ನವದೆಹಲಿ: ಕೇಂದ್ರ ಸರ್ಕಾರ 2024-25ರ ಬಜೆಟ್ ಮಂಡನೆ ಮಾಡಿದ್ದು, ಕೃಷಿ ಸೇರಿದಂತೆ ಹಲವು ಕ್ಷೇತ್ರಗಳಿಗೆ ಭಾರಿ ಅನುದಾನ ಮೀಸಲಿಟ್ಟಿದೆ.
ತೆರಿಗೆ ಪಾವತಿದಾರರಿಗೆ (Salaried Class) ಬಜೆಟ್‌ನಲ್ಲಿ (Union Budget) ಈಗ ಭರ್ಜರಿ ಸಿಹಿ ಸುದ್ದಿ ಸಿಕ್ಕಿದೆ. ಹೊಸ ತೆರಿಗೆ ಪದ್ಧತಿಯಲ್ಲಿ ಸಂಬಳ ಪಡೆಯುವ ಉದ್ಯೋಗಿಗಳು ವರ್ಷಕ್ಕೆ 17,500 ರೂ.ವರೆಗೆ ಆದಾಯ ತೆರಿಗೆ ಉಳಿತಾಯ ಮಾಡಿಕೊಳ್ಳಬಹುದು. ಸಂಬಳ ಪಡೆಯುವ ಉದ್ಯೋಗಿಗಳಿಗೆ ಸ್ಟ್ಯಾಂಡರ್ಡ್ ಡಿಡಕ್ಷನ್ 50,000 ರೂ. ನಿಂದ 75,000 ರೂ.ಗೆ ಹೆಚ್ಚಳ ಮಾಡಲಾಗಿದೆ.
ಯಾರಿಗೆ ಎಷ್ಟು ತೆರಿಗೆ?
0-3 ಲಕ್ಷ ರೂ. ವರೆಗೆ ಯಾವುದೇ ತೆರಿಗೆ ಇಲ್ಲ (ಯಾವುದೇ ಬದಲಾವಣೆ ಇಲ್ಲ)
3-7 ಲಕ್ಷ ರೂ. ವರೆಗೆ 5% (ಮೊದಲು 3-6 ಲಕ್ಷ ರೂ. ಗೆ 5% ಇತ್ತು)
7-10 ಲಕ್ಷ ರೂ. ವರೆಗೆ 10 % (ಮೊದಲು 6-9 ಲಕ್ಷ ರೂ. 10% ಇತ್ತು)
10-12 ಲಕ್ಷ ರೂ. ವರೆಗೆ 15% ( ಮೊದಲು 9-12 ಲಕ್ಷ ರೂ. 15% ಇತ್ತು)
12-15 ಲಕ್ಷ ರೂ. ವರೆಗೆ 20% (ಯಾವುದೇ ಬದಲಾವಣೆ ಇಲ್ಲ)
15 ಲಕ್ಷ ರೂ. ಗಿಂತ ಮೇಲ್ಪಟ್ಟು 30% (ಯಾವುದೇ ಬದಲಾವಣೆ ಇಲ್ಲ)








