ಬಾಗಲಕೋಟೆ: ಮದುವೆ ಮಾಡಿಸಿದ್ದ ಬ್ರೋಕರ್ ಹಾಗೂ ವಿವಾಹವಾದ ಮಹಿಳೆ ಪರಾರಿಯಾಗಿರುವ ಘಟನೆಯೊಂದು ಜಿಲ್ಲೆಯಲ್ಲಿ ನಡೆದಿದೆ.
ಮುಧೋಳದ ಸೋಮಶೇಖರ್ ಎಂಬಾತ ಮೋಸ ಹೋಗಿರುವ ವ್ಯಕ್ತಿ. ಶಿವಮೊಗ್ಗದ ಮಂಜುಳಾ ಎಂಬ ಯುವತಿಯನ್ನು ಮದುವೆ ಮಾಡಿಸಿದ ನಾಟಕವಾಡಿ ಮೋಸ ಮಾಡಿದ್ದಾರೆಂದು ದೂರು ನೀಡಿದ್ದಾರೆ.
ಈಗಾಗಲೇ ಎರಡು ಮದುವೆಯಾಗಿದ್ದ ಶಿವಮೊಗ್ಗದ ಮಹಿಳೆ ಮಂಜುಳಾನ್ನ ಕರೆತಂದು ಬ್ರೋಕರ್ ಟೀಂ ಮದುವೆ ಮಾಡಿಸಿತ್ತು. ಹೆಣ್ಣಿಗಾಗಿ ಅಲೆದಾಡುತ್ತಿದ್ದ ಸೋಮಶೇಖರ್ ಇಲ್ಲಿ ಟಾರ್ಗೆಟ್ ಆಗಿದ್ದರು. ಹೆಣ್ಣು ಕೊಡಿಸುತ್ತೇವೆಂದು 4 ಲಕ್ಷ ರೂ.ಗೆ ಡಿಮ್ಯಾಂಡ್ ಮಾಡಿದ್ದರು.
ಬಾಗಲಕೋಟೆ ಮುಧೋಳದ ಕಾಳಿಕಾದೇವಿ ದೇಗುಲದಲ್ಲಿ ವರ್ಷದ ಹಿಂದೆ ಮದುವೆ ನಡೆದಿತ್ತು. ಮದುವೆ ದಿನವೇ ಬ್ರೋಕರ್ ತಂಡವು ಪೂರ್ಣ 4 ಲಕ್ಷ ಹಣ ಪಡೆದಿತ್ತು. ಮದುವೆಯಾದ ಒಂದೇ ತಿಂಗಳಲ್ಲಿ ಪತ್ನಿ ಮಂಜುಳಾ ಪರಾರಿಯಾಗಿದ್ದಳು. ಪತ್ನಿ ಬಗ್ಗೆ ವಿಚಾರಿಸಲು ಹೋದ ವೇಳೆ ಈಗಾಗಲೇ ಆಕೆಗೆ ಎರಡು ಮದುವೆಯಾದ ಬಗ್ಗೆ ಸುಳಿವು ಸಿಕ್ಕಿದೆ. ಹಣ ಹೊಡೆಯಲು ಮದುವೆಯಾದ ಮಹಿಳೆಯನ್ನೇ ಶಿವಮೊಗ್ಗದಿಂದ ಮುಧೋಳಕ್ಕೆ ಬ್ರೋಕರ್ ಟೀಂ ಕರೆ ತಂದಿತ್ತು. ಬ್ರೋಕರ್ ಟೀಮ್‌ಗೆ ತಾನು ನೀಡಿದ 4 ಲಕ್ಷ ಹಣ ಮರಳಿಸುವಂತೆ ಸಂತ್ರಸ್ತ ಸೋಮಶೇಖರ್ ಈಗ ಮನವಿ ಮಾಡಿದ್ದಾರೆ. ಈ ಕುರಿತು ದೂರು ದಾಖಲಿಸಿದ್ದಾರೆ. ಸದ್ಯ ಬ್ರೋಕರ್ ಟೀಮ್ ಜಾಲ ಹಿಡಿದು ಪೊಲೀಸರು ಹೋಗಿದ್ದು, ತನಿಖೆ ನಡೆಸುತ್ತಿದೆ.








