ನೇಣು ಬಿಗಿದ ಸ್ಥಿತಿಯಲ್ಲಿ ರೂಪದರ್ಶಿಯ ಶವ ಪತ್ತೆ : ಗಾಂಜಾ ವ್ಯಸನಿಗಳಿಂದ ಕೊಲೆ ಆರೋಪ..!

1 min read

ನೇಣು ಬಿಗಿದ ಸ್ಥಿತಿಯಲ್ಲಿ ರೂಪದರ್ಶಿಯ ಶವ ಪತ್ತೆ : ಗಾಂಜಾ ವ್ಯಸನಿಗಳಿಂದ ಕೊಲೆ ಆರೋಪ..!

ಮಂಗಳೂರು : ಅನುಮಾನಾಸ್ಪಾದ ರೀತಿಯಯಲ್ಲಿ 19 ವರ್ಷದ ಯುವತಿಯ ಮೃತದೇಹವು ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇಂತದದೊಂದು ಘಟನೆ ಮಂಗಳೂರಿನ ಕುಂಪಲ ಆಶ್ರಯ ಕಾಲನಿಯ ಮನೆಯಲ್ಲಿ ನಡೆದಿದೆ. ಆದರೆ ಸಾವಿನ ಸುತ್ತ ಸಾಕಷ್ಟು ಅನಯುಮಾನಗಳು ಕೂಡ ಹುಟ್ಟಿಕೊಂಡಿವೆ. ಇದು ಆತ್ಮಹತ್ಯೆ ಅಲ್ಲ ಕೊಲೆ ಎಂಬ ಆರೋಪಗಳು ಬಲವಾಗಿ ಕೇಳಿ ಬರುತ್ತಿವೆ. 

19 ವರ್ಷದ ಪ್ರೇಕ್ಷಾ ಎಚ್ ಪಿ ಗ್ಯಾಸ್ ಏಜನ್ಸಿಯಲ್ಲಿ ಕಾರ್ಮಿಕರಾಗಿರುವ ಚಿತ್ತಪ್ರಸಾದ್ ಮತ್ತು ಸ್ಥಳೀಯ ಅಂಗನವಾಡಿ ಕಾರ್ಯಕರ್ತೆ ವನಿತಾ ದಂಪತಿಯ 2ನೇ ಮಗಳಾಗಿದ್ದಳು. ಇನ್ನೂ ಮಾಡಲ್ ಆಗಿದ್ದ ಪ್ರೇಕ್ಷಾ ನಿನ್ನೆ ಅಂದ್ರೆ ಆತ್ಮಹತ್ಯೆಗೆ ಶರಣಾದ ದಿನವೇ ಪೋಟೋ ಶೂಟ್ ಗೆ ಬೆಂಗಳೂರಿಗೆ ತೆರಳುವ ಸಿದ್ದತೆಯಲ್ಲಿದ್ದಳು. ಆದರೆ ಇದೀಗ ಉಸಿರು ನಿಲ್ಲಿಸಿದ್ದಾಳೆ. ಆದ್ರೆ ಇದು ಆತ್ಮಹತ್ಯೆ ಅಲ್ಲ ಕೊಲೆ ಎಂದೇ ಹೇಳಲಾಗ್ತಿದೆ.
ಕಾರಣ ತನ್ನ ರೂಮಿನಲ್ಲಿ ಫ್ಯಾನ್ ಗೆ ದುಪ್ಪಟ್ಟಾದ ಸಹಾಯದಿಂದ ನೇಣು ಹಾಕಿರುವ ಸ್ಥಿತಿಯಲ್ಲಿ ಈಕೆ ದೇಹವು ಪತ್ತೆಯಾಗಿದೆ. ಆದ್ರೆ ಕಾಲುಗಳು ಬೆಡ್ ಮೇಲೆಯೇ ಇರುವ ಸ್ಥಿತಿಯಲ್ಲಿದ್ದು, ಯಾರೋ ಕೊಲೆ ಮಾಡಿ ಫ್ಯಾನ್ ಗೆ ನೇತು ಹಾಕಿರುವಂತಿದೆ. ಅಲ್ಲದೇ ಸ್ಥಳೀಯರು ಮೂವರು ಗಾಂಜಾ ವ್ಯಸನಿ ಯುವಕರು ಈಕೆಯ ಮನೆ ಬಳಿ ತೆರಳಿದ್ದನ್ನ ನೋಡಿರುವುದಾಗಿಯೂ ಹೇಳಿದ್ದಾರೆ. ಅಲ್ಲೇ ಮತ್ತೊಬ್ಬ ಯುವಕನ ಬಗ್ಗೆಯೂ ಹೇಳಿದ್ದಾರೆ. ಅವರ ಮೇಲೆಯೇ ಅನುಮಾನಗಳು ಬ¯ವಾಗಿವೆ.

ಇನ್ನೂ ಈ ಯುವಕgನ್ನ ಸೌರವ್, ಯತೀರಾಜ್, ಭವಿತ್ ಎಂದು ಗುರುತಿಸಲಾಗಿದೆ. ಇವರ ಪೈಕಿ ಭವಿತ್ ಸ್ಥಳೀಯ ಕಾಂಗ್ರೆಸ್ ಮುಖಂಡನ ಮಗನಾಗಿದ್ದು ಗಾಂಜಾ ವ್ಯಸನಿಯಾಗಿದ್ದ ಎಂಬ ಮಾಹಿತಿಯೂ ಇದ್ದು, ಉಳ್ಳಾಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಆರಂಭಿಸಿದ್ದಾರೆ. ಸಂಪೂರ್ಣ ತನಿಖೆಯ ನಂತರವೇ ಸತ್ಯಾಸತ್ಯತೆ ಗೊತ್ತಾಗಬೇಕಿದೆ.

ಮಹಿಳೆ ಮೇಲೆ ಅತ್ಯಾಚಾರವೆಸಗಿದ ಕಾಮುಕ : ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಆರೋಪಿಯ ಪತ್ನಿ..!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd