ಮೊದಲ ಟೆಸ್ಟ್ : ಅರ್ಧಶತಕ ಸಿಡಿಸಿ ಶುಭಮನ್ ಗಿಲ್ ಔಟ್..

1 min read
Gill fifty Saaksha tv

ಮೊದಲ ಟೆಸ್ಟ್ : ಅರ್ಧಶತಕ ಸಿಡಿಸಿ ಶುಭಮನ್ ಗಿಲ್ ಔಟ್..

ಕಾನ್ಪುರ : ನ್ಯೂಜಿಲೆಂಡ್ ವಿರುದ್ಧದ ಎರಡು ಮ್ಯಾಚ್ ಗಳ ಟೆಸ್ಟ್ ಸರಣಿಯೂ ಇಂದಿನಿಂದ ಕಾನ್ಪುರದಲ್ಲಿ ಆರಂಭಗೊಂಡಿದೆ. ಇಂದಿನ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ ಸದ್ಯ 2 ವಿಕೆಟ್ ನಷ್ಟಕ್ಕೆ 96 ರನ್ ಗಳಿಸಿದೆ.

ಸ್ಟಾರ್ ಆಟಗಾರರ ಅನುಪಸ್ಥಿತಿಯಲ್ಲಿ ಮೈದಾನಕ್ಕಿಳಿದ ಭಾರತದ ಪರ ಯುವ ಆಟಗಾರರಾದ ಮಯಾಂಕ್ ಅಗರ್ ವಾಲ್, ಶುಭ್ ಮನ್ ಗಿಲ್ ಆರಂಭಿಕರಾಗಿ ಕಣಕ್ಕಿಳಿದರು.

ಆದರೆ, ತಂಡದ ಮೊತ್ತ 21 ರನ್ ಗಳಾಗಿದ್ದಾಗಲೇ 28 ಎಸೆತಗಳಲ್ಲಿ 13 ರನ್ ಬಾರಿಸಿದ್ದ ಅಗರ್ವಾಲ್, ಜೆಮಿಸನ್ ಬೌಲಿಂಗ್‍ನಲ್ಲಿ ಟಾಮ್ ಬ್ಲಂಡೆಲ್ ಗೆ ಕ್ಯಾಚ್ ನೀಡಿ ಔಟಾದರು.

Gill fifty Saaksha tv

ಇದಾದ ಬಳಿಕ ಕ್ರೀಸ್ ಗೆ ಬಂದ ಟೆಸ್ಟ್ ಸ್ಪೆಷೆಲಿಸ್ಟ್ ಪೂಜಾರಾ, ರಕ್ಷಣಾತ್ಮಕ ಆಟಕ್ಕೆ ಮುಂದಾದರು. ಗಿಲ್ (52) ಜೊತೆಗೂಡಿದ ಪೂಜಾರ (15 ರನ್) ರಕ್ಷಣಾತ್ಮಕ ಆಟದ ಮೂಲಕ ಎರಡನೇ ವಿಕೆಟ್‍ಗೆ 61 ರನ್ ಸೇರಿಸಿದರು.

ಈ ಮಧ್ಯೆ ಭಾರತ ತಂಡ ಶುಭಮನ್ ಗಿಲ್ ಅವರು ಅರ್ಧಶತಕ ಬಾರಿಸಿದರು. ಭೋಜನ ವಿರಾಮದ ವೇಳೆಗೆ ಭಾರತ ತಂಡ 1 ವಿಕೆಟ್ ಗೆ 82 ರನ್ ಗಳಿಸಿತ್ತು.

ಬಳಿಕ ಬ್ಯಾಟಿಂಗ್ ಆರಂಭಿಸಿದ ಭಾರತಕ್ಕೆ ನ್ಯೂಜಿಲೆಂಡ್ ಬೌಲರ್ ಜಿಮಿಸನ್ ಮತ್ತೆ ಶಾಕ್ ನೀಡಿದರು. 52 ರನ್ ಗಳಿಸಿದ್ದ ಗಿಲ್ ಕ್ಲೀನ್ ಬೌಲ್ಡ್ ಆದರು.

ಸದ್ಯ ಕ್ರೀಸ್ ನಲ್ಲಿ ಚೇತೇಶ್ವರ ಪೂಜಾರಾ ಮತ್ತು ನಾಯಕ ಅಜಿಂಕ್ಯ ರಹಾನೆ ಇದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd