ಹೊಟ್ಟೆಯ ಕೊಬ್ಬು ಇಳಿಸಲು, ಬೆನ್ನು ಬಲವಾಗಿಡಲು ಈ ಯೋಗ ಮಾಡಿ…

1 min read

ಹೊಟ್ಟೆಯ ಕೊಬ್ಬು ಇಳಿಸಲು, ಬೆನ್ನು ಬಲವಾಗಿಡಲು ಈ ಯೋಗ ಮಾಡಿ…

ನಿಯಮಿತವಾಗಿ ಯೋಗಾಭ್ಯಾಸ ಮಾಡುವುದು ಆರೋಗ್ಯಕರ ಜೀವನಶೈಲಿಗೆ ಉತ್ತಮ ಮಾರ್ಗಗಳಲ್ಲಿ ಒಂದು.  ಯೋಗಾಸನಗಳು ಮತ್ತು ವ್ಯಾಯಾಮಗಳು ನಿಮ್ಮ  ದೇಹದ ಆರೋಗ್ಯ ಮತ್ತು ಮಾನಸಿಕ ಆರೋಗ್ಯವನ್ನ ಉತ್ತಮವಾಗಿಡಲು ಸಹಕರಿಸುತ್ತವೆ. ಯೋಗಾಸನವು ದೇಹವನ್ನು ಬಲಪಡಿಸುವುದರ ಜೊತೆಗೆ ಫ್ಲೆಕ್ಸಿಬಲ್ ಆಗಿರುವಂತೆ ನೋಡಿಕೊಳ್ಳುತ್ತದೆ. ಒತ್ತಡವನ್ನು ನಿರ್ವಹಿಸಲು ಮತ್ತು ದೇಹವನ್ನ ಟೋನ್ ಮಾಡಲು ಸಹಾಯ ಮಾಡುತ್ತದೆ.

ನೀವು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಬೇಕು ಎಂದು ಪ್ರಯತ್ನಿಸುತ್ತಿದ್ದರೆ ಬಾಬಾ ರಾಮ್‌ದೇವ್ ಅವರು ಹೇಳಿದ ಈ 5 ಯೋಗಾಸನಗಳನ್ನು ಖಂಡಿತವಾಗಿ ಪ್ರಯತ್ನಿಸಿ.

ನೌಕಾಸನ –  ನೌಕಾ’ ಎಂದರೆ ದೋಣಿ ‘ಆಸನ’ ಎಂದರೆ ಭಂಗಿ, ದೋಣಿಯ ಆಕಾರದಲ್ಲಿ ದೇಹನ್ನ ಬಾಗಿಸುವುದಕ್ಕೆ ನೌಕಾಸನ  ಎಂದು ಅರ್ಥ. ಬಾಬಾ ರಾಮದೇವ್ ಅವರ ಪ್ರಕಾರ, ಇದು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುವ ಅತ್ಯಂತ ಪರಿಣಾಮಕಾರಿ ಆಸನಗಳಲ್ಲಿ ಒಂದಾಗಿದೆ. ಇದು ಕುತ್ತಿಗೆಯಿಂದ ತೊಡೆಯವರೆಗೂ ದೇಹಕ್ಕೆ ವ್ಯಾಯಾಮ ಮಾಡುತ್ತದೆ.  ಈ ಆಸನವು ನಿಮ್ಮ ಹೊಟ್ಟೆಯ ಸ್ನಾಯುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ, ರಕ್ತ ಪರಿಚಲನೆ ಸುಧಾರಿಸುತ್ತದೆ ಮತ್ತು ಜೀರ್ಣಕ್ರಿಯೆಯನ್ನ ಹೆಚ್ಚಿಸುತ್ತದೆ.

 

ಭುಜಂಗಾಸನ –  ನಾಗರಹಾವು ಹೆಡೆ ಎತ್ತಿದಂದೆ ದೇಹವನ್ನ ಭಾಗಿಸುವ ಯೋಗಾಸನಕ್ಕೆ ಭುಜಂಗಾಸನ ಎಂದು ಹೆಸರು. ಯೋಗ ಗುರು ಸ್ವಾಮಿ ರಾಮ್‌ದೇವ್ ಅವರ ಪ್ರಕಾರ, ಹೆಚ್ಚುವರಿ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುವ ಅತ್ಯುತ್ತಮ ಆಸನಗಳಲ್ಲಿ ಭುಜಂಗಾಸನವೂ ಒಂದಾಗಿದೆ. ಇದು ಬೆನ್ನನ್ನ ಹಿಂದಕ್ಕೆ ಬಾಗಿಸುವ ಭಂಗಿಯಾಗಿದ್ದು. ಕಿಬ್ಬೊಟ್ಟೆಯ ಪ್ರದೇಶದಲ್ಲಿ ಹಿಗ್ಗುವಿಕೆ ಮತ್ತು ಕುಗ್ಗುವಿಗೆ ಒಳಗಾಗುತ್ತದೆ. ಇದು ನಿಮ್ಮ ಬೆನ್ನನ್ನು ಬಲವಾಗಿಡಲು ಉಪಯುಕ್ತವಾಗಿದೆ ಮತ್ತು ರಕ್ತ ಪರಿಚಲನೆಯನ್ನ ಸುಧಾರಿಸುತ್ತದೆ.

 

ಕುಂಭಕಾಸನ: ನಿಮ್ಮ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ನೀವು ಈ ಯೋಗಾಸನವನ್ನು ನಿಯಮಿತವಾಗಿ ಮಾಡಬಹುದು. ಬಾಬಾ ರಾಮ್‌ದೇವ್ ಪ್ರಕಾರ, ಈ ಆಸನವನ್ನು ನಿಯಮಿತವಾಗಿ ಮಾಡುವುದರಿಂದ ತೂಕವನ್ನು ಕಡಿಮೆ ಮಾಡಲು, ಬೆನ್ನು ನೋವನ್ನು ಕಡಿಮೆ ಮಾಡಲು, ಕೋರ್ ಸ್ನಾಯುಗಳನ್ನು ಬಲಪಡಿಸಲು ಮತ್ತು ದೇಹದ ಸಮತೋಲನ ಸುಧಾರಿಸಲು ಸಹಾಯ ಮಾಡುತ್ತದೆ.

 

ಉಷ್ಟ್ರಾಸನ: ಈ ಆಸನವನ್ನು ಒಂಟೆ ಭಂಗಿ ಎಂದೂ ಕರೆಯುತ್ತಾರೆ. ಬಾಬಾ ರಾಮದೇವ್ ಅವರ ಪ್ರಕಾರ, ಈ ಆಸನವನ್ನು ನಿರ್ವಹಿಸಲು ಸ್ವಲ್ಪ ಕಷ್ಟ, ಆದ್ದರಿಂದ ಬೆನ್ನು ಅಥವಾ ಬೆನ್ನುಮೂಳೆಯ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿರುವವರು ಮಾತ್ರ ಇದನ್ನು ಅಭ್ಯಾಸ ಮಾಡಬೇಕು. ಯೋಗ ಗುರುವಿನ ಪ್ರಕಾರ, ಹೊಟ್ಟೆಯ ಕೊಬ್ಬನ್ನು ತೊಡೆದುಹಾಕಲು ನಿಮಗೆ ಸಹಾಯ ಮಾಡುವುದರ ಜೊತೆಗೆ, ಈ ಆಸನವು ಬೆನ್ನಿನ ಸ್ನಾಯುಗಳನ್ನು ಬಲಪಡಿಸುತ್ತದೆ ಮತ್ತು ದೇಹದ ಭಂಗಿಯನ್ನು ಸುಧಾರಿಸುತ್ತದೆ.

 

ಧನುರಾಸನ: ಧುನು ಎಂದರೆ ಬಿಲ್ಲು ಎಂದರ್ಥ. ಬಿಲ್ಲಿನಂತೆ ದೇಹವನ್ನ ಬಗ್ಗಿಸುವುದಕ್ಕೆ ಧನುರಾಸನ ಎಂದು ಹೆಸರು. ಈ ಆಸನ ಹೊಟ್ಟೆಯ ಕೊಬ್ಬನ್ನು ತ್ವರಿತವಾಗಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಕಿಬ್ಬೊಟ್ಟೆಯ ಸ್ನಾಯುಗಳನ್ನು ಗುರಿಯಾಗಿಸುವ ಮತ್ತು ಬೆನ್ನುಮೂಳೆಯನ್ನು ಬಲಪಡಿಸುವ ಭಂಗಿಯಾಗಿದೆ.ಈ ಆಸನ ಹಾಕುವುದರಿಂದ ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ ಎಂದು ತಿಳಿದುಬಂದಿದೆ. ಇದು ಸ್ವಲ್ಪ ಕಷ್ಟದ ಆಸನವಾಗಿದ್ದು ಸರಿಯಾಗಿ ಮಾಡಲು ನಿಯಮಿತ ಅಭ್ಯಾಸದ ಅಗತ್ಯವಿದೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd