ಕೆ ಎಸ್ ಆರ್ ಟಿ ಸಿ ನೌಕರರಿಗೆ ಭರ್ಜರಿ ಸಿಹಿ ಸುದ್ಧಿಯನ್ನ ಸರ್ಕಾರ ನೀಡಿದೆ. ಮುಷ್ಕರದಲ್ಲಿ ಭಾಗಿಯಾದ 1351 ಸಾರಿಗೆ ನೌಕರರನ್ನು ಪುನರ್ ನೇಮಿಸಿಕೊಳ್ಳಲು ನಿರ್ದೇಶನ ನೀಡಲಾಗಿದೆ.
ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರು ಭಾರಿ ಪ್ರತಿಭಟನೆ ನಡೆಸಿದ್ದರು ಈ ಸಂದರ್ಭದಲ್ಲಿ ಕೆಲಸಕ್ಕೆ ಗೈರುಹಾಜರಿಯ ನೆಪ ನೀಡಿ ಸಾವಿರಾರೂ ಮುಷ್ಕರ ನಿರತರ ನೌಕರರನ್ನು ನಾಲ್ಕು ನಿಗಮದಿಂದ ಕೆಲಸದಿಂದ ವಜಾಗೊಳಿಸಲಾಗಿತ್ತು. ಈಗ ಅವರನ್ನ ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳಲು ಸರ್ಕಾರ ನಿರ್ಧರಿಸಿದೆ.
ಈ ಕುರಿತು ಸಾರಿಗೆ ಸಚಿವ ಶ್ರೀರಾಮುಲು ಮಾತನಾಡಿ ಲೋಕ ಅದಾಲತ್ ಮೂಲಕ ಸಮಸ್ಸೆ ಬಗೆಹರಿಸಿಕೊಂಡು ಮತ್ತೆ ಕೆಲಸಕ್ಕೆ ಮರಳಲು ಸಾರಿಗೆ ನಿಗಮಗಳ ಎಂ ಡಿ ಗೆ ನಿರ್ದೇಶನ ನೀಡಿದ್ದಾರೆ..
https://twitter.com/sriramulubjp/status/1473193551152312322
ಕಳೆದ 07-04-2021 ರಿಂದ 21-04-2021 ರ ವರೆಗೆ ಮುಷ್ಕರದಲ್ಲಿ ಭಾಗಿಯಾಗಿ ಕರ್ತವ್ಯಕ್ಕೆ ಅಧಿಕೃತವಾಗಿ ಗೈರುಹಾಜರಾತಿಯಿಂದ ವಜಾಗೊಂಡ, ಕರ್ತವ್ಯದಿಂದ ಬಿಡುಗಡೆಯಾಗಿದ್ದ ಖಾಯಂ, ತರಬೇತಿ, ಪರೀಕ್ಷಣಾರ್ಥಿ ನೌಕರರನ್ನು ಲೋಕ ಅದಾಲತ್ ಮೂಲಕ 04 ವಾರಗಳಲ್ಲಿ ಇತ್ಯರ್ಥಪಡಿಸಿಕೊಂಡು ಪುನರ್ ನೇಮಿಸಿಕೊಳ್ಳುವ ಬಗ್ಗೆ ನಿಯಮಾನುಸಾರ ಅಗತ್ಯ ಕ್ರಮ ವಹಿಸಲು 04 ಸಾರಿಗೆ ನಿಗಮಗಳ ಎಂಡಿಗಳಿಗೆ ನಿರ್ದೇಶನ ನೀಡಲಾಗಿದೆ. ಎಂದು ಸಾರಿಗೆ ಸಚಿವ ಶ್ರೀರಾಮುಲು ತಿಳಿಸಿದ್ದಾರೆ…








