ಜನರಲ್ ನರವಾಣೆ COSC ಅಧ್ಯಕ್ಷರಾಗಿ ಆಯ್ಕೆ… CDS ಅಲ್ಲ…
ಮೊದಲ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಜನರಲ್ ಬಿಪಿನ್ ರಾವತ್ ಅವರ ದುರಂತ ನಿಧನದಿಂದ ತೆರವಾದ ಹುದ್ದೆಯನ್ನು, ಭೂ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಾಣೆ ಅವರು ಚೀಫ್ಸ್ ಆಫ್ ಸ್ಟಾಫ್ ಕಮಿಟಿಯ ಅಧ್ಯಕ್ಷರಾಗಿ ಅಧಿಕಾರವನ್ನ ವಹಿಸಿಕೊಂಡಿದ್ದಾರೆ.
ಜನರಲ್ ನರವಾಣೆ COSC ಅಧ್ಯಕ್ಷರಾಗಿ ಆಯ್ಕೆ… CDS ಅಲ್ಲ…
COSC ಮೂರು ಸೇವೆಗಳ ಮುಖ್ಯಸ್ಥರನ್ನು ಒಳಗೊಂಡಿರುವ ಸಮಿತಿಯಾಗಿದೆ, ಇದು ಕಾರ್ಯಾಚರಣೆಗಳು ಮತ್ತು ಇತರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಮೂರು ಸೇವೆಗಳ ನಡುವೆ ಸಮನ್ವಯವನ್ನು ಕಾಪಾಡಿಕೊಳ್ಳಲು ಕಾರ್ಯನಿರ್ವಹಿಸುತ್ತದೆ. ಸಿಡಿಎಸ್ ಹುದ್ದೆ ಸೃಷ್ಟಿಗೂ ಮುನ್ನ ಜಾರಿಯಲ್ಲಿದ್ದ ಹಳೆಯ ಸಂಪ್ರದಾಯದ ಪ್ರಕಾರ ಜನರಲ್ ನರವಾಣೆ ಅವರನ್ನು ಸಿಒಎಸ್‌ಸಿ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಈ ಸಂಪ್ರದಾಯದ ಅಡಿಯಲ್ಲಿ, ಮೂರು ಸೇವೆಗಳ ಮುಖ್ಯಸ್ಥರಲ್ಲಿ ಹಿರಿಯ ಅಧಿಕಾರಿಯನ್ನು COSC ಅಧ್ಯಕ್ಷರಾಗಿ ನೇಮಿಸಲಾಯಿತು.
ಮೂರು ಸೇವಾ ಮುಖ್ಯಸ್ಥರ ಪೈಕಿ ಜನರಲ್ ನರವಾಣೆ ಅತ್ಯಂತ ಹಿರಿಯರಾಗಿದ್ದು, ಅವರನ್ನು ಸಮಿತಿಯ ಅಧ್ಯಕ್ಷರನ್ನಾಗಿ ವಹಿಸಲಾಗಿದೆ. ಎಂದು ಮೂಲಗಳು ತಿಳಿಸಿವೆ.
ಭೂ ಸೇನೆ, ವಾಯು ಸೇನೆ, ನೌಕ ಸೇನೆ, ಈ ಎಲ್ಲ ಸೇನಾ ಮುಖ್ಯಸ್ಥರನ್ನ ಸಮನ್ವಗೊಳಿಸಿಲು ಈ ಹಿಂದೆ ಈ ಹುದ್ದೆಯನ್ನ ಬಳಸಲಾಗುತ್ತಿತ್ತು. ಎರಡು ವರ್ಷಗಳ ಹಿಂದೆ CDS ( ಚೀಫ್ಸ್ ಆಫ್ ಸ್ಟಾಫ್ ), ಶ್ರೇಣಿಯನ್ನು ರಚಿಸುವ ಮೊದಲು ಅತ್ಯಂತ ಹಿರಿಯ ಹುದ್ದೆಯಾಗಿತ್ತು.
ಭಾರತದ ಮೊದಲ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಜನರಲ್ ಬಿಪಿನ್ ರಾವತ್ ಅವರು ತಮ್ಮ ಪತ್ನಿ ಮತ್ತು 11 ಸಶಸ್ತ್ರ ಪಡೆಗಳ ಸಿಬ್ಬಂದಿಗಳೊಂದಿಗೆ ಡಿಸೆಂಬರ್ 8 ರಂದು ತಮಿಳುನಾಡಿನ ಕೂನೂರ್ ಜಿಲ್ಲೆಯಲ್ಲಿ ಭಾರತೀಯ ವಾಯುಪಡೆಯ Mi-17 V5 ಚಾಪರ್ ಅಪಘಾತದಲ್ಲಿ ಸಾವನ್ನಪ್ಪಿದರು.
ಐಎಎಫ್ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿಆರ್ ಚೌಧರಿ ಮತ್ತು ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಆರ್ ಹರಿ ಕುಮಾರ್ ಅವರು ಸೆಪ್ಟೆಂಬರ್ 30 ಮತ್ತು ನವೆಂಬರ್ 30 ರಂದು ಸೇನಾ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದರು.