ರಾಜ್ಯ ಸರ್ಕಾರವು ಕೊನೆಗೂ ನೌಕರರಿಗೆ ಶುಭ ಸುದ್ದಿ ನೀಡಿದೆ. ನೌಕರರ ತುಟ್ಟಿ ಭತ್ಯೆಯನ್ನು (DA) ಶೇ. 2.25ರಷ್ಟು ಹೆಚ್ಚಿಸಿದ್ದು, ಇದರೊಂದಿಗೆ ಮೂಲ ವೇತನದೊಂದಿಗೆ ತುಟ್ಟಿಭತ್ಯೆ ಶೇ 8.50 ಯಿಂದ 10.75ಕ್ಕೆ ಏರಿಕೆಯಾಗಲಿದೆ.
ಈ ಆದೇಶವು ಜುಲೈ 1 ರಿಂದಲೇ ಜಾರಿಗೆ ಬರಲಿದೆ. ಆದರೆ ಪರಿಷ್ಕೃತ ತುಟ್ಟಿಭತ್ಯೆಯ ಆರ್ಥಿಕ ಲಾಭವು ಆಗಸ್ಟ್ 1 ರಿಂದ ಲಭ್ಯವಾಗಲಿದೆ. ರಾಜ್ಯ ನೌಕರರ ತುಟ್ಟಿಭತ್ಯೆಯನ್ನು ಹೆಚ್ಚಳ ಮಾಡಿದ್ದಕ್ಕೆ ಕರ್ನಾಟಕ ರಾಜ್ಯ ನೌಕರರ ಸಂಘವು ಸಿಎಂ ಸಿದ್ದರಾಮಯ್ಯ ಅವರನ್ನು ಅಭಿನಂದಿಸಿದೆ.