ಉಡುಪಿ: ಮಲ್ಪೆ ಮೀನುಗಾರರಿಗೆ ಅಪರೂಪದ ದೊಡ್ಡ ಗಾತ್ರದ ದೆವ್ವ ಮೀನೊಂದು ಸಿಕ್ಕಿಬಿದ್ದಿದೆ. ಈ ಮೀನು ಸುಮಾರು ಐದು ಅಡಿ ಉದ್ದ, ಆರು ಕೆ.ಜಿ ತೂಕವಿದೆ. ದೆವ್ವದಂತೆ ಕಾಣುವ ಇದು ಒಂದು ಜಾತಿಯ ಅಕ್ಟೋಪಸ್. ಇದರ ವೈಜ್ಞಾನಿಕ ಹೆಸರು ಬಿಗ್ ಬ್ಲೂ ಅಕ್ಟೋಪಸ್. ಇದನ್ನು “ಡೆವಿಲ್ ಫಿಶ್” ಎಂದು ಕರೆಯುತ್ತಾರೆ.
ಅರಬ್ಬೀ ಸಮುದ್ರ ಮತ್ತು ಹಿಂದೂ ಮಹಾ ಸಾಗರದ ಕಲ್ಲು ಬಂಡೆಗಳ ಅಡಿಯಲ್ಲಿ 150 ಮೀಟರ್ ಆಳದಲ್ಲಿ ಮೀನು ಜೀವಿಸುತ್ತದೆ. ಚೀನಾ, ಸಿಂಗಾಪುರ, ಹಾಂಗ್ ಕಾಂಗ್ ನಲ್ಲಿ ಈ ಮೀನಿಗೆ ಬೇಡಿಕೆ ಹೆಚ್ಚು. ಸಂತಾನೋತ್ಪತ್ತಿ ಬಳಿಕ ಗಂಡು ಮೀನು ಸತ್ತರೆ, ಹೆಣ್ಣು ಮೀನು ಮರಿ ಹಾಕಿ ಅಸುನೀಗುತ್ತದೆ. ಇದು ಈ ತಳಿಯ ವಿಶೇಷತೆ.








