GOOD or BAD: ಐಪಿಎಲ್ ರದ್ದಾದರೂ ತಗ್ಗದ ಆರ್ ಸಿಬಿ ಹವಾ..!

1 min read
virat kohli rcb saakshatv ipl2021

GOOD or BAD: ಐಪಿಎಲ್ ರದ್ದಾದರೂ ತಗ್ಗದ ಆರ್ ಸಿಬಿ ಹವಾ..!

GOOD or BAD ನಾವು ಯಾವತ್ತು ಸುದ್ದಿಯಲ್ಲಿರಬೇಕು ಎಂಬಂತಾಗಿದೆ ಸದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರಿಸ್ಥಿತಿ. ಆರ್ ಸಿಬಿ..! ಇದು ಕೇವಲ ಒಂದು ಕ್ರಿಕೆಟ್ ತಂಡವಲ್ಲ.. ಕೋಟ್ಯಾಂತರ ಅಭಿಮಾನಿಗಳ ಎಮೋಷನ್. ತಂಡ ಗೆಲ್ಲುತ್ತೊ ಸೋಲುತ್ತೋ ನಾವ್ ಮಾತ್ರ ಪಕ್ಕಾ ಆರ್ ಸಿಬಿಯನ್ಸ್ ಅಂತಾ ಕಾಲರ್ ಎತ್ತುಕೊಂಡು ಓಡಾಡೋ ಅಭಿಮಾನಿಗಳು ಇಡೀ ಕ್ರಿಕೆಟ್ ವಿಶ್ವದಲ್ಲಿ ಬೇರೆ ಯಾವುದೇ ತಂಡಕ್ಕೆ ಇಲ್ಲ ಅಂದ್ರೆ ತಪ್ಪಾಗಲ್ಲ. ಚಟ್ಟ ಹೇರೊವರೆಗೂ ನಾನ್ ಪಕ್ಕಾ ಆರ್ ಸಿಬಿಯನ್ ಅನ್ನೋ ಫ್ಯಾನ್ಸ್ ಇರುವ ಏಕೈಕ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು. ಯಾಕೆಂದ್ರೆ ಆರ್ ಸಿಬಿ ಅಭಿಮಾನಿಗಳದ್ದು ನೆಕ್ಸ್ಟ್ ಲೆವೆಲ್ ಅಭಿಮಾನ. ಅದಕ್ಕೆ ಯಾರು ಬೆಲೆ ಕಟ್ಟೋಕೆ ಆಗಲ್ಲ.

ಆರ್ ಸಿಬಿ ಗೆದ್ದರೂ ಸೋತರೂ ಅದಕ್ಕಿರುವ ಕ್ರೇಜ್ ಮಾತ್ರ ಕಡಿಮೆ ಆಗೋದೆ ಇಲ್ಲ. ಆರ್ ಸಿಬಿ ಪಂದ್ಯ ಅಂದ್ರೆ ಅವತ್ತು ವಾಟ್ಸಾಪ್ ಸ್ಟೇಟಸ್ ಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗುತ್ತೆ. ಟ್ವಿಟ್ಟರ್ ನಲ್ಲಿ ಈ ಸಲ ಕಪ್ ನಮ್ದೆ ಟ್ರೆಂಡ್ ಆಗುತ್ತೆ. ಫೇಸ್ ಬುಕ್ ನಲ್ಲಿ ತಂಡದ ಪೋಸ್ಟರ್ ಗಳು ರಾರಾಜಿಸುತ್ವೆ. ಇನ್ ಸ್ಟಾಗ್ರಾಮ್ ನಲ್ಲಿ ಫೋಟೋಗಳು ಶೈನ್ ಆಗುತ್ವೆ. ಒಟ್ಟಾರೆ ಸೋಶಿಯಲ್ ಮೀಡಿಯಾಗೆ ಬೆಂಕಿ ಬೀಳುತ್ತೆ. ಇದು ಆರ್ ಸಿಬಿಗೆ ಇರೋ ಗತ್ತು ಘಮ್ಮತ್ತು..!

ಅಂದಹಾಗೆ ಈಗ ಐಪಿಎಲ್ ರದ್ದಾಗಿದೆ. ಆದ್ರೆ ಆರ್ ಸಿಬಿ ಹವಾ ಮಾತ್ರ ಕಡಿಮೆ ಆಗಿಲ್ಲ. ಹವಾ ಇಟ್ಟೋರ್ಗೆ ಮಾತ್ರ ಇರುತ್ತೆ. ಉಸಿರು ನಿಂತ್ರೂ ಹವಾ ಇರ್ಬೇಕು ಅಂದ್ರೆ ಧಮ್ ಬೇಕು ಅನ್ನೋ ತರ.. ಐಪಿಎಲ್ ಅರ್ಧದಲ್ಲಿ ರದ್ದಾದ್ರೂ ಸೋಶಿಯಲ್ ಮೀಡಿಯಾದಲ್ಲಿ ಆರ್ ಸಿಬಿ ದರ್ಬಾರ್ ನಡೀತಿದೆ.

RCB

ಹೌದು..! ಬಯೋಬಬಲ್ ನಲ್ಲಿಯೂ ಕೋವಿಡ್ 19 ಪ್ರಕರಣಗಳು ಕಂಡು ಬಂದ ಬೆನ್ನಲ್ಲೇ ಬಿಸಿಸಿಐ 14ನೇ ಆವೃತ್ತಿಯ ಐಪಿಎಲ್ ಅನ್ನು ರದ್ದುಗೊಳಿಸಿದೆ. ಆದರೆ ಸಾಮಾಜಿಕ ಜಾಲಾತಾಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಟ್ರೇಂಡ್ ಆಗುತ್ತಿದೆ.

ಟೂರ್ನಮೆಂಟ್ ರದ್ದಾದ ಸುದ್ದಿ ಹೊರಬರುತ್ತಿದ್ದಂತೆ ಆರ್ ಸಿಬಿ ಫ್ಯಾನ್ಸ್ ಎಂಬ ಪದ ಟ್ವಿಟರ್ ನ ಟಾಪ್ ಟ್ರೆಂಡ್ ಆಗುತ್ತಿದೆ. ಒಂದು ಬಾರಿಯೂ ಟ್ರೋಫಿ ಗೆಲ್ಲಲಾಗದ ಆರ್ ಸಿಬಿ ಪರ ಕೆಲವು ಮೆಮ್ಸ್ ಮತ್ತು ಜೋಕ್ಸ್ ಟ್ವಿಟರ್ ನಲ್ಲಿ ಪೆÇೀಸ್ಟ್ ಆಗುತ್ತಿವೆ.

ಆರ್ ಸಿಬಿ ಈ ಆವೃತ್ತಿಯನ್ನ ಅದ್ಭುತವಾಗಿ ಶುರು ಮಾಡಿತ್ತು. ಸತತ 4 ಪಂದ್ಯಗಳನ್ನು ಗೆಲ್ಲುವ ಮೂಲಕ ದಾಖಲೆ ಬರೆದಿತ್ತು. ಈ ಬಾರಿ ಮ್ಯಾಕ್ಸ್‍ವೆಲ್, ಜೆಮೀಸನ್ ಸೇರ್ಪಡೆಯೊಂದಿಗೆ ಬಲಿಷ್ಠ ತಂಡವಾಗಿದ್ದ ಆರ್ ಸಿಬಿ ಚೊಚ್ಚಲ ಟ್ರೋಫಿ ಎತ್ತಿ ಹಿಡಿಯುವ ತಂಡಗಳಲ್ಲಿ ಒಂದಾಗಿತ್ತು. ಆದರೆ ಕೋವಿಡ್ 19 ಆರ್ ಸಿಬಿ ಅಭಿಮಾನಿಗಳ ಕನಸಿಗೆ ತಣ್ಣೀರೆರಚಿದೆ. ಆದ್ರೆ ಸೋಶಿಯಲ್ ಮೀಡಿಯಾದಲ್ಲಿ ಆರ್ ಸಿಬಿ ಹವಾ ಮಾತ್ರ ಕಡಿಮೆ ಆಗುತ್ತಿಲ್ಲ.

ಅದೇನೋ ಪ್ರತಿ ಸೀಸನ್ ನಲ್ಲಿ ಒಂದೊಂದು ಕ್ರೇಜ್ ಹುಟ್ಟುತ್ತೆ ಅಂತಾರಲ್ಲ.. ಅದೇ ರೀತಿ ಐಪಿಎಲ್ ಶುರುವಾದಗಲೇಲ್ಲಾ ಒಂದು ಕ್ರೇಜ್ ಹುಟ್ಟುತ್ತೆ. , ಅದು ಒನ್ ಅಂಡ್ ಓನ್ಲಿ ಆರ್ ಸಿಬಿ..

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd