ಮತ್ತೆ ಕ್ಷಮಾದಾನ ಅರ್ಜಿ ಸಲ್ಲಿಸಿದ ಕೊಲೆ ಅಪರಾಧಿ ಶಬನಂ..!
ನವದೆಹಲಿ: ತನ್ನದೇ ಕುಟುಂಬದ 7 ಜನರನ್ನ ಕೊಲೆ ಮಾಡಿ ಗಲ್ಲು ಶಿಕ್ಷೆಗೆ ಹುರಿಯಾಗಿರುವ ಶಬನಂಗೆ ಶೀಘ್ರವೇ ಡೆತ್ ನೋಟ್ ಜಾರಿಯಾಗಲಿದೆ. ಈಕೆ ಈ ಹಿಂದೆ ಸಲ್ಲಿಸಿದ್ದ ಕ್ಷಮಾಧಾಣ ಅರ್ಜಿಯನ್ನ ರಾಷ್ಟ್ರಪತಿಗಳು ತಿರಸ್ಕರಿಸಿದ್ದರು, ಹೈಕೋರ್ಟ್ ತೀರ್ನ್ನು ಎತ್ತಿಹಿಡಿದಿದ್ದ ಸುಪ್ರೀಂ ಕೋರ್ಟ್ ಮರಣದಂಡನೆಯನ್ನ ವಿಧಿಸಿದೆ. ಈ ಮೂಲಕ ಸ್ವತಂತ್ರ ಭಾರತದ ಇತಿಹಾದಲ್ಲೇ ಮೊದಲ ಬಾರಿಗೆ ಗಲ್ಲು ಶಿಕ್ಷೆಗೆ ಒಳಗಾದ ಮಹಿಳಾ ಖೈದಿಯಾಗಿದ್ದಾಳೆ ಶಬಂ. ಆದ್ರೆ ಸಾವು ಸಮೀಪದಲ್ಲೇ ಇದ್ದರು ಮತ್ತೆ ನೇಣಿನ ಕುಣಿಕೆಯಿಂದ ಪಾರಾಗುವ ಪ್ರಯತ್ನಗಳನ್ನ ಮಾಡುತ್ತಲೇ ಇದ್ದಾಳೆ. ಇದೀಗ ಮತ್ತೊಮ್ಮೆ ಕ್ಷಮಾದಾನ ಕೋರಿ ಉತ್ತರ ಪ್ರದೇಶ ರಾಜ್ಯಪಾಲ ಆನಂದಿಬೆನ್ ಪಟೇಲ್‌ಗೆ ಹೊಸ ಅರ್ಜಿ ಸಲ್ಲಿಸಿದ್ದಾಳೆ.
ಫುಟ್ ಪಾತ್ ನಲ್ಲಿ ಮಲಗಿದ್ದ ಹುಡುಗಿಯ ಮೇಲೆ ಅತ್ಯಚಾರವೆಸಗಿದ ಕೀಚಕ..!
2008ರ ಏಪ್ರಿಲ್ 14ರಂದು ಪ್ರಿಯತಮ ಸಲೀಂನೊಂದಿಗೆ ಸೇರಿ ತನ್ನ ಕುಟುಂಬದ ಏಳು ಮಂದಿಯನ್ನು ಕೊಲೆ ಮಾಡಿದ್ದ ಪ್ರಕರಣದಲ್ಲಿ ಶಬನಂಗೆ ಮರಣ ದಂಡನೆ ಶಿಕ್ಷೆಯಾಗಿತ್ತು. 2010ರಲ್ಲಿ ಈ ಇಬ್ಬರೂ ಸೆಷನ್ ಕೋರ್ಟ್ ಆದೇಶ ಪ್ರಶ್ನಿಸಿ ಅಲಹಾಬಾದ್ ಹೈ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಹೈಕೋರ್ಟ್ ಕೂಡ ಮರಣದಂಡನೆ ಶಿಕ್ಷೆ ಎತ್ತಿಹಿಡಿದಿತ್ತು. ನಂತರ 2015ರಲ್ಲಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದು, ಅಲ್ಲಿಯೂ ಇವರಿಗೆ ಸೋಲಾಗಿತ್ತು.
ಲವ್ ಪ್ರೊಪೊಸಲ್ ಗೆ ಪ್ರತಿಕ್ರಿಯಿಸಲು ಸಮಯಬೇಕು ಎಂದ ಯುವತಿ ಗತಿ ಏನಾಯ್ತು ನೋಡಿ..!
ಈ ಬೆಳವಣಿಗೆ ನಂತರ ಶಬನಂ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಕ್ಷಮಾದಾನ ಅರ್ಜಿ ಸಲ್ಲಿಸಿದ್ದರುಳು. ಆದ್ರೆ ಅಲ್ಲಿಯೂ ಅರ್ಜಿ ತಿರಸ್ಕಾರಗೊಂಡಿತ್ತು. ಇದೀಗ ಮತ್ತೆ ಅರ್ಜಿ ಸಲ್ಲಿಸಿದ್ದಾಳೆ. ಮಥುರಾ ಜೈಲಿನಲ್ಲಿ ಶಬನಂ ಗಲ್ಲಿಗೇರಿಸಲು ಈಗಾಗಲೇ ಸಿದ್ಧತೆ ನಡೆಯುತ್ತಿದೆ. ಉತ್ತರ ಪ್ರದೇಶದ ಮಥುರಾದಲ್ಲಿ ನೇಣುಗಂಬಕ್ಕೆ ಏರುತ್ತಿರುವ ಏಕೈಕ ಮಹಿಳಾ ಕೈದಿ ಕೂಡ ಆಗಿದ್ದಾಳೆ ಶಬನಂ.