ಇಷ್ಟವಿಲ್ಲದ ಮದುವೆಗೆ ಒತ್ತಾಯ : ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಸಾಫ್ಟ್ವೇರ್ ಇಂಜಿನಿಯರ್..!
ತನಗೆ ಮದುವೆಯಾಗಲು ಇಷ್ಟವಿಲ್ಲವೆಂದರೂ ಕುಟುಂಬಸ್ಥರು ಒತ್ತಾಯ ಮಾಡಿದ ಹಿನ್ನೆಲೆ ಸಾಫ್ಟ್ವೇರ್ ಇಂಜಿನಿಯರ್ ಒಬ್ಬಳು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಾರ್ಖಂಡ್ ನಲ್ಲಿ ನಡೆದಿದೆ. ಡೆತ್ ನೋಟ್ ನಲ್ಲಿ ಆತನನ್ನು ಮದುವೆಯಾಗಲು ನನಗೆ ಇಷ್ಟವಿಲ್ಲ, ಆದರೆ ನೀವು ನನ್ನ ಮಾತನ್ನು ಕೇಳುತ್ತಿಲ್ಲ, ಮದುವೆಯಾಗುವಂತೆ ಒತ್ತಾಯ ಮಾಡುತ್ತಿದ್ದೀರಿ, ಆದ್ದರಿಂದ ಸಾಯದೇ ನನಗೆ ಬೇರೆ ದಾರಿ ಉಳಿದಿಲ್ಲ ಎಂದು ಬರೆದು ಸಾವಿಗೆ ಶರಣಾಗಿದ್ದಾಳೆ.
ಲವ್ ಪ್ರೊಪೊಸಲ್ ಗೆ ಪ್ರತಿಕ್ರಿಯಿಸಲು ಸಮಯಬೇಕು ಎಂದ ಯುವತಿ ಗತಿ ಏನಾಯ್ತು ನೋಡಿ..!
26 ವರ್ಷದ ದ್ರೌಪದಿ ಕುಮಾರಿ ಎಂಬ ವತಿ ಈ ರೀತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂಡಿಯನ್ ಆಯಿಲ್ ಕಾರ್ಪೋರೇಶನ್ ಕಂಪೆನಿಯಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ದ್ರೌಪದಿಗೆ ಮನೆಯವರು ಒತ್ತಾಯಪೂರ್ವಕವಾಗಿ ಮದುವೆ ಮಾಡಲು ಹೊರಟಿದ್ದರು. ಮದುವೆ ಇಷ್ಟವಿಲ್ಲವೆಂದು ಅನೇಕ ಬಾರಿ ಹೇಳಿದ್ದರೂ ಮನೆಯವರು ಆಕೆಯ ಮಾತನ್ನ ಕೇಳದೇ ಮದುವೆ ನಿಶ್ಚಯ ಮಾಡಿದ್ದರು. ಆದ್ದರಿಂದ ರಾತ್ರಿ ಎಲ್ಲರೂ ಮಲಗಿದ್ದ ವೇಳೆ ಆತ್ಮಹತ್ಯೆ ಮಾಡಿಕೊಮಡಿದ್ದಾಳೆ. ಬೆಳಗ್ಗೆ ಸುಮಾರು ಹೊತ್ತಾದರೂ ಬಾಗಿಲು ತೆರೆದಿರಲಿಲ್ಲ. ಇದರಿಂದ ಗಾಬರಿಗೊಂಡ ಕುಟುಂಬಸ್ಥರು ಬಾಗಿಲು ಒಡೆದು ನೋಡಿದಾಗ ಘಟನೆ ಬೆಳಕಿಗೆ ಬಂದಿದ್ದು, ಡೆತ್ ನೋಟ್ ಪತ್ತೆಯಾಗಿದೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ದ್ರೌಪದಿ ಕುಮಾರಿಯ ಮೊಬೈಲ್, ಲಾಪ್ ಟಾಪ್ ಪರಿಶೀಲನೆ ನಡೆಸುತ್ತಿದ್ದಾರೆ.