ಚಿನ್ನದ ಬೆಲೆಯಲ್ಲಿ ನಿರಂತರವಾಗಿ ಏರಿಕೆಯಾಗುತ್ತಿದ್ದು, ಚಿನ್ನ ಖರೀದಾರಾರು ಕಂಗಾಲಾಗುವಂತಾಗಿದೆ. ಇದೀಗ ಮತ್ತೆ ಸತತ 8 ನೇ ವಹಿವಾಟಿನಲ್ಲಿ ಚಿನ್ನದ ಬೆಲೆ ಏರಿಕೆಯಾಗಿದ್ದು, ಎಂಸಿಎಕ್ಸ್ ನ ಆರಂಭಿಕ ವಹಿವಾಟಿನಲ್ಲಿ 10 ಗ್ರಾಂ ಚಿನ್ನದ ಬೆಲೆ 53,429 ರ ದಾಖಲೆಯ ಮಟ್ಟಕ್ಕೆ ಏರಿದೆ. ಎಂಸಿಎಕ್ಸ್ ನಲ್ಲಿ ಇಂದು ಬೆಳ್ಳಿ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ಬೆಳ್ಳಿ ಬೆಲೆ ಪ್ರತಿ ಕೆ.ಜಿ.ಗೆ 65,212 ರೂಪಾಯಿಯಾಗಿದೆ. ಈ ಮೂಲಕ 8 ದಿನಗಳಲ್ಲಿ ಚಿನ್ನವು 10 ಗ್ರಾಂಗೆ ಸುಮಾರು 5,500 ರಷ್ಟು ಹೆಚ್ಚಾಗಿದೆ. ದುರ್ಬಲಗೊಂಡ ಡಾಲರ್, ಕಡಿಮೆ ಬಡ್ಡಿ ದರಗಳು ಮತ್ತು ದೇಶ ಮತ್ತು ಪ್ರಪಂಚದಲ್ಲಿ ಹೆಚ್ಚುತ್ತಿರುವ ಕೊರೊನಾ ವೈರಸ್ ಪ್ರಕರಣಗಳಿಂದಾಗಿ ಚಿನ್ನದ ಸುರಕ್ಷಿತ ಹೂಡಿಕೆಯ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ಬಂಗಾರದ ಬೆಲೆಯಲ್ಲಿ ನಿರಂತರ ಏರಿಕೆ ಕಂಡು ಬರ್ತಿದೆ.
ಗೂಗಲ್ ಮ್ಯಾಪ್ ನಂಬಿ ದಟ್ಟಾರಣ್ಯದಲ್ಲಿ ಸಿಲುಕಿದ ಕಾರು!!
ಇದು ಗೂಗಲ್ ಮ್ಯಾಪ್ ನಲ್ಲಿನ ದಾರಿಯನ್ನು ನಂಬಿ ಯಡವಟ್ಟು ಸಂಭವಿಸಿದ ಮತ್ತೊಂದು ಪ್ರಕರಣವಾಗಿದೆ. ಈ ಪ್ರಕರಣದಲ್ಲಿ, ಗೂಗಲ್ ಮ್ಯಾಪ್ ಪ್ರಕಾರ ಮಾರ್ಗವನ್ನು ಅನುಸರಿಸಿ, ಆಂಧ್ರಪ್ರದೇಶದಿಂದ ಗೋವಾ ಹೊರಟಿದ್ದ...