ಪ್ಯಾರಾಲಿಂಪಿಕ್ಸ್ ವಿಜೇತೆ ಅವನಿ ಗೆ XUV-700 ಕಾರ್ ಉಡುಗೊರೆ
ಟೋಕಿಯೊ ಪ್ಯಾರಾಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದ ಅವನಿ ಲೆಖರಾ ಅವರಿಗೆ ವಿಶೇಷ ಕಾರನ್ನು ಉಡುಗೊರೆಯಾಗಿ ನೀಡುವುದಾಗಿ ಆನಂದ್ ಮಹೀಂದ್ರಾ ಭರವಸೆ ನೀಡಿದ್ದರು. ಅದೇ ರೀತಿ ಬುಧವಾರ ಆನಂದ್ ಮಹೀಂದ್ರಾ, ತಮ್ಮ ಭರವಸೆಯನ್ನು ಈಡೇರಿಸಿದ್ದಾರೆ. ಅವನಿ ಲೇಖರಾ ಅವರಿಗಾಗಿ ವಿಶೇಷ ಕಸ್ಟಮೈಸ್ ಮಾಡಿದ XUV-700 ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದರಲ್ಲಿ ವಿಶೇಷ ಹೈಡ್ರಾಲಿಕ್ ಸೀಟ್ ಅಳವಡಿಸಲಾಗಿದ್ದು, ಅವನಿ ಸುಲಭವಾಗಿ ಕಾರಿನಲ್ಲಿ ಹತ್ತಬಹುದು ಮತ್ತು ಇಳಿಯಬಹುದು.
ಟೋಕಿಯೊ ಪ್ಯಾರಾಲಿಂಪಿಕ್ ಶೂಟಿಂಗ್ನಲ್ಲಿ ಎರಡು ಚಿನ್ನದ ಪದಕಗಳನ್ನು ಗೆದ್ದಿರುವ ಅವನಿ ಲೆಖರಾ ಅವರು ತಮ್ಮ ಹೊಸ ಕಾರು ಮಹೀಂದ್ರಾ ಎಕ್ಸ್ಯುವಿ-700 ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಇದರೊಂದಿಗೆ ಅವರು ಆನಂದ್ ಮಹೀಂದ್ರಾ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ಅವರು ಆನಂದ್ ಮಹೀಂದ್ರಾ ಮತ್ತು ಮಹೀಂದ್ರಾ & ಮಹೀಂದ್ರಾದ ಇಡೀ ತಂಡಕ್ಕೆ ಧನ್ಯವಾದಗಳು ಎಂದು ಬರೆದಿದ್ದಾರೆ. ಈ ಕಸ್ಟಮೈಸ್ಡ್ ಕಾರನ್ನು ಯಾರು ತಯಾರಿಸಿದ್ದಾರೆ. ನಾನು ರಸ್ತೆಯಲ್ಲಿ ಈ ವಿನ್ಯಾಸದ ಹೆಚ್ಚಿನ XUV-700 ಅನ್ನು ನೋಡಲು ಬಯಸುತ್ತೇನೆ. ಎಂದು ಬರೆದುಕೊಡಿದ್ದಾರೆ.
ಅವನಿ ಲೇಖರಾ ಗಾಗಿ ಈ ಕಾರಿನಲ್ಲಿ ಪ್ರತ್ಯೇಕ ಕಸ್ಟಮೈಸೇಶನ್ಗಳನ್ನು ಮಾಡಲಾಗಿದೆ. ಆಸನವು ಹೈಡ್ರಾಲಿಕ್ ಸಂಪರ್ಕ ಹೊಂದಿದ್ದು ಇದರಿಂದಾಗಿ ಗಾಲಿಕುರ್ಚಿಯೊಂದಿಗೆ ಕಾರಿನಲ್ಲಿ ನೇರವಾಗಿ ಕುಳಿತುಕೊಳ್ಳುವುದು ಸುಲಭವಾಗುತ್ತದೆ. ಇದಲ್ಲದೇ ಕಾರಿನಲ್ಲಿರುವ ಅಂಗವಿಕಲರನ್ನು ಗಮನದಲ್ಲಿಟ್ಟುಕೊಂಡು ಸಾಕಷ್ಟು ಬದಲಾವಣೆ ಮಾಡಲಾಗಿದೆ.
ಈ ಮಾಡಿಫೈಡ್ ಗಾಗಿ ಆನಂದ್ ಮಹೀಂದ್ರಾ ಅವನಿ ಲೆಖರಾಗಾಗಿ ವಿಶೇಷ XUV-700 ಅನ್ನು ತಯಾರಿಸಲು ತಂಡವನ್ನು ಪ್ರೋತ್ಸಾಹಿಸಿದರು. ಅವರು ಟ್ವೀಟ್ ಮಾಡುವ ಮೂಲಕ ಇಡೀ ತಂಡವನ್ನು ಅಭಿನಂದಿಸಿದ್ದಾರೆ ಮತ್ತು XUV-700 ಅನ್ನು ಇಷ್ಟಪಟ್ಟಿದ್ದಕ್ಕಾಗಿ ಅವ್ನಿ ಲೆಖರಾ ಅವರಿಗೆ ಧನ್ಯವಾದ ತಿಳಿಸಿದ್ದಾರೆ.
ಅವ್ನಿ ಲೆಖರಾ ಮೂಲತಃ ಜೈಪುರದವರು. ಟೋಕಿಯೊ ಪ್ಯಾರಾಲಿಂಪಿಕ್ಸ್ನಲ್ಲಿ ಶೂಟಿಂಗ್ ಸ್ಪರ್ಧೆಯಲ್ಲಿ ಚಿನ್ನ ಮತ್ತು ಕಂಚಿನ ಪದಕಗಳನ್ನು ಗೆದ್ದರು. ಅವನಿ ಒಂದೇ ಪ್ಯಾರಾಲಿಂಪಿಕ್ನಲ್ಲಿ ಎರಡು ಪದಕಗಳನ್ನು ಗೆದ್ದ ದೇಶದ ಮೊದಲ ಆಟಗಾರ್ತಿ. ಅವನಿ ಅವರಿಗೆ ದೇಶದ ಅತ್ಯುನ್ನತ ಕ್ರೀಡಾ ಗೌರವ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ನೀಡಿ ಗೌರವಿಸಲಾಗಿದೆ.
ಜೈಪುರದ ಶಾಸ್ತ್ರಿ ನಗರದಲ್ಲಿ ವಾಸಿಸುತ್ತಿರುವ ಅವನಿ ಲೆಖರಾ ಟೋಕಿಯೊ ಪ್ಯಾರಾಲಿಂಪಿಕ್ಸ್ನಲ್ಲಿ 10 ಮೀಟರ್ ಏರ್ ರೈಫಲ್ನಲ್ಲಿ ಚಿನ್ನ ಗೆದ್ದಿದ್ದಾರೆ. 50 ಮೀಟರ್ ಏರ್ ರೈಫಲ್ ಮಹಿಳೆಯರ ಸ್ಪರ್ಧೆಯಲ್ಲಿ ಕಂಚಿನ ಪದಕವನ್ನು ಗೆದ್ದಿದ್ದರು. 2012 ರಲ್ಲಿ, ಮಹಾಶಿವರಾತ್ರಿಯ ದಿನದಂದು ಅವ್ನಿಗೆ ಅಪಘಾತ ಸಂಭವಿಸಿತು, ಇದರಿಂದಾಗಿ ಆಕೆಗೆ ಪಾರ್ಶ್ವವಾಯು ಬಂದಿತು. ಇಷ್ಟೆಲ್ಲಾ ಆದರೂ ಧೈರ್ಯ ಕಳೆದುಕೊಳ್ಳದ ಅವ್ನಿ ಶೂಟಿಂಗ್ ನಲ್ಲಿ ಪದಕ ಗೆದ್ದು ಜಗತ್ತಿನಾದ್ಯಂತ ದೇಶದ ಹೆಸರನ್ನು ಬೆಳಗಿಸಿದ್ದಾರೆ.