ಎಚ್ಚರ…! ಫೇಸ್ ಬುಕ್ ಬಳಕೆದಾರರ ಮಾಹಿತಿ ಕದಿಯುತ್ತಿವೆ ಈ 9 ಆಪ್ ಗಳು
ಗೂಗಲ್ ಪ್ಲೇ ಸ್ಟೋರ್ ನಿಂದ ಸುಮಾರು 9 ಆಪ್ ಗಳನ್ನ ಡಿಲೀಟ್ ಮಾಡಿ ಹಾಕಿದೆ.. ಕಾರಣ ಈ ಆಪ್ ಗಳ ಮೂಲಕ ಫೇಸ್ ಬುಕ್ ಬಳಕೆದಾರರ ಮಾಹಿತಿ ಕದಿಯಲಾಗ್ತಿದೆ ಎನ್ನಲಾಗಿದೆ.. ಹೌದು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಫೇಸ್‌ಬುಕ್ ಬಳಕೆದಾರರ ಮಾಹಿತಿ ಕದಿಯುತ್ತಿವೆ ಎನ್ನಲಾದ 9 ಆ್ಯಪ್‌ಗಳನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ತೆಗೆದು ಹಾಕಲಾಗಿದೆ.
ಫೋಟೊ ಎಡಿಟಿಂಗ್, ಜಂಕ್ ಫೈಲ್ ಕ್ಲೀನರ್ಸ್, ಭವಿಷ್ಯ, ಆ್ಯಪ್ ಲಾಕರ್, ಫಿಟ್‌ನೆಸ್ ಮಾನಿಟರ್ ಸೇರಿದಂತೆ ಇನ್ನೂ ಇತರೇ ಸೇವೆಗಳಿಗೆ ಸಂಬಂಧಿಸಿದ ಒಟ್ಟು 9 ಆ್ಯಪ್‌ಗಳು ಡಿಲೀಟ್ ಆಗಿದೆ. ಈ ಆ್ಯಪ್‌ಗಳು ಫೇಸ್‌ಬುಕ್ ಬಳಕೆದಾರರ ಮಾಹಿತಿ ಕದಿಯುತ್ತಿರುವ ಬಗ್ಗೆ ‘ಡಾಕ್ಟರ್ ವೆಬ್’ ವರದಿ ಮಾಡಿತ್ತು. ಇದರ ಬೆನ್ನಲ್ಲೇ ಗೂಗಲ್ ಕ್ರಮ ಕೈಗೊಂಡಿದೆ.
ಬಳಕೆದಾರರ ಮಾಹಿತಿ ಕದಿಯುತ್ತಿವೆ ಎನ್ನಲಾದ ಆ್ಯಪ್‌ಗಳು ಸುಮಾರು 58.5 ಲಕ್ಷಕ್ಕೂ ಹೆಚ್ಚು ಬಾರಿ ಡೌನ್‌ಲೋಡ್ ಆಗಿದ್ದವು. ಈ ಆ್ಯಪ್‌ಗಳು ಬಳಕೆದಾರರಿಗೆ ವಿವಿಧ ರೀತಿಯ ಸೈಬರ್ ಕ್ರೈಮ್ ವಂಚನೆಗಳನ್ನು ಮಾಡುತ್ತಿವೆ ಎನ್ನಲಾಗಿತ್ತು.
ಫೇಸ್ ಬುಕ್ ಮಾಹಿತಿ ಕದಿಯುತ್ತಿದೆ ಎನ್ನಲಾದ ಆಪ್ ಗಳು
ಇನ್‌ವೆಲ್ ಫಿಟ್ನೆಸ್
ಪ್ರಾಸೆಸಿಂಗ್ ಫೋಟೊ
ಪಿಐಪಿ ಫೋಟೊ
ಆ್ಯಪ್ ಲಾಕ್ ಮ್ಯಾನೇಜರ್
ಆ್ಯಪ್ ಕೀ ಲಾಕ್
ಲಾಕ್ ಇಟ್ ಮಾಸ್ಟರ್
ಹೋರೋಸ್ಕೋಪ್ ಡೈಲಿ
ಹೋರೋಸ್ಕೋಪ್ ಪೈ