ಗೂಗಲ್ ಮ್ಯಾಪ್ ಹೊಸ ಫೀಚರ್ – ಮುಂಚೆಯೇ ಅಂದಾಜಿಸಬಹುದು ಟೋಲ್ ರೇಟ್
ಟೆಕ್ ದೈತ್ಯ ಗೂಗಲ್ ಕಂಪನಿ ತನ್ನ ಗೂಗಲ್ ಮ್ಯಾಪ್ ಅಪ್ಲಿಕೇಷನ್ ಅಲ್ಲಿ ಹೊಸ ಫೀಚರ್ಸ್ ಅನ್ನ ಪರಿಚಯಿಸಿದೆ. ಇದು ಹೆದ್ದಾರಿ ರಸ್ತೆಗಳ ಟೋಲ್ ದರಗಳ ರೋಲ್ ಔಟ್ ತೊರಿಸಲಿದೆ. ಈ ಹೊಸ ಪೀಚರ್ ನಿಂದ ಟ್ರಿಪ್ ಪ್ರಾರಂಭವಾಗುವ ಮೊದಲೇ ಬಳಕೆದಾರರು ತಾವು ತಲುಪಬೇಕಾದ ಸ್ಥಳಕ್ಕೆ ಅಂದಾಜು ಟೋಲ್ ಬೆಲೆಯನ್ನು ಕಂಡುಹಿಡಿಯಬಹುದು.
ಪತ್ರಿಕಾ ಪ್ರಕಟಣೆಯ ಪ್ರಕಾರ, Google ಮ್ಯಾಪ್ ನಿಂದ ಟೋಲ್ ಪಾಸ್, ಪೇಮೆಂಟ್ ಟೈಪ್ ಮತ್ತು ಟೋಲ್ನಲ್ಲಿ ಎಷ್ಟು ಖರ್ಚಾಗಬಹುದು ಎಂಬ ಅಂಶಗಳ ಆಧಾರದ ಮೇಲೆ ನೀವು ಮುಟ್ಟಬೇಕಾದ ಊರಿಗೆ ಒಟ್ಟು ಟೋಲ್ ಬೆಲೆಯನ್ನು ಅಂದಾಜು ಮಾಡಿಕೊಡುತ್ತದೆ.
ಜೊತೆಗೆ ಟೋಲ್ಗಳನ್ನು ಪಾವತಿಸಲು ಬಯಸದೇ ಇರುವವರಿಗೆ Google ಮ್ಯಾಪ್ ಟೋಲ್-ಫ್ರೀ ಮಾರ್ಗದ ಪರ್ಯಾಯ ಆಯ್ಕೆಯನ್ನು ಸಹ ತೋರಿಸುತ್ತದೆ. Google Maps ನಲ್ಲಿ ಮೇಲಿನ ಬಲ ಮೂಲೆಯಲ್ಲಿರುವ ಮೂರು ಚುಕ್ಕೆಗಳ ಮೇಲೆ ಟ್ಯಾಪ್ ಮಾಡುವ ಮೂಲಕ ಮತ್ತು ‘ಟೋಲ್ಗಳನ್ನು ತಪ್ಪಿಸಿ’ ಆಯ್ಕೆ ಮಾಡುವ ಮೂಲಕ ಇದನ್ನು ಪ್ರವೇಶಿಸಬಹುದು.