ಚಿಕನ್ ಪ್ರಿಯರಿಗೆ ಗುಡ್ ನ್ಯೂಸ್ : ಹಕ್ಕಿಜ್ವರದ ರಿಪೋರ್ಟ್ ನಿಂದ ಬಿಗ್ ರಿಲೀಫ್..!
ನವದೆಹಲಿ: ದೇಶಾದ್ಯಂತ ಹಕ್ಕಿ ಜ್ವರದ ಆತಂಕದ ನಡುವೆಯೇ ಲಕ್ಷಾಂತರ ಕೋಳಿಗಳು ಮೃತಪಟ್ಟಿದೆ. ಇದ್ರಿಂದಾಗಿ ನಾನವೆಜ್ ಪ್ರಿಯರು ಚಿಕನ್ ಖರೀದಿಸಲು ಆತಂಕ ಪಡುತ್ತಿದ್ದು, ಹಲವರು ಸದ್ಯಕ್ಕೆ ಚಿಕನ್ ಖರೀದಿ ಮಾಡುವ ಗೋಜಿಗೆ ಹೋಗುತ್ತಿಲ್ಲ. ಇದರಿಂದಾಗಿ ಕೋಳಿ ಮೊಟ್ಟೆ ಮಾರಾಟಕ್ಕೆ ದೊಡ್ಡ ಹೊಡೆತ ಬಿದ್ದಿದೆ. ದಿನೇ ದಿನೇ ಚಿಕನ್ ದರ ಕುಸಿಯುತ್ತಲೇ ಇದೆ. ಇದರ ನಡುವೆ ಚಿಕನ್ ಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದೆ.
ಹೌದು ಏಷ್ಯಾದ ಅತಿದೊಡ್ಡ ಮಾರುಕಟ್ಟೆಯಾದ ದೆಹಲಿಯ ಗಾಜಿಪುರದಲ್ಲಿ ನೂರು ಕೋಳಿಗಳ ಮಾದರಿಯನ್ನು ಸಂಗ್ರಹಿಸಲಾಗಿತ್ತು. ಇದರಲ್ಲಿ ಹಕ್ಕಿ ಜ್ವರದ ಅಂಶ ಕಂಡುಬಂದಿಲ್ಲ ಎಂದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರಿಂದಾಗಿ ಸದ್ಯ ಜನರಿಗೆ ರಿಲೀಫ್ ಸಿಕ್ಕಿದೆ. ಉತ್ತರ ಪ್ರದೇಶ ಗಡಿಯಲ್ಲಿರುವ ಗಾಜಿಪುರ ಮಾರುಕಟ್ಟೆ, ಕೋಳಿ, ಬಾತುಕೋಳಿ, ಮೊಟ್ಟೆ ಗಳ ಪೂರೈಕೆ ಮಾಡುವ ಪ್ರಮುಖ ಮಾರುಕಟ್ಟೆಯಾಗಿದೆ. ಈ ಮಾರುಕಟ್ಟೆಯುಂದ 104 ಮಾದರಿ ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ 100 ಕೋಳಿಗಳ ಮಾದರಿಯನ್ನು ಸಂಗ್ರಹಿಸಲಾಗಿತ್ತು ಎಂದು ಪಶುಸಂಗೋಪನಾ ಅಧಿಕಾರಿ ರಾಕೇಶ್ ಸಿಂಗ್ ತಿಳಿಸಿದ್ದಾರೆ.
ಕ್ರೈಂ ವೆಬ್ ಸಿರೀಸ್ ನಿಂದ ಮಕ್ಕಳನ್ನ ದೂರವಿಡಿ : ಯಾಕಂತ ಈ ಸ್ಟೋರಿ ನೋಡಿ…!
ಈ ವರದಿಯು ದೆಹಲಿಯ ಚಿಕನ್ ಪ್ರಿಯರಲ್ಲಿ ಬಹು ಉತ್ಸಾಹ ತಂದಿದೆ. ಇದರ ಆಧಾರದ ಮೇಲೆ ಕೋಳಿ ಮಾಂಸ ಮಾರಾಟದ ಮೇಲೆ ಹೇರಲಾಗಿದ್ದ ತಾತ್ಕಲಿಕ ನಿಷೇಧವನ್ನು ದೆಹಲಿ ಸರ್ಕಾರ ಹಿಂದಕ್ಕೆ ಪಡೆದಿದೆ. ಈ ಬಗ್ಗೆ ದೆಹಲಿ ಸಿಎಂ ಕೇಜ್ರಿವಾಲ್ ಅವರು ತಮ್ಮ ಟ್ವಿಟ್ಟರ್ ಮೂಲಕ ಮಾಹಿತಿ ನೀಡಿದ್ದಾರೆ. ಟ್ವೀಟ್ ನಲ್ಲಿ ಸಂಸ್ಕರಿಸಿದ ಕೋಳಿಗಳ ಮಾರಾಟದ ಮೇಲೆ ವಿಧಿಸಲಾಗಿದ್ದ ನಿರ್ಬಂಧ ತೆಗೆದು ಹಾಕುವಂತೆ ಸೂಚನೆ ನೀಡಲಾಗಿದೆ ಎಂದಿದ್ದಾರೆ..
ಸತ್ತ ಕಾಗೆ ಹಾಗೂ ಬಾತುಕೋಳಿಗಳಲ್ಲಿ ಹಕ್ಕಿ ಜ್ವರ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ದೆಹಲಿಯ ಕೆಲವು ಪ್ರದೇಶಗಳಲ್ಲಿ ಕೋಳಿ ಮಾಂಸ ಮಾರಾಟ, ಸಾಗಾಟಕ್ಕೆ ನಿಷೇಧ ಹೇರಲಾಗಿತ್ತು. ಅಲ್ಲದೇ ಹೋಟೆಲ್, ರೆಸ್ಟೋರೆಂಟ್ಗಳಲ್ಲಿಯೂ ಕೋಳಿ ಮತ್ತು ಮೊಟ್ಟೆ ಆಹಾರವನ್ನು ಸರಬರಾಜು ಮಾಡದಂತೆ ಎಚ್ಚರಿಕೆ ನೀಡಲಾಗಿತ್ತು. ನಂತರ ವರದಿಗೆ ಇದನ್ನು ಕಳಹಿಸಲಾಗಿತ್ತು. ಇದೀಗ ನೆಗೆಟಿವ್ ಬಂದಿರುವ ಹಿನ್ನೆಲೆಯಲ್ಲಿ ಮಾಂಸ ಮಾರಾಟಕ್ಕೆ ಅನುಮತಿ ನೀಡಲಾಗಿದೆ.
ಕೊರೊನಾ ತವರು ಚೀನಾದಲ್ಲಿ 8 ತಿಂಗಳ ಬಳಿಕ ಕೊರೋನಾ ಸೋಂಕಿಗೆ ಓರ್ವ ಬಲಿ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel