ಇಸ್ಲಾಮಾಬಾದ್ : ಭಾರತ 2021ರ ಟಿ20 ವಿಶ್ವಕಪ್ ಹಾಗೂ 2023ರ ಏಕದಿನ ಕ್ರಿಕೆಟ್ ಟೂರ್ನಿಗೆ ಅತಿಥ್ಯ ವಹಿಸಿಕೊಳ್ಳಲಿದೆ. ಈ ಹಿನ್ನೆಲೆ ನಮ್ಮ ತಂಡಕ್ಕೆ ಭಾರತ ಪ್ರವೇಶದ ಅನುಮತಿ ಸಿಗುತ್ತಾ..? ಐಸಿಸಿ ಟೂರ್ನಿಗಳಲ್ಲಿ ಪಾಕಿಸ್ತಾನದ ಆಡಲು ಆಟಗಾರರಿಗೆ ಭಾರತಕ್ಕೆ ಬರಲು ಅವಕಾಶ ನೀಡ್ತಾರಾ..? ಎಂಬ ಪ್ರಶ್ನೆಗಳು ಪಾಕಿಸ್ತಾನಕ್ಕೆ ಕಾಡಲು ಶುರುವಾಗಿದ್ದು, ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಐಸಿಸಿಗೆ ವಿಶೇಷ ಮನವಿವೊಂದನ್ನು ಮುಂದಿಟ್ಟಿದೆ.
ಅದುವೇ ಎರಡು ವಿಶ್ವಕಪ್ ಟೂರ್ನಿಗಳಲ್ಲಿ ಭಾಗವಹಿಸಲು ಪಾಕಿಸ್ತಾನ ಆಟಗಾರರಿಗೆ ಭಾರತಕ್ಕೆ ಪ್ರವೇಶ ನೀಡುವುದಾಗಿ ಬಿಸಿಸಿಐ ಲಿಖಿತ ಪೂರ್ವಕವಾಗಿ ಭರವಸೆ ನೀಡಬೇಕು ಎಂದು ಪಾಕ್ ಮನವಿ ಮಾಡಿದೆ.
ಈ ಕುರಿತು ಪಿಸಿಬಿ ಸಿಇಒ ವಸೀಂ ಖಾನ್ ಮಾತನಾಡಿದ್ದು, 2021, 2023ರ ವಿಶ್ವಕಪ್ ಟೂರ್ನಿಗಳಿಗೆ ಭಾರತ ಅತಿಥ್ಯ ವಹಿಸಲಿದೆ. ಈ ಎರಡು ಟೂರ್ನಿಗಳಲ್ಲಿ ಆಡಲು ಪಾಕಿಸ್ತಾನ ತಂಡಕ್ಕೆ ಯಾವುದೇ ಸಮಸ್ಯೆ ಇಲ್ಲದಂತೆ ಬಿಸಿಸಿಐನಿಂದ ಲಿಖಿತ ಭರವಸೆಯನ್ನು ಕೊಡಿಸುವಂತೆ ಐಸಿಸಿಗೆ ಮನವಿ ಮಾಡಿದ್ದೇವೆ. ಮುಖ್ಯವಾಗಿ ವೀಸಾ ಕುರಿತ ಎಲ್ಲಾ ಕ್ಲಿಯರೆನ್ಸ್ ನೀಡುವ ಅಗತ್ಯವಿದೆ ಎಂದು ತಿಳಿಸಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ನಡುವೆ ಕೆಲ ಸಮಯದಿಂದ ಉದ್ರಿಕ್ತ ವಾತಾವರಣ ನಿರ್ಮಾಣವಾಗಿರುವ ಹಿನ್ನೆಲೆ ಎರಡು ದೇಶಗಳ ಕ್ರಿಕೆಟ್ ತಂಡಗಳು ಐಸಿಸಿ ಮತ್ತು ಏಷ್ಯಾಕಪ್ ಕ್ರಿಕೆಟ್ ಟೂರ್ನಿಗಳಲ್ಲಿ ಮಾತ್ರ ಮುಖಾಮುಖಿ ಆಗುತ್ತಿವೆ.