ಮುಂಗಾರು ಮಳೆ ಮೂಲಕ ಜನರನ್ನು ಮೊಡಿ ಮಾಡಿದ್ದ ಗೋಲ್ಡನ್ ಸ್ಟಾರ್ ಗಣೇಶ್ ಅವರು ಸದ್ಯ ಸಾಲು ಸಾಲು ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ ಗಣೇಶ್.
ಈಗಾಗಲೇ ಹಲವು ಪ್ರಾಜೆಕ್ಟ್ ಗಳಲ್ಲಿ ಬ್ಯುಸಿಯಾಗಿರುವ ಗಣಿ ಮತ್ತೊಮ್ಮೆ ಡಾಕ್ಟರ್ ಪಾತ್ರಕ್ಕೆ ಬನ್ಣ ಹಚ್ಚಲು ಸಜ್ಜಾಗಿದ್ದಾರೆ. ತಮ್ಮ ಹೊಸ ಸಿನೆಮಾದಲ್ಲಿ ನ್ಯೂರೋ ಸರ್ಜನ್ ಆಗಿ ಅಭಿಮಾನಿಗಳ ಮುಂದೆ ಬರಲಿದ್ದಾರೆ ಗಣೇಶ್. ಈ ಚಿತ್ರದಲ್ಲಿ ಮತ್ತೊಂದು ವಿಶೇಷವಿದೆ. ಅದೇನೆಮದ್ರೆ ಚಿತ್ರಕ್ಕೆ ಬಂಡವಾಳ ಹೂಡುತ್ತಿರುವವರು ಹಾಗೂ ಆಕ್ಷನ್ ಕಟ್ ಹೇಳುತ್ತಿರುವವರು ಸಹ ಒಬ್ಬ ವೈದ್ಯರೇ ಆಗಿದ್ದಾರೆ. ವೈದ್ಯರಾಗಿ 20 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ನಿರ್ದೇಶಕರು ಮತ್ತು ನಿರ್ಮಾಪಕರ ಅನುಭವಗಳನ್ನು ತೆರೆಮೇಲೆ ತರುತ್ತಿದ್ದಾರಂತೆ. ಡಾ.ಶಶಿಕಲಾ ಪಿ ಚಿತ್ರದ ನಿದೇಶನದ ಜವಾಬ್ದಾರಿ ಹೊತ್ತಿದ್ರೆ, ಡಾ. ಶೈಲೇಶ್ ಕುಮಾರ್ ಬಂಡವಾಳ ಹೂಡುತ್ತಿದ್ದಾರೆ. ವೈದ್ಯರ ಭಾವನಾತ್ಮಕ ಬದುಕಿನ ಕುರಿತ ಕಥಾಹಂದರ ಈ ಸಿನಿಮಾದಲ್ಲಿ ಇರಲಿದೆ. 
ಸಿಂಪಲ್ ಸುನಿ ನಿರ್ದೇಶನದ ಚಮಕ್ ಸಿನಿಮಾದಲ್ಲಿ ಗಣೇಶ್ ಸ್ತ್ರೀರೋಗ ತಜ್ಞನ ಪಾತ್ರದಲ್ಲಿ ಮಿಂಚಿದ್ದ ಗಣಿ ಇದೀಗ ಮತ್ತೆ ವೈದ್ಯರಾಗಿ ಕಾಣಿಸಿಕೊಳ್ಳಲು ಸಿದ್ಧರಾಗುತ್ತಿದ್ದಾರೆ. ಈ ಹೊಸ ಚಿತ್ರಕ್ಕೆ ಈವರೆಗೂ ಯಾವುದೇ ಟೈಟಲ್ ಫಿಕ್ಸ್ ಆಗಿಲ್ಲ. ಈಗಾಗಲೇ ಚಿತ್ರದ ಪ್ರಿ ಪ್ರೊಡಕ್ಷನ್ ಕೆಲಸ ಸಾಗುಗುತ್ತಿದ್ದು, ಬಹುತೇಕ ಮುಂದಿನ ವರ್ಷ ಚಿತ್ರ ತೆಎಮೇಲೆ ಬರಿದೆ ಎನ್ನಲಾಗುತ್ತಿದೆ.








