ಸೆನ್ಸಾರ್ ಗೆ ರೆಡಿಯಾದ ಗಿರ್ಕಿ… ಜನವರಿಯಲ್ಲಿ ರಿಲೀಸ್ ಗೆ ಪ್ಲಾನ್..!

1 min read
divya uruduga girki kannda film saakshatv

ಸೆನ್ಸಾರ್ ಗೆ ರೆಡಿಯಾದ ಗಿರ್ಕಿ… ಜನವರಿಯಲ್ಲಿ ರಿಲೀಸ್ ಗೆ ಪ್ಲಾನ್..!

girki kannada film saakshatv ಎದಿತ್ ಫಿಲ್ಮ್ ಫ್ಯಾಕ್ಟರಿ ಸಂಸ್ಥೆಯಡಿಯಲ್ಲಿ ಮೊಟ್ಟ ಮೊದಲ ಬಾರಿಗೆ ಹಾಸ್ಯನಟ ತರಂಗ ವಿಶ್ವ ಅವರು ನಿರ್ಮಿಸುತ್ತಿರುವ ಚಿತ್ರ ಗಿರ್ಕಿ
ಗಿರ್ಕಿ ಚಿತ್ರ ವಾಸುಕಿ ಮೂವೀಸ್ ಪೆÇ್ರಡಕ್ಷನ್ಸ್ ಸಹಯೋಗದೊಂದಿಗೆ ನಿರ್ಮಾಣವಾಗುತ್ತಿದೆ. ಈ ಚಿತ್ರಕ್ಕೆ ಯೋಗರಾಜ್ ಭಟ್ ಅವರ ಶಿಷ್ಯ ವೀರೇಶ್ ಪಿ ಎಮ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರದ ಕೆಲಸಗಳು ಸಂಪೂರ್ಣವಾಗಿ ಮುಗಿದಿದೆ. ಇದೀಗ ಸೆನ್ಸಾರ್ ಗೆ ಕಳಿಸಲು ಚಿತ್ರ ತಂಡ ಸಿದ್ಧವಾಗಿದೆ.
ಚಿತ್ರದ ಮುಖ್ಯ ಭೂಮಿಕೆಯಲ್ಲಿ ವಿಲೋಕ್ ರಾಜ್, ತರಂಗ ವಿಶ್ವ, ಬಿಗ್ ಬಾಸ್ ಖ್ಯಾತಿಯ ದಿವ್ಯ ಉರುಡುಗ ಮತ್ತು ರಾಶಿ ಮಹದೇವ್ ಅವರು ನಟಿಸಿದ್ದಾರೆ.
ಚಿತ್ರದಲ್ಲಿ ಎರಡು ಫೈಟ್ ಮತ್ತು ಮೂರು ಗೀತೆಗಳಿದ್ದು, ವೀರ್ ಸಮರ್ಥ್ ಅವರು ಸಂಗೀತ ಸಂಯೋಜಿಸಿದ್ದಾರೆ.
ಇತ್ತೀಚಿಗಷ್ಟೇ ನಿರ್ದೇಶಕರೇ ಬರೆದಿರುವ “ಗಿರ್ಕಿ” ಟೈಟಲ್ ಟ್ರ್ಯಾಕ್ ನ್ನು ರಘು ದೀಕ್ಷಿತ್ ಅವರು ಹಾಡಿದ್ದು ಗೀತೆ ಅದ್ಭುತವಾಗಿ ಮೂಡಿಬಂದಿದೆ. ಇನ್ನು ಈ ಚಿತ್ರ ಜನವರಿ ಕೊನೆಯ ವಾರದಲ್ಲಿ ಬಿಡುಗಡೆ ಮಾಡುವುದಾಗಿ ಚಿತ್ರ ತಂಡ ಯೋಜನೆ ಹಾಕಿಕೊಂಡಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd