ಬೆಳಗಾವಿ: ಸಂಪ್ ಗೆ ಬಿದ್ದು 2 ವರ್ಷದ ಬಾಲಕಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ನಗರದ ಕಂಗ್ರಾಳ ಗಲ್ಲಿಯಲ್ಲಿ ಈ ಘಟನೆ ನಡೆದಿದೆ. ಎರಡು ವರ್ಷದ ಮಗು ಆಟವಾಡುತ್ತ ಹೋಗಿ ಸಂಪ್ ನಲ್ಲಿ ಬಿದ್ದಿದೆ. ಆದರೆ, ಮಗು ಬೀಳುವ ವೇಳೆ ಯಾರೂ ನೋಡದ ಹಿನ್ನೆಲೆಯಲ್ಲಿ ಮಗು ಸಾವನ್ನಪ್ಪಿದೆ.
ಸಾವನ್ನಪ್ಪಿದ ಮಗುವನ್ನು ಸಾಯೀಶಾ ಎಂದು ಗುರುತಿಸಲಾಗಿದೆ. ಮಗು ಆಟವಾಡುತ್ತ ಹೋಗಿ ಬಿದ್ದಿದೆ. ಆದರೆ, ಮನೆಯವರು ಇದನ್ನು ಗಮನಿಸಿಲ್ಲ. ನಂತರ ಮಗು ಕಾಣಿಸದಾದಾಗ ತೀವ್ರ ಹುಡುಕಾಟ ನಡೆಸಿದ್ದಾರೆ. ಆನಂತರ ಸಂಪ್ ತೆರೆದು ನೋಡಿದಾಗ ಮಗು ಬಿದ್ದಿರುವುದು ಕಂಡಿದೆ. ಕೂಡಲೇ ಮಗುವನ್ನು ಮಗುವನ್ನು ಆಸ್ಪತ್ರೆಗೆ ದಾಖಲಿಸಲು ಯತ್ನಿಸಲಾಗಿದೆ. ಆದರೆ, ಆಗಲೇ ಮಗು ಸಾವನ್ನಪ್ಪಿದೆ ಎಂದು ವೈದ್ಯರು ಹೇಳಿದ್ದಾರೆ. ಖಡೇ ಬಜಾರ್ ಪೊಲೀಸ್ (Khade Bazaar Police) ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.