ಗೋವಾದಲ್ಲಿ ಎರಡು ಕಾರುಗಳ ನಡುವೆ ಅಫಘಾತ – 3 ಸಾವು…
ಗೋವಾದಲ್ಲಿ ಎರಡು ಕಾರುಗಳ ನಡುವೆ ಡಿಕ್ಕಿ ಹೊಡೆದ ಪರಿಣಾಮ ಕಾರವಾರ ಮೂಲದ ಮೂವರು ಸಾವನ್ನಪ್ಪಿರುವ ಘಟನೆ ಕಾಣಕೋಣದ ತಾರಿ ಬಳಿಯ ರಾಷ್ಟ್ರೀಯ ಹೆದ್ದಾರಿ 66 ಬಳಿ ನಡೆದಿದೆ.
ಅಫಘಾತದಲ್ಲಿ ಮೂವರು ಸಾವನ್ನಪ್ಪಿದ್ದು, ಏಳು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮಾಜಾಳಿ ಮೂಲದ ಹರೀಶ್ ನಾಗೇಕರ್(35), ಉಲ್ಲಾಸ ನಾಗೇಕರ(60), ವೀಣಾ ನಾಗೇಕರ(60) ಮೃತ ದುರ್ಧೈವಿಗಳು.
ಅಫಘಾತದಲ್ಲಿ ಹರೀಶ್ ನಾಗೇಕರ್ (2), ಹರ್ಷಿತಾ ಹರೀಶ್ ನಾಗೇಕರ್ (26), ಸಮೀಷಾ ನಾಗೇಕರ್ (26), ಸುಕಷ್ಟ ಕಂಕೋಣಕರ್ (3) ಮತ್ತು ಸಾಯಿ ನಾಗೇಕರ್ (13) ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳಿಯ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮೂಲಗಳ ಪ್ರಕಾರ, ಬುಧವಾರ ಸಂಜೆ 6.30ಕ್ಕೆ ಮಾರ್ಗಾಂವದಿಂದ ಕಾರವಾರಕ್ಕೆ ಬರುತ್ತಿದ್ದ ವಾಹನ ಡಿವೈಡರ್‌ಗೆ ಡಿಕ್ಕಿ ಹೊಡೆದು ಕಾರವಾರದಿಂದ ಮಾರ್ಗಾಂವ್ ಕಡೆಗೆ ಹೋಗುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.
ಕೆನಕೋನ ಪೋಲೀಸರ ಪ್ರಕಾರ, ಮೇಲ್ಕಂಡ ಎಲ್ಲಾ ವ್ಯಕ್ತಿಗಳು ಮೂಲತಃ ಕಾರವಾರದ ಮಾಜಾಳಿಯವರಾಗಿದ್ದು, ವಾಸ್ಕೋದ ಉಪಾಸನಗರದ ನಿವಾಸಿಗಳು ಎಂದು ಗುರುತಿಸಲಾಗಿದೆ.
ಈ ಬಗ್ಗೆ ಗೋವಾ ಕಾಣಕೋಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.