ರಾಯಲ್ಸ್ ಪಂದ್ಯದಲ್ಲಿ ಒಂದಾದ loyal ಫ್ಯಾನ್ಸ್ – ಪ್ರೇಮ ನಿವೇದನೆಯ ವೀಡಿಯೋ ವೈರಲ್…
ಪುಣೆಯಲ್ಲಿ ನಡೆದ ಚೆನೈ vs ಬೆಂಗಳೂರು IPL ಪಂದ್ಯದಲ್ಲಿ ಕುತೂಹಲಕಾರಿ ಘಟನೆಯೊಂದು ಕ್ಯಾಮರಾದಲ್ಲಿ ಸೆರೆಯಾಗಿದೆ. ಚೆನ್ನೈ ತಂಡ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ಆರ್ ಸಿ ಬಿ ಅಭಿಮಾನಿಗಳ ಪ್ರೇಮ ನಿವೇದನೆ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿದೆ. ಕೆಂಪು ಜೆರ್ಸಿ ತೊಟ್ಟಿದ್ದ ಹುಡುಗಿಯೊಬ್ಬಳು ಮೊಣಕಾಲಿನ ಮೇಲೆ ಕುಳಿತು ಆರ್ ಸಿ ಬಿ ಅಭಿಮಾನಿಗೆ ಪ್ರಪೋಸ್ ಮಾಡಿದ್ದಾಳೆ. ಹುಡುಗನೂ ತನ್ನ ಗೆಳತಿಯನ್ನು ಅಪ್ಪಿಕೊಂಡು ಉಂಗುರ ತೊಡಿಸಿ ಪ್ರಪೋಸಲ್ ಒಪ್ಪಿಕೊಂಡಿದ್ದಾನೆ. ಅಲ್ಲಿಂದ ಪ್ರೇಕ್ಷರು ಸಹ ಇವರಿಬ್ಬರಿಗೆ ಹಾರೈಸಿದ್ದಾರೆ. ಚೆನ್ನೈ ಇನಿಂಗ್ಸ್‌ನ 11ನೇ ಓವರ್‌ನಲ್ಲಿ ಈ ಜೋಡಿಯನ್ನು ಟಿವಿ ಪರದೆಯ ಮೇಲೆ ತೋರಿಸಲಾಯಿತು.
ಸ್ಟೇಡಿಯಂನಲ್ಲಿದ್ದ ಪ್ರೇಕ್ಷಕರು ಸಹ ಚಪ್ಪಾಳೆ ತಟ್ಟಿ ಇಬ್ಬರನ್ನೂ ಅಭಿನಂದಿಸಿದರು. ಈ ವಿಶಿಷ್ಟ ಪ್ರೇಮ ನಿವೇದನೆಯನ್ನ ಮೈದಾನದಲ್ಲಿದ್ದ ದೊಡ್ಡ ಪರದೆಯ ಮೇಲೆ ನೇರಪ್ರಸಾರ ಮಾಡಲಾಯಿತು. ಈ ಸಂಪೂರ್ಣ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಸೋಷಿಯಲ್ ಮೀಡಿಯಾ ಬಳಕೆದಾರರು ಬಗೆ ಬಗೆಯ ಕಮೆಂಟ್, ಪ್ರತಿಕ್ರಿಯೆಗಳನ್ನ ನೀಡುತ್ತಿದ್ದಾರೆ.
Girl proposes at CSK vs RCB game pic.twitter.com/eLwzBj5Y0F
— Tushar (@Tushar72991364) May 4, 2022
ಮಾಜಿ ಆಟಗಾರ ವಾಸಿಂ ಜಾಫರ್ ಟ್ವಿಟ್ ಮಾಡಿ “ ಬುದ್ದಿವಂತ ಹುಡುಗಿ ಆರ್ ಸಿ ಬಿ ಫ್ಯಾನ್ ಗೆ ಪ್ರಪೋಸ್ ಮಾಡಿದ್ದಾಳೆ. ಗೆಳೆಯ ಆರ್ ಸಿ ಬಿ ಗೆ ನಿಷ್ಠನಾಗಿ ಇರುತ್ತಾನಾದರೆ ಜತೆಗಾರ್ತಿಯೊಂದಿಗೂ ಹಾಗೇ ಇರುತ್ತಾನೆ. ಒಳ್ಳೆಯ ಕೆಲಸ ಹಾಗು ಪ್ರೇಮ ನಿವೇದನೆ ಮಾಡಲು ಒಳ್ಳೆಯ ದಿನ. ಶುಭವಾಗಲಿ ಎಂದು ಟ್ವಿಟ್ ಮಾಡಿದ್ದಾರೆ.
ಮೈದಾನದಲ್ಲಿ ಪ್ರೇಮ ನಿವೇದನೆಯೇನೂ ಹೊಸದಲ್ಲ. 2021 ರಲ್ಲಿ, ಚೆನ್ನೈ ಸೂಪರ್ ಕಿಂಗ್ಸ್ ವೇಗದ ಬೌಲರ್ ದೀಪಕ್ ಚಹಾರ್ ಅವರು ಬಿಗ್ ಬಾಸ್ ಖ್ಯಾತಿಯ ಸಿದ್ಧಾರ್ಥ್ ಭಾರದ್ವಾಜ್ ಅವರ ಸಹೋದರಿ ಜಯ ಭಾರದ್ವಾಜ್ ಅವರಿಗೆ ಪಂದ್ಯದ ವೇಳೆಯೆ ಪ್ರೇಮ ನಿವೇದನೆ ಮಾಡಿದ್ದರು.
ಪಂದ್ಯ ಗೆದ್ದ RCB
ಐಪಿಎಲ್ 2022 ರ 49 ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚೆನ್ನೈ ಸೂಪರ್ ಕಿಂಗ್ಸ್ ಅನ್ನು 13 ರನ್‌ಗಳಿಂದ ಸೋಲಿಸಿತು. 174 ರನ್‌ಗಳ ಗುರಿ ಬೆನ್ನತ್ತಿದ ಸಿ ಎಸ್ ಕೆ ಕೇವಲ 160/8 ಸ್ಕೋರ್ ಮಾಡಿ ಪಂದ್ಯವನ್ನ ಕೈ ಚೆಲ್ಲಿತು.








