ಮಾಲೇಕಲ್ ತಿರುಪತಿಯಲ್ಲಿ ನಿರ್ಮಾಣ ಹಂತದ ವಿಗ್ರಹ ಧ್ವಂಸಗೊಳಿಸಿದ ಕಿಡಿಗೇಡಿಗಳು
ದೇವಸ್ಥಾನದಲ್ಲಿ ನಿರ್ಮಾಣ ಹಂತದಲ್ಲಿದ್ದ ವಿಗ್ರಹಗಳನ್ನ ದುಷ್ಕರ್ಮಿಗಳು ಧ್ವಂಸ ಮಾಡಿರುವ ಘಟನೆ ಮಾಲೇಕಲ್ ತಿರುಪತಿಯಲ್ಲಿ ನಡೆದಿದೆ.
ಹಾಸನ ಜಿಲ್ಲೆಯ ಅರಸೀಕೆರೆಯ ಮಾಲೇಕಲ್ ತಿರುಪತಿಯಲ್ಲಿ ದೇವಾಲಯದ ಮ್ಯೂಸಿಯಂ ಒಳಗಿದ್ದ 13 ವಿಗ್ರಹಗಳನ್ನು ಕಿಡಿಗೇಡಿಗಳನ್ನು ಧ್ವಂಸಗೊಳಿಸಿದ್ದಾರೆ. ಮ್ಯೂಸಿಯಂ ಬಳಿಯಿದ್ದ ಕಲ್ಯಾಣಿಯಲ್ಲಿ ಈಜಲು ಬಂದ ದುಷ್ಕರ್ಮಿಗಳಿಂದ ಈ ಘಟನೆ ನಡೆದಿದೆ ಎಂದು ಶಂಕಿಸಲಾಗಿದೆ.

ವಿಗ್ರಹವನ್ನು ಯಾಕೆ ಮತ್ತು ಯಾರು ಧ್ವಂಸಗೊಳಿಸಿದರು ಎಂಬ ಕುರಿತು ಯಾವುದೇ ನಿಖರ ಮಾಹಿತಿ ತಿಳಿದುಬಂದಿಲ್ಲ. ಸೋಮವಾರ ಈ ಘಟನೆ ನಡೆದಿದ್ದು, ಈಗಾಗಲೇ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ಕುರಿತು ದೇವಸ್ಥಾನ ಮುಜರಾಯಿ ಇಲಾಖೆಯೂ ಪರಿಶೀಲನೆ ನಡೆಸುತ್ತಿದೆ. ಶ್ರೀನಿವಾಸ ಕಲ್ಯಾಣಕ್ಕೆ ಸಂಬಂಧಿಸಿದಂತೆ ದಾನಿಗಳು ವಿಗ್ರಹ ಮಾಡಿಸುತ್ತಿದ್ದರು.








