SSLC and PUC ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ – ಈ ವರ್ಷವೂ ಸಿಗಲಿದೆ ಕೃಪಾಂಕ…
SSLC ಮತ್ತು PUC ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ಈ ವರ್ಷವೂ ಗುಡ್ ನ್ಯೂಸ್ ನೀಡದೆ. ಕರೋನಾ ಕಾರಣದಿಂದಾಗಿ ಮಕ್ಕಳು ಶೈಕ್ಷಣಿಕ ವಿಚಾರದಲ್ಲಿ ಇನ್ನೂ ಚೇತರಿಸಕೊಳ್ಳದ ಕಾರಣದಿಂದಾಗಿ ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಳಿ ಈ ವರ್ಷವೂ ಕೃಪಾಂಕ ನೀಡಲು ಮುಂದಾಗಿದೆ.
ಎಸ್‌ಎಸ್‌ಎಲ್ ಸಿ ಮತ್ತು ದ್ವಿತೀಯ ಪಿಯುಸಿ (SSLC and Second PUC) ಪರೀಕ್ಷೆ ಬರೆಯತ್ತಿರುವ ವಿದ್ಯಾರ್ಥಿಗಳಿಗೆ ಈ ವರ್ಷವೂ ಕೃಪಾಂಕ ನೀಡಲು ಮುಂದಾಗಿದ್ದು SSLC ವಿದ್ಯಾರ್ಥಿಗಳಿಗೆ ಶೇಕಡ 10ರಷ್ಟು ಮತ್ತು ಪಿಯುಸಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಶೇಕಡ 5ರಷ್ಟು ಅಂಕ ನೀಡಲಾಗುವುದು ಎಂದು ನಿರ್ಧರಿಸಲಾಗಿದೆ.
ಪ್ರಸ್ತುತ ಎಸ್‌ಎಸ್‌ಎಲ್ಸಿಯಲ್ಲಿ 6 ವಿಷಯಗಳ ಪೈಕಿ 3 ವಿಷಯಗಳಲ್ಲಿ ಉತ್ತೀರ್ಣರಾಗಿದ್ದರೆ ಉಳಿದ ಮೂರು ವಿಷಯಗಳಲ್ಲಿ ಗರಿಷ್ಠ 26 ಅಂಕಗಳು ದೊರೆಯುತ್ತವೆ. ದ್ವಿತೀಯ ಪಿಯುಸಿಯಲ್ಲಿ ಕನಿಷ್ಠ 210 ಅಂಕ ಪಡೆದವರಿಗೆ ಎರಡು ವಿಷಯಗಳಲ್ಲಿ ಅಂದರೆ ತಲಾ 5 ಅಂಕ ಸೇರಿ ಗರಿಷ್ಠ 10 ಅಂಕ ಪಡೆದುಕೊಳ್ಳಬಹುದು ಎಂದು ತಿಳಿಸಲಾಗಿದೆ.
ಕೊರೊನಾ ಹಿನ್ನೆಲೆಯಲ್ಲಿ 2020ರಲ್ಲಿ ಪರೀಕ್ಷೆ ನಡೆಯದೇ ಇದ್ದ ಕಾರಣ 2021 ರಲ್ಲಿ ಎಲ್ಲಾ ವಿದ್ಯಾರ್ಥಿಗಳನ್ನು ಪಾಸ್ ಮಾಡಲಾಗಿತ್ತು. ಜೊತೆಗೆ 2022ರಲ್ಲಿ ಶೇಕಡ 10ರಷ್ಟು ಹೆಚ್ಚುವರಿ ಅಂಕ ನೀಡಲಾಗಿತ್ತು. ಹಾಗೆಯೇ ಈ ವರ್ಷವೂ ಕೃಪಾಂಕ ನೀಡಲು ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಳಿ ತೀರ್ಮಾನಿಸಿದೆ.
SSLC and PUC : Good news for SSLC and PUC students – Krupanka will get this year too…