ಮ್ಯಾಕ್ಸ್ ವೆಲ್ ದಂಡಯಾತ್ರೆ.. ಫೋರು.. ಸಿಕ್ಸರ್ ಗಳ ಸುನಾಮಿ glenn-maxwell saaksha tv
ಬಿಗ್ ಬ್ಯಾಷ್ ಲೀಗ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬ್ಯಾಟರ್, ಆಸ್ಟ್ರೇಲಿಯಾ ಕ್ರಿಕೆಟರ್ ಗ್ಲೇನ್ ಮ್ಯಾಕ್ಸ್ ವೆಲ್ ಧೂಳೆಬ್ಬಿಸಿದ್ದಾರೆ. ಪ್ರಸಕ್ತ ಬಿಗ್ ಬ್ಯಾಷ್ ಲೀಗ್ ನಲ್ಲಿ ಮೆಲ್ಬೋರ್ನ್ ಸ್ಟಾರ್ಸ್ ತಂಡ ಸಾರಥ್ಯ ವಹಿಸಿರುವ ಮ್ಯಾಕ್ಸಿ, ಪ್ರತಿ ಮ್ಯಾಚ್ ನಲ್ಲೂ ಹೌರಾ ಎನ್ನುವಂತಹ ಪ್ರದರ್ಶನ ನೀಡುತ್ತಿದ್ದಾರೆ. ಅದರಂತೆ ನಿನ್ನೆ ಸಿಡ್ನಿ ಸಿಕ್ಸರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಮ್ಯಾಕ್ಸಿ ರನ್ ಸುನಾಮಿ ಎಬ್ಬಿಸಿದ್ದಾರೆ.
ಬೌಂಡರಿ.. ಸಿಕ್ಸರ್ ಗಳೊಂದಿಗೆ ಆಕಾಶವೇ ಮಿತಿ ಎಂಬಂತೆ ರೊಚ್ಚಿಗೆದ್ದು ಬ್ಯಾಟ್ ಬೀಸಿದ ಮ್ಯಾಕ್ಸಿ 57 ಎಸೆತಗಳಲ್ಲಿ ಸೆಂಚೂರಿ ಬಾರಿಸಿ ಬಿಸಾಕಿದರು. ಪಂದ್ಯದಲ್ಲಿ 57 ಎಸೆತಗಳನ್ನು ಎದುರಿಸಿದ ಮ್ಯಾಕ್ಸ್ ವೆಲ್ 103 ರನ್ ಚಚ್ಚಿದರು.
ಕೇವಲ 54 ಎಸೆತಗಳಲ್ಲಿ 12 ಬೌಂಡರಿ, ಮೂರು ಸಿಕ್ಸರ್ ನೊಂದಿಗೆ ಟೂರ್ನಿಯಲ್ಲಿ ಮೊದಲ ಶತಕ ಸಿಡಿಸಿದರು. ಮೊದಲ ಐವತ್ತು ರನ್ ಗಳಿಗೆ 33 ಎಸೆತಗಳನ್ನು ತೆಗೆದುಕೊಂಡ ಮ್ಯಾಕ್ಸಿ, ನಂತರ ಟಾಪ್ ಗೇರ್ ನಲ್ಲಿ ಬ್ಯಾಟ್ ಬೀಸಿದರು. ಟಾಪ್ ಗೇರ್ ನಲ್ಲಿ ಎದುರಾಳಿ ತಂಡದ ಬೌಲರ್ ಗಳನ್ನು ಧೂಳಿಪಟ ಮಾಡಿದ ಮ್ಯಾಕ್ ವೆಲ್ 21 ಎಸೆತಗಳಲ್ಲಿ 50 ರನ್ ಸಿಡಿಸಿದರು.
ಇವರ ಬ್ಯಾಟಿಂಗ್ ನೆರವಿನೊಂದಿಗೆ ಮೆಲ್ ಬಾರ್ನ್ ಸ್ಟಾರ್ಸ್ ತಂಡವೂ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 177 ರನ್ ಗಳಿಸಿತು.
ಇನ್ನು ಗೆಲ್ಲಲು 178 ರನ್ ಗಳ ಗುರಿಯನ್ನ ಪಡೆದ ಸಿಡ್ನಿ ತಂಡವೂ ಆರಂಭದಿಂದಲೂ ಅಬ್ಬರಿಸುತ್ತಾ ಸಾಗಿತು. ಅದರಲ್ಲೂ ಯುವ ಆಟಗಾರ ಜೀಷ್ ಪಿಲಿಪ್, ಮ್ಯಾಕ್ಸ್ ವೆಲ್ ಬ್ಯಾಟಿಂಗ್ ಗೆ ಟಕ್ಕರ್ ಕೊಡುವಂತೆ ಬ್ಯಾಟ್ ಝಳಪಿಸಿದರು. 61 ಎಸೆತಗಳನ್ನು ಎದುರಿಸಿದ ಪಿಲಿಪ್ 11 ಬೌಂಡರಿ, ಒಂದು ಸಿಕ್ಸರ್ ನೆರವಿನೊಂದಿಗೆ 99 ರನ್ ಗಳಿಸಿದರು. ಅಲ್ಲದೇ 19.4 ಓವರ್ ಗಳಿಗೆ ಪಂದ್ಯವನ್ನ ಮುಗಿಸಿದರು.
ಪಿಲಿಪ್ ಕೊನೆಯವರೆಗೂ ಕ್ರೀಸ್ ನಲ್ಲಿ ನಿಂತು ತಂಡವನ್ನು ಗೆಲ್ಲಿಸಿದರೂ, ಒಂದು ರನ್ ನೊಂದಿಗೆ ಶತಕ ವಂಚಿತರಾದರು.