ಉಕ್ರೇನ್ ಬಿಕ್ಕಟ್ಟು – ರಷ್ಯಾ ದೇಶದ ಯೂಟ್ಯೂಬ್ ಚಾನೆಲ್ ನಿಷೇಧಿಸಿದ ಗೂಗಲ್
ಉಕ್ರೇನ್ ಮೇಲಿನ ದಾಳಿಯ ಹಿನ್ನೆಲೆಯಲ್ಲಿ ಯುರೋಪಿನಾದ್ಯಂತ ರಷ್ಯಾಕ್ಕೆ ಸಂಬಂಧಿಸಿದಂತ ಯು ಟ್ಯೂಬ್ ಚಾನೆಲ್ ಗಳನ್ನು ನಿರ್ಬಂಧಿಸಿರುವುದಾಗಿ ಗೂಗಲ್ ಸಂಸ್ಥೆ ತಿಳಿಸಿದೆ.
ಉಕ್ರೇನ್ ವಿರುದ್ಧ ಯುದ್ಧದ ಹಿನ್ನೆಲೆಯಲ್ಲಿ ರಷ್ಯಾದ ಆರ್ ಟಿ ಬ್ರಾಡ್ ಕಾಸ್ಟರ್, ಸ್ಫುಟ್ನಿಕ್ ನ್ಯೂಸ್ ಚಾನೆಲ್ ಸೇರಿದಂತೆ ಆ ದೇಶದ ಎಲ್ಲಾ ಯು ಟೂಬ್ ಚಾನೆಲ್ ಗಳನ್ನು ನಿರ್ಬಂಧಿಸಿರುವುದಾಗಿ ತಿಳಿಸಿದೆ.
ಉಕ್ರೇನ್ ನಲ್ಲಿ ನಡೆಯುತ್ತಿರುವ ಯುದ್ಧದಿಂದಾಗಿ ಕೂಡಲೇ ಜಾರಿಗೆ ಬರುವಂತೆ ರಷ್ಯಾಕ್ಕೆ ಸಂಬಂಧಿಸಿದ ಆರ್ ಟಿ ಮತ್ತು ಸ್ಫುಟಿಕ್ ಯೂ ಟೂಬ್ ಚಾನೆಲ್ ಗಳನ್ನು ಯುರೋಪಿನಾದ್ಯಂತ ನಿರ್ಬಂಧಿಸಲಾಗಿದೆ. ರಷ್ಯಾ ಉಕ್ರೇನ್‌ನಲ್ಲಿ ವಿಧ್ವಂಸಕತೆಯನ್ನು ಸೃಷ್ಟಿಸಲು ಅಪಾಯಕಾರಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಉಕ್ರೇನ್ ನಲ್ಲಿರುವ ಯುಎಸ್ ರಾಯಭಾರ ಕಚೇರಿಯ ಮೇಲೆ ರಷ್ಯಾ ನಿರ್ವಾತ (ವಾಕ್ಯೂಂ) ಬಾಂಬ್‌ಗಳನ್ನು ಬೀಳಿಸುವ ಮೂಲಕ ವಿನಾಶವನ್ನು ಉಂಟುಮಾಡುತ್ತಿದೆ.