ.

ShareTweetSendShare
Join us on:

Related Posts

ಕರ್ನಾಟಕದ 25ನೇ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಪ್ರಮಾಣ ವಚನ

ಕರ್ನಾಟಕದ 25ನೇ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಪ್ರಮಾಣ ವಚನ

by Shwetha
June 4, 2026
0

ಕರ್ನಾಟಕ ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಅವರು ಬುಧವಾರ ಅಧಿಕೃತವಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ಥಾವರ್ ಚಂದ್ ಗೆಹೋಟ್ ಅವರು ನೂತನ ಮುಖ್ಯಮಂತ್ರಿಗೆ ಪ್ರಮಾಣ...

ಅಮೆರಿಕದ ಹೊಸ ಸುಂಕದ ಶಾಕ್ – ಮಣಿಯದ ಭಾರತ: ಅಂತಿಮ ಹಂತದಲ್ಲಿ ವಾಣಿಜ್ಯ ಒಪ್ಪಂದದ ಮಾತುಕತೆ

ಅಮೆರಿಕದ ಹೊಸ ಸುಂಕದ ಶಾಕ್ – ಮಣಿಯದ ಭಾರತ: ಅಂತಿಮ ಹಂತದಲ್ಲಿ ವಾಣಿಜ್ಯ ಒಪ್ಪಂದದ ಮಾತುಕತೆ

by Shwetha
June 4, 2026
0

ಭಾರತದ ರಫ್ತು ವಲಯಕ್ಕೆ ಅಮೆರಿಕದ ಟ್ರಂಪ್ ಆಡಳಿತವು ಹೊಸ ಸವಾಲನ್ನು ಒಡ್ಡಿದೆ. ಬಲವಂತದ ಕಾರ್ಮಿಕರ ಮೂಲಕ ತಯಾರಾಗುವ ಸರಕುಗಳ ಆಮದನ್ನು ತಡೆಯಲು ವಿಫಲವಾಗಿರುವ ಆರೋಪದ ಮೇಲೆ, ಭಾರತ...

ಡಿಕೆಶಿಗೆ ದೂರವಾಣಿ ಕರೆ ಮಾಡಿದ ಸೋನಿಯಾ ಗಾಂಧಿ; ಶುಭ ಹಾರೈಕೆ

ಡಿಕೆಶಿಗೆ ದೂರವಾಣಿ ಕರೆ ಮಾಡಿದ ಸೋನಿಯಾ ಗಾಂಧಿ; ಶುಭ ಹಾರೈಕೆ

by Shwetha
June 4, 2026
0

ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಡಿ.ಕೆ. ಶಿವಕುಮಾರ್ ಅವರಿಗೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ದೂರವಾಣಿ ಕರೆ ಮಾಡಿ ಶುಭ ಹಾರೈಸಿದ್ದಾರೆ. ಸಿಎಂ ಡಿ. ಕೆ....

ವಾಲ್ಮೀಕಿ ನಿಗಮ ಹಗರಣ: ಮಾಜಿ ಸಚಿವ ಸೇರಿ 30 ಮಂದಿಯ ವಿರುದ್ಧ ಚಾರ್ಜ್‌ಶೀಟ್

ವಾಲ್ಮೀಕಿ ನಿಗಮ ಹಗರಣ: ಮಾಜಿ ಸಚಿವ ಸೇರಿ 30 ಮಂದಿಯ ವಿರುದ್ಧ ಚಾರ್ಜ್‌ಶೀಟ್

by Shwetha
June 4, 2026
0

ವಾಲ್ಮೀಕಿ ಅಭಿವೃದ್ಧಿ ನಿಗಮದ ಕೋಟ್ಯಂತರ ರೂಪಾಯಿ ಹಣ ದುರುಪಯೋಗ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ಮಾಜಿ ಸಚಿವ ಬಿ. ನಾಗೇಂದ್ರ ಸೇರಿದಂತೆ 30 ಆರೋಪಿಗಳ ವಿರುದ್ಧ ಸಿಬಿಐ...

ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅಧಿಕಾರ ಸ್ವೀಕಾರ: ಅಜ್ಜಯ್ಯನ ಹೆಸರಲ್ಲಿ ಪ್ರಮಾಣ ವಚನ

ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅಧಿಕಾರ ಸ್ವೀಕಾರ: ಅಜ್ಜಯ್ಯನ ಹೆಸರಲ್ಲಿ ಪ್ರಮಾಣ ವಚನ

by Shwetha
June 4, 2026
0

ಬೆಂಗಳೂರು: ಕರ್ನಾಟಕ ರಾಜಕಾರಣದಲ್ಲಿ ಬಹುಕಾಲದ ನಿರೀಕ್ಷೆ ಮತ್ತು ಕುತೂಹಲಕ್ಕೆ ತೆರೆ ಬಿದ್ದಿದೆ. ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ನಿನ್ನೆ ಅಧಿಕಾರ ಸ್ವೀಕರಿಸಿದ್ದಾರೆ. ಈ ಮೂಲಕ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram