Haveri | ಹಾವು ಕಚ್ಚಿ ಐದು ವರ್ಷದ ಬಾಲಕಿ ಸಾವು
ಹಾವೇರಿ : ಹಾವು ಕಚ್ಚಿ ಐದು ವರ್ಷದ ಬಾಲಕಿ ಮೃತಪಟ್ಟಿರುವ ಘಟನೆ ಹಾವೇರಿಯ ನಾಗೇಂದ್ರ ಮಟ್ಟಿಯ ಹೊರವಲಯದಲ್ಲಿರುವ ಟೆಂಟ್ ನಲ್ಲಿ ನಡೆದಿದೆ.
5 ವರ್ಷದ ಒಲಿವ್ವ ಸುಂಕಣ್ಣ ಮೋತಿ ಮೃತ ಬಾಲಕಿಯಾಗಿದೆ. ಗುಡಿಸಲಲ್ಲಿ ಮಲಗಿದ್ದ ವೇಳೆ ಒಲಿವ್ವಗೆ ಇಂದು ಬೆಳಿಗ್ಗೆ 3 ಗಂಟೆ ಸುಮಾರಿಗೆ ಹಾವು ಕಚ್ಚಿದೆ.
ಆದ್ರೆ ಮಗುವಿಗೆ ಹಾವು ಕಚ್ಚಿವ ವಿಷಯ ಬೆಳಿಗ್ಗೆ 4 ಗಂಟೆಗೆ ಗೊತ್ತಾಗಿದೆ. ತಕ್ಷಣ ಪೋಷಕರು, ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.
ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಬಾಲಕಿ ಮೃತಪಟ್ಟಿದೆ. ಇನ್ನು ಮಗುವನ್ನ ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.