Good news for govt.employees
ರಾಜ್ಯ ಸರ್ಕಾರಿ ನೌಕರರಿಗೆ ವಿಮಾ ಪಾಲಿಸಿ ಸೌಲಭ್ಯವನ್ನು 55 ವರ್ಷಗಳಿಂದ 60 ವರ್ಷಕ್ಕೆ ಹೆಚ್ಚಿಸಿ, ಸರ್ಕಾರ ಆದೇಶಿಸಿದೆ.
ಈ ಕುರಿತಂತೆ ಕರ್ನಾಟಕ ಸರ್ಕಾರಿ ವಿಮಾ ಇಲಾಖೆ ಮಾಹಿತಿ ಬಿಡುಗಡೆ ಮಾಡಿದ್ದು, ವಿಮಾ ಇಲಾಖೆಯು ಜೀವ ವಿಮೆ ಸೌಲಭ್ಯವನ್ನು ಸಾರ್ವಜನಿಕರಿಗೆ ಮತ್ತು ಸರ್ಕಾರಿ ನೌಕರರಿಗೆ 21-07-1891ರಿಂದ ಒದಗಿಸುತ್ತಾ ಬಂದಿರುತ್ತದೆ. 1989ರಲ್ಲಿ ಸಾರ್ವಜನಿಕರಿಗೆ ನೀಡುತ್ತಿದ್ದ ವಿಮಾ ಸೌಲಭ್ಯವನ್ನು ರದ್ದುಪಡಿಸಿ, ಸರ್ಕಾರಿ ನೌಕರರಿಗೆ 21-07-1891ರಿಂದ ಒದಗಿಸುತ್ತಾ ಬಂದಿರುತ್ತದೆ. 1989ರಲ್ಲಿ ಸಾರ್ವಜನಿಕರಿಗೆ ನೀಡುತ್ತಿದ್ದ ವಿಮಾ ಸೌಲಭ್ಯವನ್ನು ರದ್ದುಪಡಿಸಿ, ಸರ್ಕಾರಿ ನೌಕರರಿಗೆ ನೀಡುತ್ತಿದ್ದ ವಿಮಾ ಸೌಲಭ್ಯವನ್ನು ಮುಂದುವರಿಸಲಾಯಿತು.
ಅಂದಿನಿಂದ ಇಲ್ಲಿಯವರೆಗೆ ಸುಮಾರು 60 ವರ್ಷಗಳಿಂದ ಸರ್ಕಾರಿ ನೌಕರರಿಗೆ ವಿಮಾ ಸೌಲಭ್ಯವನ್ನು 55 ವರ್ಷ ವಯಸ್ಸಿನವರೆಗೆ ಮಾತ್ರ ನೀಡಲಾಗುತ್ತಿದೆ.

ರಾಜ್ಯ ಸರ್ಕಾರವು 1984ರಲ್ಲಿ ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು 58 ವರ್ಷಗಳಿಗೆ ಹೆಚ್ಚಿಸಲಾಯಿತು ಮತ್ತು 2008ರಲ್ಲಿ ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು 60 ವರ್ಷಗಳಿಗೆ ಹೆಚ್ಚಿಸಲಾಯಿತು. ಆದರೆ ನಿವೃತ್ತಿ ವಯಸ್ಸನ್ನು ಸರ್ಕಾರ 55 ವರ್ಷಗಳಿಂದ 60 ವರ್ಷಗಳಿಗೆ ಹೆಚ್ಚಿಸಿದರೂ ಕೂಡ ಇಲಾಖೆಯು ವಿಮಾ ಸೌಲಭ್ಯವನ್ನು ಸರ್ಕಾರಿ ನೌಕರರ ವಯಸ್ಸು 55 ವರ್ಷಗಳವರೆಗೆ ಮಾತ್ರ ನೀಡಲಾಗುತ್ತಿದೆ.
ಇದರಿಂದ 55 ವರ್ಷದಿಂದ 60 ವರ್ಷದವರೆಗೆ ಅಂದರೆ 5 ವರ್ಷಗಳ ಅವಧಿಗೆ ವಿಮಾ ಸೌಲಭ್ಯದಿಂದ ಸರ್ಕಾರಿ ನೌಕರರು ವಂಚಿತರಾಗಿದ್ದಾರೆ. ಈ 5 ವರ್ಷಗಳ ಅವಧಿಯಲ್ಲಿ ಸರ್ಕಾರಿ ನೌಕರರು ಅಕಾಲಿಕ ಮರಣ ಹೊಂದಿದರೆ ಅವರ ಅವಲಂಭಿತ ಕುಟುಂಬಕ್ಕೆ ದೊರೆಯುತ್ತಿದ್ದ ಆರ್ಥಿಕ ಭದ್ರತೆಯಿಂದ ವಂಚಿತರಾಗುತ್ತಿದ್ದಾರೆ.
ಆದ ಕಾರಣ ಸರ್ಕಾರಿ ನೌಕರರ ಹಿತದೃಷ್ಠಿಯಿಂದ ವಿಮಾ ಸೌಲಭ್ಯವನ್ನು 55 ವರ್ಷಗಳಿಂದ 60 ವರ್ಷಗಳವರೆಗೆ ಷರತ್ತುಗಳಿಗೆ ಒಳಪಟ್ಟು ಹೆಚ್ಚಿಸಲು ಕೋರಲಾಗಿದೆ ಎಂದಿದೆ.
ಇದರಿಂದಾಗಿ ವಿಮಾ ಸೌಲಭ್ಯದ ನಿವೃತ್ತಿ ವಯಸ್ಸು ಹೆಚ್ಚಳ ಮಾಡಬೇಕೆನ್ನುವ ರಾಜ್ಯ ಸರ್ಕಾರಿ ನೌಕರರ ನಾಲ್ಕು ದಶಕಗಳ ಕನಸು ಈಡೇರಿದಂತಾಗಿದೆ.








