ಕಳೆದ ವಾರಾಂತ್ಯದಲ್ಲಿ ಸ್ವಲ್ಪ ಇಳಿಕೆ ಕಂಡಿದ್ದ ಚಿನ್ನದ ಬೆಲೆ ಇಂದು ಮತ್ತೆ ಏರಿಕೆಯಾಗಿದೆ. ಜಾಗತಿಕ ಮಾರುಕಟ್ಟೆ ಮತ್ತು ಸ್ಥಳೀಯ ಬೇಡಿಕೆಯ ಪ್ರಭಾವದಿಂದ ಬೆಲೆ ಏರಿಕೆಯಾಗಿದ್ದು, ಬೆಂಗಳೂರಿನಲ್ಲಿ ಖರೀದಿದಾರರು ಹಾಗೂ ಹೂಡಿಕೆದಾರರ ಮೇಲೆ ಪ್ರಭಾವ ಬೀರುತ್ತಿದೆ.
ಬೆಂಗಳೂರಿನಲ್ಲಿ ಚಿನ್ನದ ಬೆಲೆ
22 ಕ್ಯಾರಟ್ ಚಿನ್ನ: 22 ಕ್ಯಾರಟ್ ಚಿನ್ನದ ಬೆಲೆ ಇಂದು 1 ಗ್ರಾಂಗೆ ₹7,130ಗೆ ಏರಿಕೆಯಾಗಿದೆ (ಹಿಂದೆ ₹7,115). 10 ಗ್ರಾಂ ಚಿನ್ನದ ಬೆಲೆ ಈಗ ₹71,300.
24 ಕ್ಯಾರಟ್ ಚಿನ್ನ (ಅಪರಂಜಿ): 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ ಪ್ರತಿ ಗ್ರಾಂ ₹7,780ಕ್ಕೆ ಏರಿಕೆಯಾಗಿದ್ದು, 10 ಗ್ರಾಂಗೆ ₹77,780.
ಬೆಳ್ಳಿಯ ಬೆಲೆ
100 ಗ್ರಾಂ ಬೆಳ್ಳಿಯ ಬೆಲೆ ₹9,200ರೂ. ಇದೆ.
ಚಿನ್ನದ ಬೆಲೆ ಏರಿಕೆಗೆ ಕಾರಣಗಳು
1. ಜಾಗತಿಕ ಮಾರುಕಟ್ಟೆ ಪ್ರಭಾವ: ಜಾಗತಿಕ ಚಿನ್ನದ ಮಾರುಕಟ್ಟೆಯ ಬದಲಾವಣೆಗಳು ಸ್ಥಳೀಯ ಬೆಲೆಗೆ ನೇರ ಪರಿಣಾಮ ಬೀರುತ್ತವೆ.
2. ಮಾರುಕಟ್ಟೆಯ ಬೇಡಿಕೆ: ಮದುವೆಯ ಸೀಜನ್ ನ ಅವಧಿಯಲ್ಲಿ ಚಿನ್ನದ ಬೇಡಿಕೆ ಹೆಚ್ಚಾಗುವುದರಿಂದ ಬೆಲೆ ಏರಿಕೆ ಆಗುತ್ತದೆ.
3. ಕರೆನ್ಸಿ ಬದಲಾವಣೆ: ಡಾಲರ್ ವಿರುದ್ಧ ಭಾರತೀಯ ರೂಪಾಯಿಯ ಮೌಲ್ಯದಲ್ಲಿ ಬದಲಾವಣೆಯು ಚಿನ್ನದ ಬೆಲೆಯನ್ನು ಹೆಚ್ಚು ಮಾಡುತ್ತದೆ.
ಚಿನ್ನ ಖರೀದಿಸಲು ಯೋಚಿಸುತ್ತಿರುವವರು ಈಗ ಹೆಚ್ಚು ವೆಚ್ಚ ಮಾಡಬೇಕಾಗುತ್ತದೆ. ಆದರೆ ಚಿನ್ನವನ್ನು ಹೂಡಿಕೆ ಮಾಡಿರುವವರಿಗೆ ಬೆಲೆ ಏರಿಕೆಯು ಉತ್ತಮ ಲಾಭ ನೀಡಲು ಸಾಧ್ಯವಿದೆ.








