ಐಪಿಎಲ್ 2021 – ಟೀಕೆ – ಅವಮಾನಕ್ಕೆ ತಕ್ಕ ಉತ್ತರ ನೀಡುತ್ತಿದ್ದಾರೆ ಗ್ಲೇನ್ ಮ್ಯಾಕ್ಸ್ ವೆಲ್..!

1 min read
Royal Challengers Bangalore's Glenn Maxwell SAAKSHATV IPL2021

ಐಪಿಎಲ್ 2021 – ಟೀಕೆ – ಅವಮಾನಕ್ಕೆ ತಕ್ಕ ಉತ್ತರ ನೀಡುತ್ತಿದ್ದಾರೆ ಗ್ಲೇನ್ ಮ್ಯಾಕ್ಸ್ ವೆಲ್..!

Royal Challengers Bangalore's Glenn Maxwell  SAAKSHATV IPL2021ಗ್ಲೇನ್ ಮ್ಯಾಕ್ಸ್ ವೆಲ್.. ವಿಶ್ವ ಟಿ-20 ಕ್ರಿಕೆಟ್ ನ ಅದ್ಭುತ ಆಟಗಾರ. ಆಸ್ಟ್ರೇಲಿಯಾದ ಆಲ್ ರೌಂಡರ್ ವಿವಿಧ ಲೀಗ್ ಕ್ರಿಕೆಟ್ ಟೂರ್ನಿಗಳ ಬಹು ಬೇಡಿಕೆಯ ಆಟಗಾರ. ಹೀಗಾಗಿ ಸಹಜವಾಗಿಯೇ ದುಬಾರಿ ಪ್ಲೇಯರ್.
ಹೌದು, ಅದರಲ್ಲೂ ಐಪಿಎಲ್ ನಲ್ಲಿ ಗ್ಲೇನ್ ಮ್ಯಾಕ್ಸ್ ವೆಲ್ ಗೆ ಬಹಳ ಬೇಡಿಕೆ ಇದೆ. 2012ರಿಂದ ಐಪಿಎಲ್ ನಲ್ಲಿ ಆಡುತ್ತಿರುವ ಮ್ಯಾಕ್ಸ್ ವೆಲ್ ಸದ್ದು ಮಾಡಿದ್ದೂ ತೀರಾ ಕಡಿಮೆ. 2014ರಲ್ಲಿ 552 ರನ್ ದಾಖಲಿಸಿದ್ದರು. ಹಾಗೇ 2017ರಲ್ಲಿ 310 ರನ್ ಸಿಡಿಸಿದ್ದರು. ಇನ್ನುಳಿದ ಆರು ಆವೃತ್ತಿಗಳಲ್ಲಿ ಗ್ಲೇನ್ ಮ್ಯಾಕ್ಸ್ ವೆಲ್ 179ಕ್ಕಿಂತ ಜಾಸ್ತಿ ರನ್ ದಾಖಲಿಸಿಲ್ಲ.
ಹೀಗಾಗಿ ಗ್ಲೇನ್ ಮ್ಯಾಕ್ಸ್ ವೆಲ್ ವಿರುದ್ಧ ಸಾಕಷ್ಟು ಟೀಕೆಗಳು ಕೇಳಿಬಂದಿದ್ದವು. ಮುಖ್ಯವಾಗಿ ವೀರೆಂದ್ರ ಸೆಹ್ವಾಗ್ ಅವರಂತೂ ಮ್ಯಾಕ್ಸ್ ವೆಲ್ ಅವರ ಜಾತಕವನ್ನೇ ಬಯಲು ಮಾಡಿದ್ದರು. ಫ್ರಾಂಚೈಸಿಗಳು ಕೋಟಿ ಲೆಕ್ಕದಲ್ಲಿ ಹಣ ಕೊಟ್ಟು ಖರೀದಿಸಿದ್ರೂ ಅವರ ನಿರೀಕ್ಷೆಗೆ ತಕ್ಕಂತೆ ಆಡುತ್ತಿಲ್ಲ. ಮೋಜು ಮಸ್ತಿ ಅಂತ ಎಂಜಾಯ್ ಮಾಡುತ್ತಾರೆ. ಐಪಿಎಲ್ ಪಂದ್ಯಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಟೀಕೆ ಮಾಡಿದ್ದರು.
ಆದ್ರೂ ಪ್ರತಿ ಐಪಿಎಲ್ ಹರಾಜಿನಲ್ಲೂ ಗ್ಲೇನ್ ಮ್ಯಾಕ್ಸ್ ವೆಲ್ ಗೆ ತುಂಬನೇ ಬೇಡಿಕೆ. ಕಳೆದ ಹರಾಜಿ ನಲ್ಲೂ ಮ್ಯಾಕ್ಸ್ ವೆಲ್ ಅವರನ್ನು ಆರ್ ಸಿಬಿ ಖರೀದಿ ಮಾಡಿತ್ತು. ಇದೀಗ 9ನೇ ಬಾರಿ ಐಪಿಎಲ್ ನಲ್ಲಿ ಆಡುತ್ತಿರುವ ಮ್ಯಾಕ್ಸ್ ವೆಲ್ 11 ಪಂದ್ಯಗಳಲ್ಲಿ 350 ರನ್ ದಾಖಲಿಸಿದ್ದಾರೆ. ಇದರಲ್ಲಿ ಎರಡು ಅರ್ಧಶತಕಗಳಿವೆ. ಮುಖ್ಯವಾಗಿ ಆರ್ ಸಿಬಿ ಗೆಲುವಿನಲ್ಲಿ ಗ್ಲೇನ್ ಮ್ಯಾಕ್ಸ್ ವೆಲ್ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.
Royal Challengers Bangalore's Glenn Maxwell  SAAKSHATV IPL2021ರಾಜಸ್ತಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲೂ ಗ್ಲೇನ್ ಮ್ಯಾಕ್ಸ್ ವೆಲ್ ಜವಾಬ್ದಾರಿಯುತವಾಗಿ ಬ್ಯಾಟ್ ಬೀಸಿದ್ದರು.
149 ರನ್ ಗಳ ಸವಾಲನ್ನು ಬೆನ್ನಟ್ಟಿದ್ದ ಆರ್ ಸಿಬಿ 6.5 ಓವರ್ ಗಳಲ್ಲಿ 58 ರನ್ ಗಳಿಸಿದ್ದಾಗ ದೇವದತ್ ಪಡಿಕ್ಕಲ್ ಮತ್ತು ವಿರಾಟ್ ಕೊಹ್ಲಿ ಅವರ ವಿಕೆಟ್ ಪತನಗೊಂಡಿತ್ತು. ಆಗ ಸ್ರಿಕರ್ ಭರತ್ ಜೊತೆ ಸೇರಿಕೊಂಡ ಗ್ಲೇನ್ ಮ್ಯಾಕ್ಸ್ ವೆಲ್ ಅತ್ಯುತ್ತಮ ಆಟವನ್ನಾಡಿದ್ರು. ಅಬ್ಬರದ ಜೊತೆಗೆ ಜವಾಬ್ದಾರಿಯುತ ಆಟದ ಮೂಲಕ ಆರ್ ಸಿಬಿ ತಂಡವನ್ನು ಗೆಲುವಿನ ದಡ ಸೇರಿಸಿದ್ದರು.
ಏತನ್ಮಧ್ಯೆ, ಭರತ್ ಮತ್ತು ಗ್ಲೇನ್ ಮ್ಯಾಕ್ಸ್ ವೆಲ್ ಮೂರನೇ ವಿಕೆಟ್ ಗೆ 69 ರನ್ ಗಳನ್ನು ಕಲೆ ಹಾಕಿದ್ದರು.
ಕ್ರಿಸ್ ಮೋರಿಸ್ ಅವರ ಓವರ್ ನಲ್ಲಿ 22 ರನ್ ಸಿಡಿಸುವ ಮೂಲಕ ಗ್ಲೇನ್ ಮ್ಯಾಕ್ಸ್ ವೆಲ್ ತಂಡದ ಗೆಲುವಿನ ಹಾದಿಯನ್ನು ಸುಗಮಗೊಳಿಸಿದ್ದರು. ಮೋರಿಸ್ ಅವರ ಸತತ ಮೂರು ಎಸೆತಗಳನ್ನು ಬೌಂಡರಿ ಗೆರೆ ದಾಟಿಸಿದ್ದ ಮ್ಯಾಕ್ಸ್ ವೆಲ್ ಒಂದು ಮನಮೋಹಕ ಸಿಕ್ಸರ್ ಕೂಡ ಸಿಡಿಸಿದ್ದರು.
ಒಟ್ಟಾರೆಯಾಗಿ ಗ್ಲೇನ್ ಮ್ಯಾಕ್ಸ್ ವೆಲ್ ಅವರು 30 ಎಸೆತಗಳಲ್ಲಿ ಆರು ಬೌಂಡರಿ ಮತ್ತು ಒಂದು ಸಿಕ್ಸರ್ ನ ನೆರವಿನಿಂದ ಅಜೇಯ 50 ರನ್ ದಾಖಲಿಸಿದ್ದರು.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd