ಬಿಟ್ಟು ಹೋದ ಪ್ರಿಯಕರನ ವಶೀಕರಣಕ್ಕೆ ಮಾಠ ಮಂತ್ರದ ಮೊರೆ ಹೋದ ಯುವತಿ – ಲಕ್ಷ ಲಕ್ಷ ಪಡೆದು ಕೈ ಕೊಟ್ಟ ಬಾಬಾ..!
ಮುಂಬೈ: ಪ್ರೀತಿ ಪ್ರೇಮದಲ್ಲಿ ಮೋಸ , ಬ್ರೇಕ್ ಅಪ್ ಆದ್ರೆ ಆ ದುಃಖದಲ್ಲಿ ಅನೇಕರು ತಪ್ಪು ದಾರಿಗಳನ್ನ ಹಿಡಿಯುತ್ತಾರೆ… ಆದ್ರೆ ಇಲ್ಲೊಬ್ಬ ಯುವತಿ ತನ್ನನ್ನು ಬಿಟ್ಟು ಹೋದ ಪ್ರಿಯಕರನನ್ನು ವಾಪಸ್ ಪಡೆಯುವುದಕ್ಕಾಗಿ ಮಂತ್ರವಾದಿಯ ಮೊರೆ ಹೋಗಿ ಬರೋಬ್ಬರಿ 4.57 ಲಕ್ಷ ರೂ. ಕಳೆದುಕೊಂಡು ವಂಚನೆಗೆ ಒಳಗಾಗಿದ್ದಾಲೆ.. ಈ ಘಟನೆ ಮುಂಬೈನಲ್ಲಿ ನಡೆದಿದೆ.
ಉತ್ತರಪ್ರದೇಶದ ಮೀರತ್ ಮೂಲದ ಬಾಬಾ ಕರೀಂ ಖಾನ್ ಬೆಂಗಾಲಿ ಅಲಿಯಾಸ್ ವಾಸಿಂ ಖಾನ್ ಎಂಬಾತನಿಗೆ ಖರ್ಗಾರ್ನ ನಿವಾಸಿಯಾಗಿರುವ 26 ವರ್ಷದ ಯುವತಿ ಹಣ ನೀಡಿ ಮೋಸಹೋಗಿದ್ದಾಳೆ. ಈ ಯುವತಿ ತನ್ನನ್ನ ಬಿಟ್ಟು ಹೋಗಿದ್ದ ಪ್ರಿಯಕರನನ್ನ ವಾಪಸ್ ಪಡೆಯಲು ವಶೀಕರಣ ಮಾಡಿಸಿಕೊಳ್ಳುವ ದಾರಿ ಹಿಡಿದು ಕೊನೆಗೆ ತಾನೇ ವಂಚನೆಗೆ ಒಳಗಾಗಿದ್ದಾಳೆ..
“5ನೇ ತರಗತಿ ಮಕ್ಕಳಿಗೆ ಶಾಲೆಯಿಂದಲೇ ಉಚಿತ ಕಾಂಡೋಮ್”
ಈ ಬಾಬಾ ಪ್ರಿಯಕರ ಬಂದೇ ಬರುತ್ತಾನೆ ಎಂದು ಯುವತಿಯನ್ನ ನಂಬಿಸಿದ್ಧಾನೆ. ಅದಕ್ಕಾಗಿ ವಿಶೇಷ ಪೂಜೆ ಮಾಡಿಕೊಡುವೆ ಎಂದು ನಂಬಿಸಿ ಆಕೆಯಿಂದ ಕಂತುಗಳಲ್ಲಿ 4.57 ಲಕ್ಷ ರೂ.ಗಳನ್ನು ವಸೂಲಿ ಮಾಡಿದ್ದಾನೆ. ಆದರೆ ಪ್ರಿಯಕರನೂ ಬರಲಿಲ್ಲ. ಲಕ್ಷಾಂತರ ದುಡ್ಡು ವಾಪಸ್ಸಾಗಲಿಲ್ಲ. ನಂತರ ಯುವತಿಗೆ ಮೋಸ ಹೋಗಿದ್ದು ತಿಳಿದು ಪೊಲೀಸರ ಮೊರೆ ಹೋಗಿದ್ದಾಳೆ.
ರೈಲುಗಳ ಒಳಗೆ ಈ ಬಾಬಾನ ಪೋಸ್ಟರ್ ನೋಡಿದ್ದ ಯುವತಿ ಬ್ಲ್ಯಾಕ್ ಮ್ಯಾಜಿಕ್ ಮಾಡಿ ತನ್ನ ಪ್ರಿಯಕರನನ್ನು ಮರಳಿ ಪಡೆಯಬಹುದೆಂದು ನಂಬಿ ಈತನ ಬಳಿ ಹೋಗಿರುವುದಾಗಿ ಹೇಳಿದ್ದಾಳೆ. ದುಡ್ಡನ್ನು ವಾಪಸ್ ಕೊಡುವಂತೆ ಸಂತ್ರಸ್ತೆಗೆ ಕೇಳಿದಾಗ ಆಕೆ ಬೆದರಿಕೆಯೊಡ್ಡಿ ಪೊಲೀಸರಿಗೆ ದೂರು ಕೊಟ್ಟಲ್ಲಿ ರಸ್ತೆ ಅಪಘಾತದಲ್ಲಿ ಸಾಯುವಂತೆ ಮಾಟ ಮಾಡುವುದಾಗಿ ಹೆದರಿಸಿದ್ದ ಎಂದು ವಿವರಿಸಿದ್ದಾಳೆ.