ಅರಿಶಿನ ಹಾಲಿನ ಸೇವನೆಯಿಂದ ದೇಹಕ್ಕಾಗುವ ಲಾಭಗಳ ಬಗ್ಗೆ ತಿಳಿರಿ..
ಹಾಲನ್ನ ಸಂಪೂರ್ಣ ಆಹಾರ ಎಂದು ಪರಿಗಣಿಸುತ್ತೇವೆ. ಇದು ದೇಹಕ್ಕೆ ಅಗತ್ಯವಿರುವ ಎಲ್ಲಾ ಪೋಷಕಾಂಶಗಳನ್ನ ಪೂರೈಸುತ್ತದೆ. ಈ ಕಾರಣಕ್ಕಾಗಿಯೇ ಆರೋಗ್ಯ ತಜ್ಞರು ಎಲ್ಲಾ ವಯೋಮಾನದವರಿಗೆ ನಿಯಮಿತವಾಗಿ ಹಾಲನ್ನ ಸೇವಿಸುವಂತೆ ಶಿಫಾರಸು ಮಾಡುತ್ತಾರೆ.
ಆದರೆ ಅರಿಶಿಣದ ಹಾಲು ಸೇವಿಸುವುದರಿಂದ ಸಾಮಾನ್ಯ ಹಾಲಿಗಿಂತ ತುಸು ಹೆಚ್ಚಿನ ಆರೋಗ್ಯ ಪ್ರಯೋಜನಗಳನ್ನೇ ಪಡೆಯಬಹುದು. ತಜ್ಞರು ಅರಿಶಿನ ಹಾಲಿನಿಂದ ದೇಹಕ್ಕೆ ಹಲವು ವಿಧಗಳಲ್ಲಿ ಪ್ರಯೋಜನಗಳನ್ನ ಗುರುತಿಸಿದ್ದಾರೆ. ಇದು ಪೌಷ್ಟಿಕಾಂಶದ ಶಕ್ತಿ ಕೇಂದ್ರ. ದೇಹವನ್ನ ಸೋಂಕಿನಿಂದ ಮುಕ್ತವಾಗಿಡುವುದರ ಜೊತೆಗೆ ಅನೇಕ ಕಾಯಿಲೆಗಳಿಂದ ಸುರಕ್ಷಿತವಾಗಿರಿಸುತ್ತದೆ.
ಅರಿಶಿನದ ಹಾಲನ್ನ ಸೇವಿಸುವುದರಿಂದ ದೇಹದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಈ ಮೂಲಕ ಶೀತ-ಕೆಮ್ಮು, ಹೊಟ್ಟೆ ನೋವು ಮತ್ತು ಜ್ವರ ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡಬಹುದು.
ಒಂದು ಚಿಟಿಕೆ ಅರಿಶಿನ ಪುಡಿಯನ್ನು ಹಾಲಿನಲ್ಲಿ ಬೆರೆಸಿ ಸೇವಿಸಬೇಕು. ದುರ್ಬಲ ರೋಗ ನಿರೋಧಕ ಶಕ್ತಿ ಹೊಂದಿರುವ ಜನರು ಅರಿಶಿನ ಹಾಲನ್ನ ನಿತ್ಯ ಸೇವಿಸಬೇಕು. ಅರಿಶಿನ ಹಾಲನ್ನು ಸೇವಿಸುವ ಮೂಲಕ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಹ ನಿಯಂತ್ರಿಸಬಹುದು ಎಂದು ಕೆಲವು ಅಧ್ಯಯನಗಳು ಸೂಚಿಸುತ್ತವೆ.
ಅರಿಶಿನ ಹಾಲಿನ ಸೇವನೆಯಿಂದ ದೇಹಕ್ಕಾಗುವ ಲಾಭಗಳ ಬಗ್ಗೆ ತಿಳಿಯಿರಿ.

ಉತ್ತಮ ನಿದ್ರೆ ಪಡೆಯಲು
ಅರಿಶಿನ ಹಾಲು ಸೇವಿಸುವುದರಿಂದ ಉತ್ತಮ ನಿದ್ರೆ ಪಡೆಯಬಹುದು. ಮಲಗುವ ಮೊದಲು ಒಂದು ಲೋಟ ಬೆಚ್ಚಗಿನ ಅರಿಶಿನ ಹಾಲನ್ನು ಕುಡಿಯುವುದರಿಂದ ತ್ತಮ ನಿದ್ರೆಗೆ ಸಹಾಯ ಮಾಡುತ್ತದೆ. ನೀವು ನಿದ್ರಾಹೀನತೆಯಿಂದ ಬಳಲುತ್ತಿದ್ದರೆ. ರಾತ್ರಿಯಲ್ಲಿ ಅನೇಕ ಬಾರಿ ಎಚ್ಚರಗೊಳ್ಳುತ್ತಿದ್ದರೆ, ಅರಿಶಿನ ಹಾಲನ್ನು ಸೇವಿಸುವುದರಿಂದ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.
ಅರಿಶಿನ ಹಾಲು ದೇಹದ ಆಂತರಿಕ ಗಾಯಗಳು ಅಥವಾ ಉರಿಯೂತವನ್ನು ಗುಣಪಡಿಸುತ್ತದೆ. ಮತ್ತು ದೇಹ ವಿಶ್ರಾಂತಿ ಪಡೆಯಲು ಸಹಾಯ ಮಾಡುತ್ತದೆ.
ಮಧುಮೇಹದ ಅಪಾಯ ಕಡಿಮೆ.
ಅರಿಶಿನದ ಹಾಲಿನಲ್ಲಿರುವ ಅಂಶಗಳು ಮಧುಮೇಹದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರ ಗರಿಷ್ಠ ಪ್ರಯೋಜನಗಳನ್ನು ಪಡೆಯಲು ಹಾಲಿಗೆ ಶುಂಠಿ ಮತ್ತು ದಾಲ್ಚಿನ್ನಿ ಬೆರಸಿ ಸೇವಿಸಬಹುದು. ದಿನಕ್ಕೆ 1-6 ಗ್ರಾಂ ದಾಲ್ಚಿನ್ನಿ ಸೇವನೆ ಸಕ್ಕರೆ ಮಟ್ಟವನ್ನು 29% ವರೆಗೆ ಕಡಿಮೆ ಮಾಡುತ್ತದೆ.
ಉರಿಯೂತದಲ್ಲಿ ಪ್ರಯೋಜನಕಾರಿ
ಅರಿಶಿನ ಹಾಲು ಉರಿಯೂತದ ಕಾಯಿಲೆಗೆ ಔಷಧಿ, ದೀರ್ಘಕಾಲದ ಉರಿಯೂತ, ಮೆಟಾಬಾಲಿಕ್ ಸಿಂಡ್ರೋಮ್, ಆಲ್ಝೈಮರ್ ಮತ್ತು ಹೃದ್ರೋಗ ಸೇರಿದಂತೆ ಅನೇಕ ರೋಗಗಳ ಅಪಾಯವನ್ನು ಕಡಿಮೆ ಮಾಡಲು ಅರಿಶಿನದ ಹಾಲು ಸಹಕರಿಸುತ್ತದೆ.
ಮೆದುಳಿನ ಆರೋಗ್ಯ
ಹಳದಿ ಹಾಲು ನಿಮ್ಮ ಮೆದುಳಿಗೆ ಆರೋಗ್ಯಕ್ಕೂ ಒಳ್ಳೆಯದು. ಇದರಲ್ಲಿರುವ ಅರಿಶಿನ ಬ್ರೈನ್ ಡಿರೈವ್ಡ್ ನ್ಯೂರೋಟ್ರೋಫಿಕ್ ಅಂಶದ (BDNF) ಮಟ್ಟವನ್ನು ಹೆಚ್ಚಿಸುತ್ತದೆ ಎಂದು ಅಧ್ಯಯನಗಳು ಹೇಳುತ್ತವೆ. BDNF ಮೆದುಳಿಗೆ ಹೊಸ ಸಂಪರ್ಕಗಳನ್ನ ಮಾಡಲು ಮತ್ತು ಮೆದುಳಿನ ಕೋಶಗಳ ಬೆಳವಣಿಗೆಯನ್ನ ಉತ್ತೇಜಿಸಲು ಸಹಾಯ ಮಾಡುತ್ತದೆ. BDNF ಮಟ್ಟ ಕಡಿಮೆಯಾದರೆ ಆಲ್ಝೈಮರ್ನ ಕಾಯಿಲೆಯ ಅಪಾಯ ಹೆಚ್ಚುತ್ತದೆ.